ಬೆಂಗಳೂರು: 2018 ನೇ ಸಾಲಿನ ಐಪಿಎಲ್ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ಪ್ರಾರಂಭಗೊಂಡಿದ್ದು, ವೆಸ್ಟ್ ಇಂಡಿಸ್ ತಂಡದ ಕ್ರಿಸ್ ಗೇಲ್ ರವರನ್ನು ಇಲ್ಲಿ ನಡೆದ ಹರಾಜಿನಲ್ಲಿ ಯಾವ ಫ್ರಾಂಚೈಸಿಯು ಖರೀದಿಸಲು ಮುಂದೆ ಬರದಿರುವುದು ಆಶ್ಚರ್ಯ ತಂದಿದೆ.
VIVO #IPLAuction: @rajasthanroyals gets @benstokes38 for INR 12.50 Cr #RR pic.twitter.com/xVvgJLJ15V
— IndianPremierLeague (@IPL) 27 January 2018
VIVO #IPLAuction - @lionsdenkxip gets #TeamIndia's @ashwinravi99 for INR 7.60 Cr #KXIP pic.twitter.com/S6fCjc1DoR
— IndianPremierLeague (@IPL) 27 January 2018
ಈ ಬಾರಿಯ ಮೊದಲ ಸುತ್ತಿನ ಹರಾಜು ಪ್ರಕ್ರಿಯೆಯಲ್ಲಿ ಇಂಗ್ಲೆಂಡ್ ತಂಡದ ಆಲ್ ರೌಂಡರ್ ಬೆನ್ ಸ್ಟೋಕ್ 12.5 ಕೋಟಿ ರೂಪಾಯಿಗಳಿಗೆ ರಾಜಸ್ತಾನ್ ರಾಯಲ್ಸ್ ತಂಡದ ಪಾಲಾಗಿದ್ದಾರೆ. ಆ ಮೂಲಕ ಈ ಮೊದಲ ಸುತ್ತಿನ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಅತಿ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಇಲ್ಲಿಯವರೆಗೂ ರಾಯಲ್ ಚಾಲೆಂಜೆರ್ಸ್ ಬೆಂಗಳೂರಿನಲ್ಲಿ ಆಟವಾಡಿದ್ದ ಗೇಲ್ ಈ ಬಾರಿ ಫ್ರಾಂಚೈಸಿಗಳು ಆಕರ್ಷಿಸದಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ.
ಹರಾಜು ಪ್ರಕ್ರಿಯೆಯಲ್ಲಿ ಶಿಖರ್ ಧವನ್ 5.2 ಕೋಟಿಗೆ ಹೈದರಾಬಾದ್ ಸನ್ ರೈಸೆರ್ಸ ಪಾಲಾದರೆ. ಆಸ್ಟ್ರೇಲಿಯಾದ ವೇಗದ ಬೌಲರ್ 9.4 ಕೋಟಿಗೆ ಕೊಲ್ಕತಾ ನೈಟ್ ರೈಡೆರ್ಸ್ ತಂಡವು ಖರಿಧಿಸಿತು. ಇನ್ನೊಂದೆಡೆಗೆ ಈ ಬಾರಿ ಆರ್ ಆಶ್ವಿನ್ ರವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು 7.6 ಕೋಟಿಗೆ ಖರಿದಿಸುವಲ್ಲಿ ಯಶಸ್ವಿಯಾಯಿತು. ಉಳಿದಂತೆ ಅಜಿಂಕಾ ರಹಾನೆಯವರನ್ನು ರಾಜಸ್ತಾನ್ ರಾಯಲ್ಸ್ 4 ಕೋಟಿಗೆ ತಂಡದಲ್ಲಿ ಉಳಿಸಿಕೊಂಡಿದೆ.
ಈ ಹರಾಜಿನಲ್ಲಿ ಒಟ್ಟು 580 ಆಟಗಾರರ ಹರಾಜಿನ ಪಟ್ಟಿಯಲ್ಲಿದ್ದಾರೆ, ಅದರಲ್ಲಿ 361 ಆಟಗಾರರು ಭಾರತೀಯರಾಗಿದ್ದಾರೆ ಉಳಿದೆಲ್ಲರೂ ಕೂಡಾ ವಿದೇಶಿ ಆಟಗಾರರು ಎಂದು ತಿಳಿದು ಬಂದಿದೆ.
ಹರಾಜಾದ ಆಟಗಾರರ ಪಟ್ಟಿ
ಬೆನ್ ಸ್ಟೋಕ್ -ರಾಜಸ್ತಾನ್ ರಾಯಲ್ಸ್ -12.5 ಕೋಟಿ
ಶಿಖರ್ ಧವನ್-ಹೈದರಾಬಾದ್ ಸನ್ ರೈಸೆರ್ಸ-5.2 ಕೋಟಿ
ಆರ್ ಆಶ್ವಿನ್ -ಕಿಂಗ್ಸ್ ಇಲೆವೆನ್ ಪಂಜಾಬ್ - 7.6 ಕೋಟಿ
ಅಜಿಂಕಾ ರಹಾನೆ-ರಾಜಸ್ತಾನ್ ರಾಯಲ್ಸ್- 4 ಕೋಟಿ
ಮೈಕಲ್ ಸ್ಟಾರ್ಕ್ -ಕೋಲ್ಕತ್ತಾ ನೈಟ್ ರೈಡರ್ಸ್-
ಗ್ಲೆನ್ ಮ್ಯಾಕ್ಸ್ ವೆಲ್ - ಡೆಲ್ಲಿ ಡೆರ್ ಡೆವಿಲ್ಸ್ - 9 ಕೋಟಿ
ಕೆನ್ ವಿಲಿಯಮ್ಸ್ನ್ - ಸನ್ ರೈಸೆರ್ಸ್ ಹೈದರಾಬಾದ್- 3 ಕೋಟಿ
ಯುವರಾಜ್ ಸಿಂಗ್ -ಕಿಂಗ್ಸ್ ಇಲೆವನ್ ಪಂಜಾಬ್ -2 ಕೋಟಿ
ಡ್ವೇನ್ ಬ್ರಾವೋ -ಚೆನ್ನೈ ಸೂಪರ್ ಕಿಂಗ್ಸ್ - 6.40 ಕೋಟಿ
ಗೌತಮ್ ಗಂಭೀರ್ - ಡೆಲ್ಲಿ ದೇರ್ ಡೆವಿಲ್ಸ್ -2.80 ಕೋಟಿ