IND VS SL: ಕೊರೊನಾ ಕಾರಣ ಭಾರತ-ಶ್ರೀಲಂಕಾ ಸರಣಿ ಮೇಲೆ ಬಿತ್ತು ಬ್ರೇಕ್! ಇಲ್ಲಿದೆ ಹೊಸ ಶೆಡ್ಯೂಲ್!

India vs Sri Lanka ODI Series - ಶ್ರೀಲಂಕಾ ತಂಡದ ಇಬ್ಬರು ಸಹಾಯಕ ಸಿಬ್ಬಂದಿಗಳು ಕೊರೊನಾ ಸೋಂಕಿಗೆ ಗುರಿಯಾದ ಬಳಿದ ಇದೀಗ ಭಾರತ-ಶ್ರೀಲಂಕಾ ನಡುವೆ ಜುಲೈ 13 ರಿಂದ ಆರಂಭವಾಗಬೇಕಿದ್ದ ಸರಣಿಯನ್ನು ರೀಶೆಡ್ಯೂಲ್ ಮಾಡಲಾಗುತ್ತಿದೆ ಎನ್ನಲಾಗಿದೆ. ಇದೀಗ ಸರಣಿ ಜುಲೈ 17 ಅಥವಾ 18 ರಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ.

Written by - Nitin Tabib | Last Updated : Jul 9, 2021, 09:15 PM IST
  • ಕೊರೊನಾ ಕಾರಣ ಭಾರತ ಹಾಗೂ ಶ್ರೀಲಂಕಾ ನಡುವಿನ ಸರಣಿ ನಿಗದಿತ ದಿನಾಂಕಕ್ಕೆ ಆರಂಭಗೊಳ್ಳುತ್ತಿಲ್ಲ ಎನ್ನಲಾಗಿದೆ
  • ಭಾರತ-ಶ್ರೀಲಂಕಾ ನಡುವೆ ಜುಲೈ 13 ರಿಂದ ಆರಂಭವಾಗಬೇಕಿದ್ದ ಸರಣಿಯನ್ನು ರೀಶೆಡ್ಯೂಲ್ ಮಾಡಲಾಗುತ್ತಿದೆ ಎನ್ನಲಾಗಿದೆ.
  • ಇದೀಗ ಸರಣಿ ಜುಲೈ 17 ಅಥವಾ 18 ರಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ.
IND VS SL: ಕೊರೊನಾ ಕಾರಣ ಭಾರತ-ಶ್ರೀಲಂಕಾ ಸರಣಿ ಮೇಲೆ ಬಿತ್ತು ಬ್ರೇಕ್! ಇಲ್ಲಿದೆ ಹೊಸ ಶೆಡ್ಯೂಲ್!   title=
India Vs Sri Lanka Series (File Photo)

ನವದೆಹಲಿ : India vs Sri Lanka ODI Series - ಕೊರೊನಾ ಕಾರಣ ಭಾರತ ಹಾಗೂ ಶ್ರೀಲಂಕಾ ನಡುವಿನ ಸರಣಿ ನಿಗದಿತ ದಿನಾಂಕಕ್ಕೆ ಆರಂಭಗೊಳ್ಳುತ್ತಿಲ್ಲ ಎನ್ನಲಾಗಿದೆ. ಶ್ರೀಲಂಕಾ ತಂಡದ ಡಾಟಾ ಎನಾಲಿಸ್ಟ್ ಹಾಗೂ ಬ್ಯಾಟಿಂಗ್ ಕೋಚ್ ಕೊರೊನಾ ಸೋಂಕಿಗೆ (Coronavirus) ಗುರಿಯಾಗಿದ್ದಾರೆ. ಹೀಗಿರುವಾಗ ಸರಣಿಯ ಕಾರ್ಯಸೂಚಿಯನ್ನು ರೀಶೆಡ್ಯೂಲ್ ಮಾಡಲಾಗುತ್ತಿದೆ. ಈ ಪ್ರವಾಸದಲ್ಲಿ ಟೀಂ ಇಂಡಿಯಾ (Team India) ಮೂರು ಏಕದಿನ ಹಾಗೂ ಮೂರು ಟಿ20 ಮ್ಯಾಚ್ ಸರಣಿ ನಡೆಯಬೇಕಿದೆ. ಶಿಖರ್ ಧವನ್ (Shikhar Dhawan) ನೇತೃತ್ವದಲ್ಲಿ ಜ್ಯೂನಿಯರ್ ತಂಡ ಈಗಾಗಲೇ ಸರಣಿ ಆಡಲು ತಲುಪಿದೆ. 

Crickbuzz ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಶ್ರೀಲಂಕಾ ಕ್ರಿಕೆಟ್ ನಿಯಂತ್ರಣ ಮಂಡಳಿ ಶನಿವಾರ ಸರಣಿಯ ಹೊಸ ಶೆಡ್ಯೂಲ್ ಪ್ರಕಟಿಸುವ ಸಾಧ್ಯತೆ ಇದೆ. ಈ ಕುರಿತು ಶುಕ್ರವಾರ ಮಾಹಿತಿ ನೀಡಿರುವ ಮಂಡಳಿ, ತಂಡದ ಡಾಟಾ ಎನಾಲಿಸ್ಟ್ ಜಿಟಿ ನಿರೋಶನ್ (GT Niroshan)  ವರದಿ ಸಕಾರಾತ್ಮಕ ಹೊರಬಂದಿದೆ ಎಂದು ಹೇಳಿದೆ. ಇದಕ್ಕೂ ಮೊದಲು ಬ್ಯಾಟಿಂಗ್ ಕೋಚ್ ಗ್ರಾಂಟ್ ಫ್ಲವರ್ (Grant Flower) ಕೊರೊನಾ ಸೋಂಕಿಗೆ (Covid-19) ಗುರಿಯಾಗಿದ್ದಾರೆ. ಇಂಗ್ಲೆಂಡ್ ನಿಂದ ಮರಳಿರುವ ತಂಡದ ಹಲವು ಆಟಗಾರರು ಸದ್ಯ ಕ್ವಾರಂಟೀನ್ ನಲ್ಲಿದ್ದಾರೆ. 

