ಕಾರು ಅಪಘಾತ: ಅಪಾಯದಿಂದ ಪಾರಾದ ಅಂತಾರಾಷ್ಟ್ರೀಯ ಅಥ್ಲೀಟ್ ಟಿ.ಅರ್ಜುನ್ ದೇವಯ್ಯ

ಮಡಿಕೇರಿಯಿಂದ ಮೈಸೂರಿಗೆ ಆಗಮಿಸುತ್ತಿದ್ದ ವೇಳೆ ಈ ಕಾರು ಅಪಘಾತ ಸಂಭವಿಸಿದೆ.

Last Updated : Nov 27, 2018, 11:02 AM IST
ಕಾರು ಅಪಘಾತ: ಅಪಾಯದಿಂದ ಪಾರಾದ ಅಂತಾರಾಷ್ಟ್ರೀಯ ಅಥ್ಲೀಟ್ ಟಿ.ಅರ್ಜುನ್ ದೇವಯ್ಯ  title=
Pic: Youtube

ಮೈಸೂರು: ಮೈಸೂರು ಜಿಲ್ಲೆ ಬಿಳಿಕೆರೆ ಸಮೀಪ‌ ಅಂತಾರಾಷ್ಟ್ರೀಯ ಅಥ್ಲೀಟ್ ಟಿ.ಅರ್ಜುನ್ ದೇವಯ್ಯ ಕಾರು ಅಪಘಾತಕ್ಕೀಡಾಗಿದ್ದು ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಮಡಿಕೇರಿಯಿಂದ ಮೈಸೂರಿಗೆ ಆಗಮಿಸುತ್ತಿದ್ದ ವೇಳೆ ಇಂದು ಬೆಳಿಗ್ಗೆ ಮೈಸೂರು ಜಿಲ್ಲೆ ಬಿಳಿಕೆರೆ ಸಮೀಪ‌ ಈ ಅಪಘಾತ ಸಂಭವಿಸಿದ್ದು ಘಟನೆಯಲ್ಲಿ  ಅಥ್ಲೀಟ್  ಅರ್ಜುನ್ ದೇವಯ್ಯ, ಪತ್ನಿ ದಿವ್ಯಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

ಈ ಕುರಿತು ಬಿಳಿಕೆರೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 
 

Trending News