IPL 2023: ಪಂದ್ಯ ಮುಗಿಯುತ್ತಿದ್ದಂತೆ ಕೊಹ್ಲಿ-ಗಂಗೂಲಿ ಮುಖಾಮುಖಿ: ಈ ಬಾರಿ ಇವರಿಬ್ಬರ ನಡುವೆ ನಡೆದಿದ್ದು ಶಾಕಿಂಗ್..!

Virat Kohli Sourav Ganguly Controversy: ಪಂದ್ಯದ ನಂತರ, ಇಬ್ಬರೂ ಹಸ್ತಲಾಘವ ಮಾಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗಿದೆ. ಮೇ 6ರಂದು ಮತ್ತೊಮ್ಮೆ ಈ ಎರಡು ತಂಡಗಳ ನಡುವೆ ಪಂದ್ಯ ನಡೆದಿದ್ದು, ಈ ಸಂದರ್ಭದಲ್ಲಿ ದಿಗ್ಗಜರು ಮತ್ತೊಮ್ಮೆ ಮುಖಾಮುಖಿಯಾಗಿದ್ದಾರೆ. ಆದರೆ ಈ ಬಾರಿ ಇಬ್ಬರೂ ಮಾಡಿದ್ದು ನೀವೆಲ್ಲರೂ ನೋಡಿದ್ರೆ ಖುಷಿ ಪಡುವುದು ಗ್ಯಾರಂಟಿ

Written by - Bhavishya Shetty | Last Updated : May 7, 2023, 12:46 PM IST
    • ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ನಡುವೆ ಮಾತುಕತೆ ನಡೆದಿದೆ
    • ಇಬ್ಬರೂ ಹಸ್ತಲಾಘವ ಮಾಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗಿದೆ
    • ಈ ದಿಗ್ಗಜರ ನಡುವೆ ಸಮನ್ವಯ ಉಂಟಾಗಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ
IPL 2023: ಪಂದ್ಯ ಮುಗಿಯುತ್ತಿದ್ದಂತೆ ಕೊಹ್ಲಿ-ಗಂಗೂಲಿ ಮುಖಾಮುಖಿ: ಈ ಬಾರಿ ಇವರಿಬ್ಬರ ನಡುವೆ ನಡೆದಿದ್ದು ಶಾಕಿಂಗ್..! title=
Virat Kohli-Sourav Ganguly

Virat Kohli Sourav Ganguly Controversy: ಏಪ್ರಿಲ್ 15 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹೈ ವೋಲ್ಟೇಜ್ ಐಪಿಎಲ್ ಪಂದ್ಯ ನಡೆದಿತ್ತು. ಈ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದುಕೊಂಡಿತು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಈ ಋತುವಿನಲ್ಲಿ ಸತತ 5 ನೇ ಸೋಲನ್ನು ಎದುರಿಸಬೇಕಾಯಿತು. ಈ ಪಂದ್ಯದ ನಂತರ ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ನಡುವೆ ಮಾತುಕತೆ ನಡೆದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: 5 ಗಂಟೆಯಲ್ಲಿ 1 ಲಕ್ಷ ಮಂದಿ ಮುಗಿಬಿದ್ದು ಖರೀದಿಸಿದ ಈ ಮೊಬೈಲ್ ಬೆಲೆ ಜಸ್ಟ್ 10,999! ಐಫೋನ್ ಮಾದರಿ ಇದೆ ಇದರ ಫೀಚರ್!

ಪಂದ್ಯದ ನಂತರ, ಇಬ್ಬರೂ ಹಸ್ತಲಾಘವ ಮಾಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗಿದೆ. ಮೇ 6ರಂದು ಮತ್ತೊಮ್ಮೆ ಈ ಎರಡು ತಂಡಗಳ ನಡುವೆ ಪಂದ್ಯ ನಡೆದಿದ್ದು, ಈ ಸಂದರ್ಭದಲ್ಲಿ ದಿಗ್ಗಜರು ಮತ್ತೊಮ್ಮೆ ಮುಖಾಮುಖಿಯಾಗಿದ್ದಾರೆ. ಆದರೆ ಈ ಬಾರಿ ಇಬ್ಬರೂ ಮಾಡಿದ್ದು ನೀವೆಲ್ಲರೂ ನೋಡಿದ್ರೆ ಖುಷಿ ಪಡುವುದು ಗ್ಯಾರಂಟಿ

IPL 2023ರ 50 ನೇ ಪಂದ್ಯವು ದೆಹಲಿ ಮತ್ತು ಬೆಂಗಳೂರು (DC vs RCB) ನಡುವೆ ನಡೆಯಿತು, ಅಲ್ಲಿ ದೆಹಲಿ ತಂಡವು RCB ಅನ್ನು 7 ವಿಕೆಟ್‌ ಗಳಿಂದ ಸೋಲಿಸಿತು. ಪಂದ್ಯದ ನಂತರ ವಿರಾಟ್ ಕೊಹ್ಲಿ ಮತ್ತು ಸೌರವ್ ಗಂಗೂಲಿ ಪರಸ್ಪರ ಹಸ್ತಲಾಘವ ಮಾಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ದಿಗ್ಗಜರ ನಡುವೆ ಸಮನ್ವಯ ಉಂಟಾಗಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಇಬ್ಬರ ನಡುವೆ ಜಗಳ ಶುರುವಾಗಿತ್ತು. ಈ ವೇಳೆ ಗಂಗೂಲಿ ಅಧಿಕಾರಾವಧಿ ಮುಗಿಯುವ ಮುನ್ನವೇ ಕೊಹ್ಲಿಯನ್ನು ನಾಯಕತ್ವದ ಜವಾಬ್ದಾರಿಯಿಂದ ಮುಕ್ತಗೊಳಿಸಿ ರೋಹಿತ್ ಶರ್ಮಾಗೆ ತಂಡದ ನಾಯಕತ್ವ ವಹಿಸಲಾಗಿತ್ತು. ಈ ಸಂದರ್ಭದಲ್ಲಿ ಇವರಿಬ್ಬರ ಮಧ್ಯೆ ತೀವ್ರ ಮಾತಿನ ಚಕಮಕಿಗಳು ನಡೆದಿದ್ದವು.

ಇದನ್ನೂ ಓದಿ:  Today Gold Price: ಜೀವಮಾನದಲ್ಲಿ ಇಷ್ಟೊಂದು ಕಡಿಮೆಯಾಗಿರಲಿಲ್ಲ ಚಿನ್ನದ ಬೆಲೆ! 10 ಗ್ರಾಂ ಬಂಗಾರದ ಬೆಲೆ ಎಷ್ಟಿದೆ ಗೊತ್ತಾ?

ಇನ್ನು ಈ ವಿವಾದ ಮುನ್ನೆಲೆಗೆ ಬರುತ್ತಿದ್ದಂತೆ ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ, ಇಬ್ಬರೂ ಇನ್‌ ಸ್ಟಾಗ್ರಾಮ್ ಹ್ಯಾಂಡಲ್‌ ನಿಂದ ಪರಸ್ಪರ ಅನ್‌ ಫಾಲೋ ಮಾಡಿದ್ದರು. ಬಳಿಕ IPL 2023 ಪ್ರಾರಂಭವಾಗುವ ಮೊದಲು, ಇಬ್ಬರೂ ಸಹ ಒಬ್ಬರನ್ನೊಬ್ಬರು ಫಾಲೋ ಮಾಡಲು ಶುರು ಮಾಡಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News