ಐಪಿಎಲ್ 2018 : ಕೊಲ್ಕತ್ತಾಗೆ ಚಾಲೆಂಜ್ ಆಗದ ಬೆಂಗಳೂರು

     

Last Updated : Apr 9, 2018, 12:35 PM IST
ಐಪಿಎಲ್ 2018 : ಕೊಲ್ಕತ್ತಾಗೆ ಚಾಲೆಂಜ್ ಆಗದ ಬೆಂಗಳೂರು

ಕೊಲ್ಕತ್ತಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀಡಿದ 176 ರನ್ ಗಳ ಮೇಲೆ ಸುಲಭವಾಗಿ ಸವಾರಿ ಮಾಡಿದ ಕೊಲ್ಕತ್ತಾ ತಂಡವು ತನ್ನ ತವರಿನಲ್ಲಿ ಮೊದಲ ಗೆಲುವಿನೊಂದಿಗೆ ತನ್ನ ಖಾತೆಯನ್ನು ತೆರೆದಿದೆ.

ಮೊದಲು ಬ್ಯಾಟ್ ಮಾಡಿದ ಬೆಂಗಳೂರು ತಂಡವು 7 ವಿಕೆಟ್ ನಷ್ಟಕ್ಕೆ 20 ಓವರ್ ಓವರ್ ಗಳಲ್ಲಿ 176 ರನ್ ಗಳಿಸಿತು. ಬ್ರೆಂಡನ್ ಮೆಕ್ಲಂ(43) ಎಬಿಡಿವಿಲಿಯರ್ಸ್(44) ಮತ್ತು ಮನದೀಪ್ ಸಿಂಗ್ ಅವರ ತಂಡದ ಉತ್ತಮ ಮೊತ್ತಕ್ಕೆ ಸಹಾಯ ನೀಡಿದರು.

ಆದರೆ ಈ ಮೊತ್ತವನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡೆರ್ಸ್ ಸುನಿಲ್ ನರೈನ್ ರವರ ಭರ್ಜರಿ ಅರ್ಧಶತಕದ ನೆರವಿನಿಂದ ತಂಡವನ್ನು ಗೆಲುವಿನ ತಡ ಸೇರಿಸುವಲ್ಲಿ ಕಾಣಿಕೆ ನೀಡಿದರು, ಕೇವಲ 19 ಎಸೆತಗಳಲ್ಲಿ  5 ಸಿಕ್ಸರ್ ಮತ್ತು 4 ಬೌಂಡರಿ ಗಳ ನೆರವಿನಿಂದ 50 ರನ್ ಪೂರೈಸಿದರು.ಇವರ ಜೊತೆಗೆ ದಿನೇಶ್ ಕಾರ್ತಿಕ್(35) ಮತ್ತು ನಿತೀಶ್ ರಾಣಾ(34) ಕೂಡಾ  ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಕೊಲ್ಕತಾ ತಂಡವು 18.5 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿತು. 

More Stories

Trending News