DC vs SRH, IPL 2022: ಇಂದು ಸನ್‌ರೈಸರ್ಸ್‌ ಹೈದರಾಬಾದ್‍ಗೆ ದೆಹಲಿ ಕ್ಯಾಪಿಟಲ್ಸ್ ಸವಾಲು

15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 50ನೇ ಪಂದ್ಯ ಇಂದು ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿದೆ.

Written by - Puttaraj K Alur | Last Updated : May 5, 2022, 04:52 PM IST
  • ಇಂದು 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 50ನೇ ಪಂದ್ಯ ನಡೆಯಲಿದೆ
  • ಸನ್‍ರೈಸರ್ಸ್ ಹೈದರಾಬಾದ್ vs ದೆಹಲಿ ಕ್ಯಾಪಿಟಲ್ಸ್ ಮುಖಾಮುಖಿ
  • ಪ್ಲೇ ಆಫ್ ಪ್ರೇವಶಕ್ಕಾಗಿ ಉಭಯ ತಂಡಗಳಿಗೂ ಈ ಗೆಲುವು ಅನಿವಾರ್ಯ
DC vs SRH, IPL 2022: ಇಂದು ಸನ್‌ರೈಸರ್ಸ್‌ ಹೈದರಾಬಾದ್‍ಗೆ ದೆಹಲಿ ಕ್ಯಾಪಿಟಲ್ಸ್ ಸವಾಲು title=
ಹೈದರಾಬಾದ್ vs ದೆಹಲಿ ಮುಖಾಮುಖಿ

ಮುಂಬೈ: 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 50ನೇ ಪಂದ್ಯ ಇಂದು ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಸಂಜೆ 7.30ಕ್ಕೆ ಸನ್‍ರೈಸರ್ಸ್ ಹೈದರಾಬಾದ್ ಮತ್ತು ದೆಹಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳಿಗೂ ಈ ಪಂದ್ಯದ ಗೆಲುವು ಬಹುಮುಖ್ಯವಾಗಿದೆ. ಗೆದ್ದ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳಲಿದೆ. ಇದು ಮುಂದೆ ಪ್ಲೇ ಆಫ್ ಪ್ರವೇಶಿಸಲು ಸಹಕಾರಿಯಾಗಲಿದೆ.

ಆಡಿರುವ 9 ಪಂದ್ಯಗಳಲ್ಲಿ ಹೈದರಾಬಾದ್ 5 ಗೆಲುವು ಸಾಧಿಸಿದ್ದು, 10 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಅದೇ ರೀತಿ ದೆಹಲಿ ಕ್ಯಾಪಿಟಲ್ಸ್ ಆಡಿರುವ 9 ಪಂದ್ಯಗಳಲ್ಲಿ 4 ಗೆಲುವು ಸಾಧಿಸಿದ್ದು, 8 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಉಭಯ ತಂಡಗಳು ಬ್ಯಾಟಿಂಗ್ ಮತ್ತು ಬೌಲಿಂಗ್‍ ವಿಭಾಗವು ಬಲಿಷ್ಠವಾಗಿದೆ. ಹೀಗಾಗಿ ಗೆಲುವಿಗಾಗಿ ಭರ್ಜರಿ ಪೈಪೋಟಿ ನಡೆಯುವ ನಿರೀಕ್ಷೆ ಇದೆ.

ಇದನ್ನೂ ಓದಿIPL 2022: ಅಂದೊಂದು ವೇಳೆ ಇವರ ತಾಯಿ abortion ಮಾಡಿಸಿಕೊಂಡಿದ್ದರೆ ಈ ಕ್ರಿಕೆಟಿಗ ನಮಗೆ ದೊರೆಯುತ್ತಿರಲಿಲ್ಲ

ಕಳೆದ 2 ಪಂದ್ಯಗಳಲ್ಲಿಯೂ ಹೈದರಾಬಾದ್ ಸೋಲು ಕಂಡಿದೆ. ಹೀಗಾಗಿ ಕೇನ್ ವಿಲಿಯಮ್ಸನ್ ಪಡೆಗೆ ಗೆಲುವು ಅನಿವಾರ್ಯವಾಗಿದೆ. ನಿಕೋಲಸ್ ಪೂರನ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಂ, ಶಶಾಂಕ್ ಸಿಂಗ್, ವಾಷಿಂಗ್ಟನ್ ಸುಂದರ್ ಹೈದರಾಬಾದ್ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ.ನಟರಾಜನ್, ರವಿಕುಮಾರ್ ಸಮರ್ಥ್, ಶ್ರೇಯಸ್ ಗೋಪಾಲ್, ಸುಚಿತ್ ಗೋಪಾಲ್ ಮತ್ತು ಕಾರ್ತಿಕ್ ತ್ಯಾಗಿ ಮುಂತಾದವರು ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ.

ಕಳೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕೇವಲ 6 ರನ್‍ಗಳಿಂದ ಸೋತಿರುವ ದೆಹಲಿ ಕ್ಯಾಪಿಟಲ್ಸ್ ಸಹ ಗೆಲುವಿನ ಉತ್ಸಾಹದಲ್ಲಿದೆ. ರಿಷಭ್ ಪಂತ್ ಪಡೆಗೆ ಈ ಪಂದ್ಯದ ಗೆಲುವು ತುಂಬಾ ಮುಖ್ಯವಾಗಿದೆ. ಸೋತರೆ ದೆಹಲಿ ಪ್ಲೇ ಆಫ್ ಹಾದಿ ಮತ್ತುಷ್ಟು ಕಠಿಣವಾಗಲಿದೆ. ಹೀಗಾಗಿ ಹಳೆಯ ಪಂದ್ಯಗಳಲ್ಲಿ ಮಾಡಿರುವ ತಪ್ಪುಗಳನ್ನು ತಿದ್ದುಕೊಂಡು ಆಡಬೇಕಿದೆ. ಪೃಥ್ವಿ ಶಾ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಲಲಿತ್ ಯಾದವ್, ರೋವ್ಮನ್ ಪೊವೆಲ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮುಸ್ತಾಫಿಜುರ್ ರೆಹಮಾನ್, ಚೇತನ್ ಸಕರಿಯಾ, ಖಲೀಲ್ ಅಹ್ಮದ್, ಅನ್ರಿಚ್ ನಾರ್ಟ್ಜೆ, ಕಮಲೇಶ್ ನಾಗರಕೋಟಿ ಮುಂತಾದವರು ತಂಡದ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಒಟ್ಟಿನಲ್ಲಿ ಎರಡೂ ತಂಡಗಳಿಗೆ ಇಂದಿನ ಪಂದ್ಯ ಮುಖ್ಯವಾಗಿದ್ದು, ಯಾರು ಗೆಲ್ಲುತ್ತಾರೆ ಕಾದು ನೋಡಬೇಕಿದೆ.   

ಇದನ್ನೂ ಓದಿ: RCB vs CSK ಲೈವ್ ಮ್ಯಾಚ್‌ ವೇಳೆ ಲವ್ ಪ್ರಪೋಸ್ ಮಾಡಿದ ಹುಡುಗಿ!

ಎರಡೂ ತಂಡಗಳ ಸ್ಕ್ವಾಡ್ ಈ ರೀತಿ ಇದೆ:

ದೆಹಲಿ ಕ್ಯಾಪಿಟಲ್ಸ್ : ರಿಷಭ್ ಪಂತ್ (ನಾಯಕ & ವಿಕೆಟ್ ಕೀಪರ್), ಪೃಥ್ವಿ ಶಾ, ಟಿಮ್ ಸೀಫರ್ಟ್, ಮನ್‌ದೀಪ್ ಸಿಂಗ್, ಲಲಿತ್ ಯಾದವ್, ರೋವ್‌ಮನ್ ಪೊವೆಲ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಕುಲದೀಪ್ ಯಾದವ್, ಕಮಲೇಶ್ ನಾಗರಕೋಟಿ, ಶ್ರೀಕರ್ ಭರತ್, ಸರ್ಫರಾಜ್ ಖಾನ್, ಲುಂಗಿ ಎನ್‍ಜಿಡಿ, ಮುಸ್ತಾಫಿಜುರ್ ರೆಹಮಾನ್, ಅಶ್ವಿನ್ ಹೆಬ್ಬಾರ್, ಪ್ರವೀಣ್ ದುಬೆ, ಅನ್ರಿಚ್ ನಾರ್ಟ್ಜೆ, ಚೇತನ್ ಸಕರಿಯಾ, ರಿಪಾಲ್ ಪಟೇಲ್, ಯಶ್ ಧುಲ್, ವಿಕ್ಕಿ ಓಸ್ತ್ವಾಲ್

ಸನ್‌ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್ (ನಾಯಕ), ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡೆನ್ ಮರ್ಕ್ರಂ, ಅಬ್ದುಲ್ ಸಮದ್, ರೊಮಾರಿಯೋ ಶೆಫರ್ಡ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಟಿ.ನಟರಾಜನ್, ಉಮ್ರಾನ್ ಮಲಿಕ್, ಶ್ರೇಯಸ್ ಗೋಪಾಲ್, ಜಗದೀಶ ಸುಚಿತ್, ಜಿ.ಶಶಾಂಕ್ ಸಿಂಗ್, ರವಿಕುಮಾರ್ ಸಮರ್ಥ್, ವಿಷ್ಣು ವಿನೋದ್, ಪ್ರಿಯಂ ಗರ್ಗ್, ಕಾರ್ತಿಕ್ ತ್ಯಾಗಿ, ಫಜಲ್ಹಕ್ ಫಾರೂಕಿ, ಮಾರ್ಕೊ ಜಾನ್ಸೆನ್, ಸೌರಭ್ ದುಬೆ

ಐಪಿಎಲ್‌ ಪಂದ್ಯ: 50

ಸನ್‍ರೈಸರ್ಸ್ ಹೈದರಾಬಾದ್ vs ದೆಹಲಿ ಕ್ಯಾಪಿಟಲ್ಸ್

ದಿನಾಂಕ: ಮೇ 5, ಗುರುವಾರ

ಸ್ಥಳ: ಮುಂಬೈನ ಬ್ರಬೋರ್ನ್ ಸ್ಟೇಡಿಯಂ

ಸಮಯ: ಸಂಜೆ 7.30ಕ್ಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News