ಜಾಗತಿಕ ಕ್ರಿಕೆಟ್ ಗೆ ಭಾರತದ ಅಗತ್ಯವಿದೆ- ರಿಚರ್ಡ್ ಹ್ಯಾಡ್ಲಿ

ಅಂತರಾಷ್ಟ್ರೀಯ ಕ್ರಿಕೆಟ್ ಭಾರತದಿಂದ ಹರಿದು ಬರುತ್ತಿರುವ ಆದಾಯದ ಹಿನ್ನಲೆಯಲ್ಲಿ ವಿಶ್ವ ಕ್ರಿಕೆಟ್ ಗೆ ಅದರ ಅಗತ್ಯವಿದೆ ಎಂದು ನ್ಯೂಜಿಲೆಂಡ್ ತಂಡದ ದಂತಕಥೆ ರಿಚರ್ಡ್ ಹ್ಯಾಡ್ಲೀ ಅಭಿಪ್ರಾಯಪಟ್ಟಿದ್ದಾರೆ. 

Last Updated : May 25, 2021, 04:04 PM IST
  • ಅಂತರಾಷ್ಟ್ರೀಯ ಕ್ರಿಕೆಟ್ ಭಾರತದಿಂದ ಹರಿದು ಬರುತ್ತಿರುವ ಆದಾಯದ ಹಿನ್ನಲೆಯಲ್ಲಿ ವಿಶ್ವ ಕ್ರಿಕೆಟ್ ಗೆ ಅದರ ಅಗತ್ಯವಿದೆ ಎಂದು ನ್ಯೂಜಿಲೆಂಡ್ ತಂಡದ ದಂತಕಥೆ ರಿಚರ್ಡ್ ಹ್ಯಾಡ್ಲೀ ಅಭಿಪ್ರಾಯಪಟ್ಟಿದ್ದಾರೆ.
  • ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ICC) ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಧ್ಯಮ ಪ್ರಕಟಣೆಯ ಪ್ರಕಾರ, ಭಾರತದ ಉಪಸ್ಥಿತಿಯಿಲ್ಲದೆ ವಿಶ್ವ ಕ್ರಿಕೆಟ್ ತುಂಬಾ ವಿಭಿನ್ನವಾಗಿದೆ ಎಂದು ಹ್ಯಾಡ್ಲೀ ಹೇಳಿದ್ದಾರೆ.
ಜಾಗತಿಕ ಕ್ರಿಕೆಟ್ ಗೆ ಭಾರತದ ಅಗತ್ಯವಿದೆ- ರಿಚರ್ಡ್ ಹ್ಯಾಡ್ಲಿ  title=
file photo (zee news)

ನವದೆಹಲಿ: ಅಂತರಾಷ್ಟ್ರೀಯ ಕ್ರಿಕೆಟ್ ಭಾರತದಿಂದ ಹರಿದು ಬರುತ್ತಿರುವ ಆದಾಯದ ಹಿನ್ನಲೆಯಲ್ಲಿ ವಿಶ್ವ ಕ್ರಿಕೆಟ್ ಗೆ ಅದರ ಅಗತ್ಯವಿದೆ ಎಂದು ನ್ಯೂಜಿಲೆಂಡ್ ತಂಡದ ದಂತಕಥೆ ರಿಚರ್ಡ್ ಹ್ಯಾಡ್ಲೀ ಅಭಿಪ್ರಾಯಪಟ್ಟಿದ್ದಾರೆ. 

ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ICC) ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಧ್ಯಮ ಪ್ರಕಟಣೆಯ ಪ್ರಕಾರ, ಭಾರತದ ಉಪಸ್ಥಿತಿಯಿಲ್ಲದೆ ವಿಶ್ವ ಕ್ರಿಕೆಟ್ ತುಂಬಾ ವಿಭಿನ್ನವಾಗಿದೆ ಎಂದು ಹ್ಯಾಡ್ಲೀ ಹೇಳಿದ್ದಾರೆ. 

