T20 WC: ಟಿ20 ವಿಶ್ವಕಪ್’ಗೆ ಭಾರತ ತಂಡ… ಅಂದು ಏಕದಿನದಲ್ಲಿ ಮಿಂಚಿದ್ದ ಮೂವರು ಸ್ಟಾರ್ ಆಟಗಾರರಿಗಿಲ್ಲ ಸ್ಥಾನ!

India’s Probable Squad for T20 World Cup: ಟಿ20 ವಿಶ್ವಕಪ್’ನಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ. ಅವರ ಸ್ಥಾನಮಾನ ಮತ್ತು ನಿಲುವನ್ನು ಪರಿಗಣಿಸಿ ನಾಯಕತ್ವವನ್ನು ಅವರ ಬಳಿಯೇ ಉಳಿಸುವ ಸಾಧ್ಯತೆಯಿದೆ. ಇನ್ನೊಂದೆಡೆ ರೋಹಿತ್ ಜೊತೆ ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ ಬ್ಯಾಟ್ ಬೀಸುವ ಸಾಧ್ಯತೆ ಇದೆ.

Written by - Bhavishya Shetty | Last Updated : Mar 2, 2024, 06:13 PM IST
    • ಬಹುನಿರೀಕ್ಷಿತ T20 ವಿಶ್ವಕಪ್ 2024 ಜೂನ್‌’ನಲ್ಲಿ ಪ್ರಾರಂಭ
    • 2024ರ ಟಿ20 ವಿಶ್ವಕಪ್‌’ಗೆ ಭಾರತದ ಸಂಭಾವ್ಯ ತಂಡ
    • ಟಿ20 ವಿಶ್ವಕಪ್’ನಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ
T20 WC: ಟಿ20 ವಿಶ್ವಕಪ್’ಗೆ ಭಾರತ ತಂಡ… ಅಂದು ಏಕದಿನದಲ್ಲಿ ಮಿಂಚಿದ್ದ ಮೂವರು ಸ್ಟಾರ್ ಆಟಗಾರರಿಗಿಲ್ಲ ಸ್ಥಾನ! title=
India’s Probable Squad for T20 World Cup

India’s Probable Squad for T20 World Cup: ಬಹುನಿರೀಕ್ಷಿತ T20 ವಿಶ್ವಕಪ್ 2024 ಜೂನ್‌’ನಲ್ಲಿ ಪ್ರಾರಂಭವಾಗಲಿದೆ, ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ಬೆನ್ನಲ್ಲೇ ಕ್ರೀಡಾ ಪ್ರೇಮಿಗಳಿಗೆ ಮತ್ತಷ್ಟು ಮನರಂಜನೆ ನೀಡಲು ವಿಶ್ವಕಪ್ ಬರಲಿದೆ. ಅಂದಹಾಗೆ ಕೆಲ ವರದಿಗಳ ಪ್ರಕಾರ, ಭಾಗವಹಿಸುವ ತಂಡಗಳು ಮೇ 1 ರೊಳಗೆ ಮಾರ್ಕ್ಯೂ ಈವೆಂಟ್‌’ಗಾಗಿ ತಮ್ಮ ತಂಡಗಳನ್ನು ಅಂತಿಮಗೊಳಿಸಬೇಕಾಗಿದೆ.

2024ರ ಟಿ20 ವಿಶ್ವಕಪ್‌’ಗೆ ಭಾರತದ ಸಂಭಾವ್ಯ ತಂಡ

ಟಿ20 ವಿಶ್ವಕಪ್’ನಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ. ಅವರ ಸ್ಥಾನಮಾನ ಮತ್ತು ನಿಲುವನ್ನು ಪರಿಗಣಿಸಿ ನಾಯಕತ್ವವನ್ನು ಅವರ ಬಳಿಯೇ ಉಳಿಸುವ ಸಾಧ್ಯತೆಯಿದೆ. ಇನ್ನೊಂದೆಡೆ ರೋಹಿತ್ ಜೊತೆ ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ ಬ್ಯಾಟ್ ಬೀಸುವ ಸಾಧ್ಯತೆ ಇದೆ.

