Kapil Dev : ವಿರಾಟ್ ಕೊಹ್ಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಪಿಲ್ ದೇವ್!

ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಮ್ಯಾಚ್ ಗಳಲ್ಲಿ ಟಿ20 ಅಂತಾರಾಷ್ಟ್ರೀಯ ಸರಣಿಯಲ್ಲಿ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ಈಗ ವಿರಾಟ್ ಕೊಹ್ಲಿ ಜುಲೈ 1 ರಿಂದ ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ.

Written by - Channabasava A Kashinakunti | Last Updated : Jun 23, 2022, 01:09 PM IST
  • ಇದಕ್ಕೆ ಕೊಹ್ಲಿ ಮೇಲೆ ಕೋಪಗೊಂಡ ಕಪಿಲ್ ದೇವ್!
  • 'ಎಲ್ಲವೂ ಮೌನವಾಗಿರಲು ನಿರೀಕ್ಷಿಸಬೇಡಿ'
  • 'ನನಗೆ ದುಃಖವಾಗುತ್ತಿದೆ'
Kapil Dev : ವಿರಾಟ್ ಕೊಹ್ಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಪಿಲ್ ದೇವ್! title=

Virat Kohli : ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮೂರು ವರ್ಷಗಳಿಂದ ಶತಕ ಸಿಡಿಸಿದ್ದರು. ಆದ್ರೆ, ಅಂತರಾಷ್ಟ್ರೀಯ ಕ್ರಿಕೆಟ್ ಅಥವಾ ಐಪಿಎಲ್ ನಲ್ಲಿ ಕೊಹ್ಲಿಯ ಬ್ಯಾಟ್ ನಿಂದ ರನ್ ಗಳ ಹೋಲ್ ಹರಿಯಲಿಲ್ಲ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಮ್ಯಾಚ್ ಗಳಲ್ಲಿ ಟಿ20 ಅಂತಾರಾಷ್ಟ್ರೀಯ ಸರಣಿಯಲ್ಲಿ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ಈಗ ವಿರಾಟ್ ಕೊಹ್ಲಿ ಜುಲೈ 1 ರಿಂದ ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ.

ಇದಕ್ಕೆ ಕೊಹ್ಲಿ ಮೇಲೆ ಕೋಪಗೊಂಡ ಕಪಿಲ್ ದೇವ್!

ಈ ಮಹತ್ವದ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳು ಎದ್ದಿವೆ. ಭಾರತದ ಮಾಜಿ ನಾಯಕ ಕಪಿಲ್ ದೇವ್ ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ವಿರಾಟ್ ಕೊಹ್ಲಿಯನ್ನು ವ್ಯಂಗ್ಯವಾಡಿದ ಕಪಿಲ್ ದೇವ್, ನಿಮ್ಮ ಪ್ರದರ್ಶನ ಉತ್ತಮವಾಗಿರದಿದ್ದರೆ ಜನ ಸುಮ್ಮನಿರುತ್ತಾರೆ ಎಂದು ನಿರೀಕ್ಷಿಸಬೇಡಿ ಎಂದು ಹೇಳಿದ್ದಾರೆ.

ಇದನ್ನೂ ಓದಿ : ವಿರಾಟ್ ಕೊಹ್ಲಿ ಫಾರ್ಮ್ ಕಳೆದುಕೊಳ್ಳಲು ರವಿಶಾಸ್ತ್ರಿ ಕಾರಣ ಎಂದ ಈ ಆಟಗಾರ..!

'ಎಲ್ಲವೂ ಮೌನವಾಗಿರಲು ನಿರೀಕ್ಷಿಸಬೇಡಿ'

ಅನ್‌ಕಟ್‌ನಲ್ಲಿ ನಡೆದ ಸಂಭಾಷಣೆಯಲ್ಲಿ ಮಾತನಾಡಿದ ಕಪಿಲ್ ದೇವ್, 'ನೀವು ರನ್ ಗಳಿಸದಿದ್ದರೆ, ಎಲ್ಲೋ ಏನೋ ತಪ್ಪಾಗಿದೆ ಎಂದು ಜನರು ಭಾವಿಸುತ್ತಾರೆ. ಜನರು ನಿಮ್ಮ ಕಾರ್ಯಕ್ಷಮತೆಯನ್ನು ಮಾತ್ರ ವೀಕ್ಷಿಸುತ್ತಾರೆ. ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿರದಿದ್ದರೆ ಜನರು ಮೌನವಾಗಿರುತ್ತಾರೆ ಎಂದು ನಿರೀಕ್ಷಿಸಬೇಡಿ. ನಿಮ್ಮ ಬ್ಯಾಟ್ ಮತ್ತು ಪ್ರದರ್ಶನ ಮಾತನಾಡಬೇಕು ಎಂದು ಕೊಹ್ಲಿ ಮೇಲೆ ಗುಡುಗಿದ್ದಾರೆ.

'ನನಗೆ ದುಃಖವಾಗುತ್ತಿದೆ'

ವಿರಾಟ್ ಕೊಹ್ಲಿಯಂತಹ ದೊಡ್ಡ ಆಟಗಾರ ಶತಕಕ್ಕಾಗಿ ಕಾಯುತ್ತಿರುವುದನ್ನು ನೋಡಿದರೆ ನೋವಾಗುತ್ತದೆ. ವಿರಾಟ್ ಕೊಹ್ಲಿ ನಮಗೆ ಹೀರೋ ಇದ್ದಂತೆ. ಇಂದು ವಿರಾಟ್ ಕೊಹ್ಲಿಯನ್ನು ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ವೀರೇಂದ್ರ ಸೆಹ್ವಾಗ್ ಅವರೊಂದಿಗೆ ಇವರನ್ನು ಹೋಲಿಸಲಾಗಿದೆ, ಆದರೆ ಇಂತಹ ಆಟಗಾರ ನಮಗೆ ಸಿಗುತ್ತಾನೆ  ಎಂದು ನಾವು ಎಂದಿಗೂ ಯೋಚಿಸಿರಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : 'ಗುಡ್ ಫ್ರೆಂಡ್' ಕ್ರಿಸ್ ಗೇಲ್ ಭೇಟಿ ಮಾಡಿದ ಉದ್ಯಮಿ ವಿಜಯ್ ಮಲ್ಯ

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News