"ಟೆಲಿವಿಷನ್ ಹಕ್ಕುಗಳು, ಪ್ರಾಯೋಜಕತ್ವಗಳು, ಜಾಹೀರಾತುಗಳು, ದೊಡ್ಡ ಜನಸಂದಣಿಯನ್ನು ಆಕರ್ಷಿಸುವುದು ಮತ್ತು ಐಪಿಎಲ್ ನಂತಹ ಪಂದ್ಯಾವಳಿಗಳ ಮೂಲಕ ಭಾರತ ಕ್ರಿಕೆಟ್‌ಗೆ ಸಾಕಷ್ಟು ಆದಾಯವನ್ನು ಗಳಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.ಭಾರತವಿಲ್ಲದೆ ವಿಶ್ವ ಕ್ರಿಕೆಟ್‌ ತುಂಬಾ ವಿಭಿನ್ನವಾಗಿರುತ್ತದೆ, ಆದ್ದರಿಂದ ಕ್ರಿಕೆಟ್ ಗೆ ಭಾರತದ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ- Virat Kohli ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಂತಹ ಹಣ ಸಂಪಾದಿಸುವ ಉದ್ಯಮ ಇದ್ದರೂ ಭಾರತದ ಕೊಡುಗೆ ಮತ್ತು ಟೆಸ್ಟ್ ಕ್ರಿಕೆಟ್‌ನತ್ತ ಗಮನಹರಿಸಿರುವ ಬಗ್ಗೆ ಕೇಳಿದಾಗ, "ಟೆಸ್ಟ್ ಕ್ರಿಕೆಟ್‌ಗೆ ಭಾರತವು ಅತ್ಯುತ್ತಮ ಕೊಡುಗೆ ನೀಡಿದೆ, ವಾಸ್ತವವಾಗಿ, ಆಟದ ಎಲ್ಲಾ ಸ್ವರೂಪಗಳಲ್ಲು ಅದು ಉತ್ತಮವಾಗಿ ಪ್ರದರ್ಶನ ನೀಡುತ್ತಿದೆ ಎಂದು ಹ್ಯಾಡ್ಲೀ ಹೇಳಿದರು.

ಆಸ್ಟ್ರೇಲಿಯಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಹೀನಾಯ ಸೋಲಿನ ನಂತರ ಭಾರತ ತೋರಿಸಿದ ಧೈರ್ಯಶಾಲಿ ಪ್ರದರ್ಶನಗಳನ್ನು ಹ್ಯಾಡ್ಲೀ ಶ್ಲಾಘಿಸಿದ್ದಾರೆ. "ಆಸ್ಟ್ರೇಲಿಯಾದಲ್ಲಿ ಅವರ ಟೆಸ್ಟ್ ಪ್ರದರ್ಶನಗಳು ಅತ್ಯುತ್ತಮವಾಗಿದ್ದವು ಮತ್ತು ಅವರು 36 ರನ್ ಗಳಿಗೆ ಆಲೌಟ್ ಆಗಿದ್ದರು. ಆದರೆ ನಂತರ ಉತ್ತಮವಾಗಿ ಪುಟಿದೆದ್ದರು, ಆ ಮೂಲಕ ಟೆಸ್ಟ್ ಪಂದ್ಯಕ್ಕೆ ಮತ್ತೆ ಜೀವ ಬಂದ ಹಾಗೆ ಆಯಿತು. ಇದು ಒಂದು ರೀತಿಯಲ್ಲಿ ಹೆಚ್ಚಿನ ಆಸಕ್ತಿಯನ್ನು ಕೆರಳಿಸುವಂತೆ ಮಾಡಿತು.ಆಷ್ಟ್ರೇಲಿಯಾದಲ್ಲಿ ನೀಡಿದ ಅವರ ಪ್ರದರ್ಶನವು ನಿಜಕ್ಕೂ ಗಮನಾರ್ಹವಾದುದು.ವಿಶೇಷವಾಗಿ ಹೊಸ ಯುವಕರು ಬಂದು ಉತ್ತಮ ಪ್ರದರ್ಶನ ನೀಡಿದರು ಎಂದು ಅವರು ಹೇಳಿದರು. 

ಇದನ್ನು ಓದಿ-ICC Women's Cricket World Cup: ವೇಳಾಪಟ್ಟಿ ಬಿಡುಗಡೆ, ಈ ತಂಡಗಳ ವಿರುದ್ಧ ಟೀಂ ಇಂಡಿಯಾ ಸೆಣೆಸಾಟ

ಜೂನ್ 18 ರಂದು ಸೌತಾಂಪ್ಟನ್‌ನಲ್ಲಿ ನಡೆಯಲಿರುವ ಮೊದಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ನಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News