ಇದನ್ನೂ ಓದಿ:7th Pay commission:ಸರ್ಕಾರಿ ನೌಕರರಿಗೆ ಬಂಪರ್! ಈ ತಿಂಗಳಲ್ಲಿಯೇ ಖಾತೆ ಸೇರಲಿದೆ ಬಹು ದೊಡ್ಡ ಮೊತ್ತ 

ಈ ಮಧ್ಯೆ, ಶುಭ್ಮನ್ ಗಿಲ್ ಅವಕಾಶ ಪಡೆಯುವ ಅನುಮಾನವಿದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ T20Iನಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ಗಿಲ್, ವೆಸ್ಟ್ ಇಂಡೀಸ್ ಪ್ರವಾಸ ಸರಣಿಯ ನಂತರ, ಎಂಟು ಇನ್ನಿಂಗ್ಸ್‌’ಗಳಲ್ಲಿ 16.625 ರ ಸಾಧಾರಣ ಸರಾಸರಿಯಲ್ಲಿ ಕೇವಲ 133 ರನ್‌’ಗಳನ್ನು ಗಳಿಸಿದ್ದರು. ಒಂದು ವೇಳೆ ಮುಂಬರುವ ಐಪಿಎಲ್ 2024 ರಲ್ಲಿ ಅದ್ಭುತ ಪ್ರದರ್ಶನ ನೀಡಿದರೆ ಟೀಂ ಇಂಡಿಯಾಗೆ ವೈಲ್ಡ್ ಕಾರ್ಡ್ ಪ್ರವೇಶವನ್ನು ಪಡೆಯಬಹುದು.

ಇನ್ನು ಪ್ರಮುಖ ಬ್ಯಾಟರ್‌’ಗಳಾದ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಗ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಇವರ ಜೊತೆಗೆ ಹಾರ್ದಿಕ್ ಪಾಂಡ್ಯ, ಭಾರತದ ಪ್ರಮುಖ ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿ ವಿಶ್ವಕಪ್ ಆಡಲಿದ್ದಾರೆ.

ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಪ್ರಮುಖ ಸೀಮರ್‌’ಗಳಾಗಿ ಆಯ್ಕೆ ಮಾಡುವ ಸಾಧ್ಯತೆಯಿದೆ, ಕುಲದೀಪ್ ಯಾದವ್ ಮತ್ತು ರವಿ ಬಿಷ್ಣೋಯ್ ಅವರ ಡೆಡ್ಲಿ ಜೋಡಿ ಅಕ್ಷರ್ ಪಟೇಲ್ ಜೊತೆಗೆ ಸ್ಪಿನ್ ವಿಭಾಗವನ್ನು ಮುನ್ನಡೆಸುತ್ತದೆ.

ಇನ್ನುಳಿದಂತೆ, ರುತುರಾಜ್ ಗಾಯಕ್ವಾಡ್ ಅವರನ್ನು ಆರಂಭಿಕ ಸ್ಥಾನದಲ್ಲಿ ಮೂರನೇ ಆಯ್ಕೆಯಾಗಿ ಇಡಬಹುದು. ಇನ್ನೊಂದೆಡೆ ಈ ಸ್ಥಾನಕ್ಕೆ ಶಿವಂ ದುಬೆ ಮತ್ತು ಅರ್ಷ್‌ದೀಪ್ ಸಿಂಗ್ ಕೂಡ ಪೈಪೋಟಿ ನೀಡುವ ಸಾಧ್ಯತೆ ಇದೆ.

ಹೆಚ್ಚುವರಿ ಬ್ಯಾಟರ್ ಸ್ಲಾಟ್‌’ನಲ್ಲಿ ತಿಲಕ್ ವರ್ಮಾ ಮತ್ತು ಸಂಜು ಸ್ಯಾಮ್ಸನ್ ನಡುವೆ ಕಠಿಣ ಪೈಪೋಟಿ ಇದ್ದು, ತಂಡದ ಮ್ಯಾನೇಜ್‌ಮೆಂಟ್ ವಿಕೆಟ್ ಕೀಪಿಂಗ್ ಕೌಶಲ್ಯವನ್ನು ಪರಿಗಣಿಸಿ, ಇವರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಸಂಭವವಿದೆ.

ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಆಡುವಂತೆ ಮನವಿ ಮಾಡಿದ್ದ ಬಿಸಿಸಿಐ: ಇಶಾನ್ ಕೊಟ್ಟ ಉತ್ತರ ಹೀಗಿತ್ತು…

ಭಾರತದ ಸಂಭಾವ್ಯ ತಂಡ

ರೋಹಿತ್ ಶರ್ಮಾ (ನಾ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಜಿತೇಶ್ ಶರ್ಮಾ, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ರುತುರಾಜ್ ಗಾಯಕ್ವಾಡ್, ಶಿವಂ ದುಬೆ, ರವಿ ಬಿಷ್ಣೋಯಿ, ಸಂಜು ಸ್ಯಾಮ್ಸನ್/ತಿಲಕ್ ವರ್ಮಾ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News