IPL 2021 2nd Phase: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2021 ರ ಎರಡನೇ ಹಂತದ (2nd Phase) ಪಂದ್ಯಗಳು ಖಾಲಿ ಕ್ರೀಡಾಂಗಣದಲ್ಲಿ ನಡೆಯುವುದಿಲ್ಲ. ಸೆಪ್ಟೆಂಬರ್ 19 ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ (Mumbai Indians) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ನಡುವಿನ 2 ನೇ ಹಂತದ 2 ನೇ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ಕ್ರೀಡಾಂಗಣಕ್ಕೆ ಬರಲು ಅನುಮತಿಸಲಾಗಿದೆ. ಐಪಿಎಲ್ 2021(IPL 2021) ರ ಮೊದಲ ಹಂತವನ್ನು ಖಾಲಿ ಕ್ರೀಡಾಂಗಣಗಳಲ್ಲಿ ಆಯೋಜಿಸಲಾಗಿತ್ತು. ಈ ಸುದ್ದಿಯನ್ನು ಐಪಿಎಲ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಹಂಚಿಕೊಳ್ಳಲಾಗಿದೆ. 2020 ಐಪಿಎಲ್ ಅನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಲ್ಲಿ ಆಯೋಜಿಸಲಾಗಿತ್ತು ಮತ್ತು ಆಗ ಅದನ್ನು ಖಾಲಿ ಕ್ರೀಡಾಂಗಣದಲ್ಲಿ ಆದಲಾಗಿತ್ತು.
NEWS - VIVO IPL 2021 set to welcome fans back to the stadiums.
More details here - https://t.co/5mkO8oLTe3 #VIVOIPL
— IndianPremierLeague (@IPL) September 15, 2021
ಇದನ್ನೂ ಓದಿ-Viral Video: ಅಭ್ಯಾಸದ ವೇಳೆ ಎಂ.ಎಸ್.ಧೋನಿಯಿಂದ ಸಿಕ್ಸರ್‌ಗಳ ಸುರಿಮಳೆ..!
ಐಪಿಎಲ್ 2021 ರ ಮೊದಲ ಹಂತವು (IPL 2021 First Phase) ಭಾರತದಲ್ಲಿ ಆಯೋಜನೆಗೊಂಡಿತ್ತು ಹಾಗೂ ಆಗಲು ಕೂಡ ಪಂದ್ಯಗಳನ್ನು ಖಾಲಿ ಕ್ರೀಡಾಂಗಣಗಳಲ್ಲಿ ನಡೆದಿದ್ದವು. 2019 ರ ಐಪಿಎಲ್ ನಂತರ ಇದೇ ಮೊದಲು, ಕ್ರೀಡಾಂಗಣಕ್ಕೆ ಭೇಟಿ ನೀಡುವ ಮೂಲಕ ಅಭಿಮಾನಿಗಳು ಪಂದ್ಯವನ್ನು ಆನಂದಿಸಬಹುದಾಗಿದೆ. ಟಿಕೆಟ್ ಬುಕಿಂಗ್‌ಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಐಪಿಎಲ್ ಸೈಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಐಪಿಎಲ್ ಪ್ರಕಾರ, ಅಭಿಮಾನಿಗಳು ಸೆಪ್ಟೆಂಬರ್ 16 ರಿಂದ ಟಿಕೆಟ್ ಬುಕ್ ಮಾಡಬಹುದಾಗಿದೆ.
ಇದನ್ನೂ ಓದಿ-IPL 2021: ವಿರಾಟ್ ಕೊಹ್ಲಿ ಮತ್ತು ಆರ್ಸಿಬಿಗೆ ದೊಡ್ಡ ಸವಾಲು ಎದುರಾಗಲಿದೆ: ಗೌತಮ್ ಗಂಭೀರ್
ಐಪಿಎಲ್ ನ ಅಧಿಕೃತ ವೆಬ್ ಸೈಟ್ ಆಗಿರುವ www.iplt20.com ಹೊರತಾಗಿ, ಟಿಕೆಟ್ ಬುಕಿಂಗ್ ಅನ್ನು PlatinumList.net ಸೈಟ್‌ನಿಂದಲೂ ಮಾಡಬಹುದು. ಐಪಿಎಲ್ 2021 ರ ಎರಡನೇ ಋತುವಿನಲ್ಲಿ ಎಲ್ಲಾ ಪಂದ್ಯಗಳು ಶಾರ್ಜಾ, ದುಬೈ ಮತ್ತು ಅಬುಧಾಬಿಯಲ್ಲಿ ನಡೆಯಲಿವೆ. ಯುಎಇ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳು ಮತ್ತು ಪ್ರೋಟೋಕಾಲ್‌ಗಳ ಪ್ರಕಾರ, ಕ್ರೀಡಾಂಗಣದಲ್ಲಿ ಸೀಮಿತ ಸ್ಥಾನಗಳಿರಲಿವೆ.
ಇದನ್ನೂ ಓದಿ-IPL 2021: IPL 2021ರಿಂದ ಹೊರಗುಳಿಯುವ ನಿರ್ಧಾರ ಕೈಗೊಂಡ ಈ ಸ್ಟಾರ್ ಆಟಗಾರರು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.