Viral Video: ಅಭ್ಯಾಸದ ವೇಳೆ ಎಂ.ಎಸ್.ಧೋನಿಯಿಂದ ಸಿಕ್ಸರ್‌ಗಳ ಸುರಿಮಳೆ..!

ಸೆ.19ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿಯೇ ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸೆಣಸಾಡಲಿದೆ.

Written by - Puttaraj K Alur | Last Updated : Sep 15, 2021, 11:20 AM IST
  • ಸೆ.19ರಂದು ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸೆಣಸಾಡಲಿದೆ
  • ಎಂ.ಎಸ್.ಧೊನಿ ಮೊದಲ ಹಂತದ 7 ಪಂದ್ಯಗಳಲ್ಲಿ ಕೇವಲ 37 ರನ್ ಮಾತ್ರ ಗಳಿಸಿದ್ದಾರೆ
  • ಧೊನಿಯವರ ಟ್ರೇಡ್‌ಮಾರ್ಕ್ - ಹೆಲಿಕಾಪ್ಟರ್ ಶಾಟ್ ಕಣ್ತುಂಬಿಕೊಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ
Viral Video: ಅಭ್ಯಾಸದ ವೇಳೆ ಎಂ.ಎಸ್.ಧೋನಿಯಿಂದ ಸಿಕ್ಸರ್‌ಗಳ ಸುರಿಮಳೆ..! title=
ನೆಟ್ನಲ್ಲಿ ಬೆವರು ಹರಿಸಿದ ಎಂ.ಎಸ್.ಧೋನಿ (Photo Courtesy: @Zee News)

ನವದೆಹಲಿ: ಕೊರೊನಾ ಕಾರಣದಿಂದ ಸ್ಥಗಿತಗೊಂಡಿದ್ದ 14ನೇ ಆವೃತ್ತಿಯ ಐಪಿಎಲ್ ಟೂರ್ನಿ(Indian Premier League 2021)ಯ 2ನೇ ಹಂತದ ಪಂದ್ಯಗಳು ಭಾನುವಾರ(ಸೆಪ್ಟೆಂಬರ್ 19) ದಿಂದ ಪುನರಾರಂಭಗೊಳುತ್ತಿವೆ. ಈಗಾಗಲೇ ಬಹುತೇಕ ಎಲ್ಲಾ ತಂಡಗಳ ಆಟಗಾರರು ಯುಎಇ ತಲುಪಿದ್ದು, ಬ್ಯಾಟಿಂಗ್ ಮತ್ತು ಬೌಲಿಂಗ್ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಾಯಕ ಎಂ.ಎಸ್.ಧೊನಿ(MS Dhoni)ನೆಟ್​ನಲ್ಲಿ ಬೆವರು ಹರಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

ಹೌದು, 2ನೇ ಹಂತದ ಬಾಕಿ ಪಂದ್ಯಗಳನ್ನು ಆಡಲು ಎಂ.ಎಸ್.ಧೋನಿ(Mahendra Singh Dhoni) ಸಜ್ಜಾಗಿದ್ದಾರೆ. ಸೆ.19ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿಯೇ ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸೆಣಸಾಡಲಿದೆ. ಎರಡೂ ಬಲಿಷ್ಠ ತಂಡಗಳಾಗಿರುವುದರಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಲಾಗಿದೆ. 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಹಿಟ್ ಮ್ಯಾನ್ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸಲು ಸಿಎಸ್‌ಕೆ ತಂಡದ ಆಟಗಾರರು ಭರ್ಜರಿ ಅಭ್ಯಾಸ ನಡೆಸುತ್ತಿತ್ತಿದ್ದಾರೆ. ತರಬೇತಿ ವೇಳೆ ಎಂ.ಎಸ್.ಧೋನಿ ಸಿಕ್ಸರ್​ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ಇದನ್ನೂ ಓದಿ: Viral Video: ಗೋಲ್ಡನ್ ಬಾಯ್ ನೀರಜ್ ಚೋಪ್ರಾಗೆ ಅಡುಗೆ ಮಾಡಿ ಉಣಬಡಿಸಿದ ಪಂಜಾಬ್ ಸಿಎಂ..!

ನೆಟ್ಸ್ ನಲ್ಲಿ ಬೌಂಡರಿ- ಸಿಕ್ಸರ್​ಗಳ ಸುರಿಮಳೆ ಸುರಿಸುತ್ತಾ ಧೋನಿ(MS Dhoni) ಭರ್ಜರಿಯಾಗಿ ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ಚೆನ್ನೈ ತಂಡ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಎಂ.ಎಸ್.ಧೊನಿ ಮೊದಲ ಹಂತದ 7 ಪಂದ್ಯಗಳಲ್ಲಿ ಕೇವಲ 37 ರನ್ ಮಾತ್ರ ಗಳಿಸಿದ್ದಾರೆ. ಹೀಗಾಗಿ ಉತ್ತಮ ಫಾರ್ಮ್ ಹೊಂದಲು ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ. ತಾನಾಡಿದ 7 ಪಂದ್ಯಗಳಲ್ಲಿ ಚೆನ್ನೈ 5 ಗೆಲುವು ಸಾಧಿಸಿದ್ದು, 2 ಸೋಲು ಕಂಡಿದೆ. 10 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಕಳೆದ ಐಪಿಎಲ್ ಟೂರ್ನಿಯಲ್ಲಿ ಕಳಪೆ ಆಟವಾಡಿದ್ದ ಸಿಎಸ್‌ಕೆ ತಂಡ ಪ್ರಸಕ್ತ ಟೂರ್ನಿಯಲ್ಲಿ ಮತ್ತೆ ತನ್ನ ಗತವೈಭವಕ್ಕೆ ಮರಳಿದೆ.  

ಇದನ್ನೂ ಓದಿ: ICC Men's T20 World Cup : ಟಿ20 ವಿಶ್ವಕಪ್‌ಗಾಗಿ ಭಾರತದ ತಂಡವನ್ನ ಪ್ರಕಟಿಸಿದ ಬಿಸಿಸಿಐ

40 ವರ್ಷದ ಧೋನಿ ಅಭ್ಯಾಸದ ವೇಳೆ ಸಿಕ್ಸರ್ ಭಾರಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗಿದೆ. ಟೀಂ ಇಂಡಿಯಾದ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಖ್ಯಾತಿಯ ಧೊನಿಯವರ ಟ್ರೇಡ್‌ಮಾರ್ಕ್ - ಹೆಲಿಕಾಪ್ಟರ್ ಶಾಟ್ ಅನ್ನು ಕಣ್ತುಂಬಿಕೊಂಡು ಅವರ ಅನೇಕ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಶೇರ್ ಆದ ಗೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ಧೋನಿ ಅವರ ಸಿಕ್ಸರ್ ಹೊಡೆತಗಳಿಗೆ ಫಿದಾ ಆಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News