ಇದನ್ನೂ ಓದಿ-India vs SL 2021: ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಕೊರೊನಾ ಕರಿನೆರಳು...!

ಜುಲೈ 17 ರಿಂದ ಸರಣಿ ಆರಂಭವಾಗುವ ಸಾಧ್ಯತೆ
Crickinfo ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ಪಂದ್ಯಗಳು ಜುಲೈ 17, ಜುಲೈ 19 ಹಾಗೂ ಜುಲೈ 21ರಂದು ನಡೆಯುವ ಸಾಧ್ಯತೆ ಇದೆ. ಇನ್ನೊಂದೆಡೆ ಟಿ-20 ಪಂದ್ಯಗಳು ಜುಲೈ 24, ಜುಲೈ 25 ಹಾಗೂ ಜುಲೈ 27 ರಂದು ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಕ್ಕೂ ಮೊದಲು ಸರಣಿಯ ಮೊದಲ ಪಂದ್ಯ ಜುಲೈ 13ರಂದು ನಡೆಯಬೇಕಿತ್ತು ಮತ್ತು ಕೊನೆಯ ಪಂದ್ಯ ಜುಲೈ 25ರಂದು ನಡೆಯಬೇಕಿತ್ತು. ಆದರೆ, ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ BCCI ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ತನ್ನ ಸಂಪೂರ್ಣ ಸಾಥ್ ನೀಡಿದೆ. ಕೊರೊನಾ ಪ್ರಕರಣಗಳು ಕಂಡುಬಂದಿದ್ದರೂ ಕೂಡ BCCI ಸರಣಿಯನ್ನು ರದ್ದುಗೊಳಿಸಿಲ್ಲ. 

ಇದನ್ನೂ ಓದಿ-"ರಾಹುಲ್ ದ್ರಾವಿಡ್ ಭಾರತ ಕ್ರಿಕೆಟ್ ತಂಡಕ್ಕೆ ಪೂರ್ಣಾವಧಿ ಕೋಚ್ ಆಗಬಾರದು"

ಪ್ರತಿ ಪಂದ್ಯಕ್ಕೆ ಶ್ರೀಲಂಕಾ ಮಂಡಳಿಗೆ 15 ಕೋಟಿ ಸಿಗಲಿವೆ 
ಕೊರೊನಾ ಕಾರಣ ಎಲ್ಲಾ ದೇಶಗಳ ಕ್ರಿಕೆಟ್ ನಿಯಂತ್ರಣ ಮಂಡಳಿಗಳ ಮೇಲೆ ಭಾರಿ ಒತ್ತಡ ಬಿದ್ದಿದೆ. ಶ್ರೀಲಂಕಾ ಸರಣಿ ಆತಿಥ್ಯ ವಹಿಸಿಕೊಂಡಿರುವ ಮಂಡಳಿಗೆ ಭಾರಿ ಮಹತ್ವದ್ದಾಗಿದೆ. ಸರಣಿಯ ಪ್ರತಿಯೊಂದು ಪಂದ್ಯದಿಂದ ಶ್ರೀಲಂಕಾ ಮಂಡಳಿಗೆ 15 ಕೋಟಿ ರೂ. ಆದಾಯ ಹರಿದುಬರಲಿದೆ. ಅಂದರೆ, ಸಂಪೂರ್ಣ ಸರಣಿಯಿಂದ ಮಂಡಳಿ 90 ಕೋಟಿ ರೂ.ಗಳಿಕೆ ಮಾಡಲಿದೆ. ಭಾರತೀಯ ಕ್ರಿಕೆಟ್ ತಂಡದ ಹಿರಿಯ ಆಟಗಾರರು ಪ್ರಸ್ತುತ ಇಂಗ್ಲೆಂಡ್ ಸರಣಿಗೆ ತೆರಳಿದ್ದಾರೆ. ಆದರೆ, ಈ ಸರಣಿಗಾಗಿ ಟೀಂ ಇಂಡಿಯಾ ಜ್ಯೂನಿಯರ್ ಆಟಗಾರರನ್ನು ಕಳುಹಿಸಲಾಗಿದೆ. ರಾಹುಲ್ ದ್ರಾವಿಡ್ ಟೀಂ ಇಂಡಿಯಾಗೆ ಕೋಚ್ ಆಗಿದ್ದಾರೆ. 

ಇದನ್ನೂ ಓದಿ-Indian Players: ಏಕದಿನ ಪಂದ್ಯಗಳಲ್ಲಿ ಎಂದಿಗೂ ಔಟ್ ಆಗದ ಮೂರು ಭಾರತೀಯ ಬ್ಯಾಟ್ಸ್‌ಮನ್‌ಗಳಿವರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News