Rohit Sharma : ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮತ್ತು ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ರೋಹಿತ್ ಶರ್ಮಾ ಕ್ರಿಕೆಟ್ ಲೋಕಕ್ಕೆ ಬಂಡ ಇಂದಿಗೆ ಸರಿಯಾಗಿ 15 ವರ್ಷ ಪೂರೈಸಿದ್ದಾರೆ. ಈ ಬಗ್ಗೆ ಹಿಟ್ ಮ್ಯಾನ್ ಟ್ವಿಟ್ಟರ್ ನಲ್ಲಿ ತಮ್ಮ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರವುಂದನ್ನ ಬರೆದು ಹಂಚಿಕೊಂಡಿದ್ದಾರೆ.
ರೋಹಿತ್ ನಡೆದು ಬಂಡ ದಾರಿ..!
ರೋಹಿತ್ ಶರ್ಮಾ 23 ಜೂನ್ 2007 ರಂದು ಐರ್ಲೆಂಡ್ ವಿರುದ್ಧ ಮ್ಯಾಚ್ ನಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದರು. ಚೊಚ್ಚಲ ಪಂದ್ಯದ ನಂತರ ರೋಹಿತ್ ಶರ್ಮಾ ಹಿಂತಿರುಗಿ ನೋಡಲೇ ಇಲ್ಲ. ಬೌಲರ್‌ಗಳು ಇವರ ಹೆಸರು ಕೇಳಿದ್ರೆ ಹೆದರುತ್ತಾರೆ ಅಷ್ಟರಮಟ್ಟಿಗೆ ಹಿಟ್ ಶಾಟ್ ಹೊಡೆಯುವುದರಲ್ಲಿ ಬಲಶಾಲಿ. ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಬಂದು 15 ವರ್ಷಗಳನ್ನು ಪೂರೈಸಿದ್ದಕ್ಕಾಗಿ, ರೋಹಿತ್ ಶರ್ಮಾ ಟ್ವಿಟರ್‌ನಲ್ಲಿ ಭಾವನಾತ್ಮಕ ಪೋಸ್ಟ್ ಅನ್ನು ಬರೆದಿದ್ದಾರೆ. ಎಲ್ಲರಿಗೂ ನಮಸ್ಕಾರ, ಟೀಂ ಇಂಡಿಯಾ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಾನು ಪಾದಾರ್ಪಣೆ ಇಂದಿಗೆ 15 ವರ್ಷಗಳನ್ನು ಪೂರೈಸುತ್ತಿದ್ದೇನೆ. ಇದು ನನ್ನ ಜೀವನದುದ್ದಕ್ಕೂ ನಾನು ಮರೆಯಲಾಗದ ಪ್ರಯಾಣವಾಗಿದೆ ಎಂದಿದ್ದಾರೆ.
ಇದನ್ನೂ ಓದಿ : Kapil Dev : ವಿರಾಟ್ ಕೊಹ್ಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಪಿಲ್ ದೇವ್!
'ಧನ್ಯವಾದ' ತಿಳಿಸಿದ ರೋಹಿತ್
ಈ ಪ್ರಯಾಣದ ಭಾಗವಾಗಿರುವ ಎಲ್ಲರಿಗೂ ನಾನು ಧನ್ಯವಾದಗಳು. ನಾನು ಇಂದು ಆಟಗಾರನಾಗಲು ಸಹಾಯ ಮಾಡಿದವರಿಗೆ ವಿಶೇಷ ಧನ್ಯವಾದಗಳು. ನನಗೆ ಪ್ರೀತಿ ಮತ್ತು ಬೆಂಬಲ ನೀಡಿದ ಎಲ್ಲಾ ಅಭಿಮಾನಿಗಳು, ಕ್ರಿಕೆಟ್ ಪ್ರೇಮಿಗಳು ಮತ್ತು ವಿಮರ್ಶಕರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
𝟭𝟱 𝘆𝗲𝗮𝗿𝘀 in my favourite jersey 👕 pic.twitter.com/ctT3ZJzbPc
— Rohit Sharma (@ImRo45) June 23, 2022
ತಮ್ಮ ಕೈಚಳಕ ತೋರಿದ್ದ ರೋಹಿತ್
ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್ ಹೊಂದಿದ್ದಾರೆ. ಶ್ರೀಲಂಕಾ ವಿರುದ್ಧದ ಮ್ಯಾಚ್ ನಲ್ಲಿ 264 ರನ್ ಗಳಿಸಿದ್ದರು. ಹಾಗೆ, ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕಗಳನ್ನು ಗಳಿಸಿದ ಏಕೈಕ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ನಾಲ್ಕು ಶತಕಗಳನ್ನು ಬಾರಿಸಿದ್ದಾರೆ. ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸುತ್ತಿದ್ದಾರೆ.
ಟೀಂ ಇಂಡಿಯಾದ ಎಲ್ಲಾ ಮೂರು ಮಾದರಿಗಳನ್ನು ಆಡಿದ ರೋಹಿತ್
ರೋಹಿತ್ ಶರ್ಮಾ ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತಕ್ಕೆ ಪ್ರಮುಖ ಆಟಗಾರನಾಗಿದ್ದರೆ. ರೋಹಿತ್ 45 ಟೆಸ್ಟ್ ಪಂದ್ಯಗಳಲ್ಲಿ 8 ಶತಕಗಳ ಆಧಾರದ ಮೇಲೆ 3137 ರನ್ ಗಳಿಸಿದ್ದಾರೆ. ಹಾಗೆ, 230 ODIಗಳಲ್ಲಿ 9283 ರನ್ ಗಳಿಸಲಾಗಿದೆ, ಇದರಲ್ಲಿ 29 ಶತಕಗಳು ಸೇರಿವೆ. ಟಿ20 ಕ್ರಿಕೆಟ್‌ನಲ್ಲಿ ರೋಹಿತ್ 3313 ರನ್ ಗಳಿಸಿದ್ದಾರೆ.
ಇದನ್ನೂ ಓದಿ : ವಿರಾಟ್ ಕೊಹ್ಲಿ ಫಾರ್ಮ್ ಕಳೆದುಕೊಳ್ಳಲು ರವಿಶಾಸ್ತ್ರಿ ಕಾರಣ ಎಂದ ಈ ಆಟಗಾರ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.