IPL: ಒಂದು ವಿಕೆಟ್ ಕಬಳಿಸಲು 2 ವರ್ಷ ತೆಗೆದುಕೊಂಡ ಈ ಕ್ರಿಕೆಟಿಗ! ಈತನಿಗಾಗಿ 14 ಕೋಟಿ ಖರ್ಚು ಮಾಡಿತ್ತು ಫ್ರಾಂಚೈಸಿ

CSK vs MI IPL 2023: ಚೆನ್ನೈ ಸೂಪರ್ ಕಿಂಗ್ಸ್ ವೇಗದ ಬೌಲರ್ ದೀಪಕ್ ಚಹಾರ್ ಐಪಿಎಲ್‌ ನಲ್ಲಿ ಅಂತಿಮವಾಗಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್ 2023 ರ 49 ನೇ ಪಂದ್ಯದಲ್ಲಿ ದೀಪಕ್ ಚಹಾರ್ ಅದ್ಭುತ ಬೌಲಿಂಗ್ ಮಾಡಿದರು. ಈ ಪಂದ್ಯದಲ್ಲಿ 3 ಓವರ್ ಬೌಲ್ ಮಾಡಿದ ಅವರು 18 ರನ್ ನೀಡಿ 2 ವಿಕೆಟ್ ಪಡೆದರು. ಇದಕ್ಕೂ ಮೊದಲು, ಐಪಿಎಲ್ 2021 ರ ಫೈನಲ್‌ ನಲ್ಲಿ ದೀಪಕ್ ಚಹಾರ್ ಒಂದು ವಿಕೆಟ್ ಪಡೆದಿದ್ದರು.

Written by - Bhavishya Shetty | Last Updated : May 7, 2023, 12:12 PM IST
    • 2 ವರ್ಷಗಳ ಕಾಲ ಐಪಿಎಲ್‌ನಲ್ಲಿ ಒಂದೇ ಒಂದು ಯಶಸ್ಸನ್ನೂ ಪಡೆದಿರಲಿಲ್ಲ ಈ ಆಟಗಾರ.
    • ಐಪಿಎಲ್ 2023 ರ ಆರಂಭಿಕ ಪಂದ್ಯಗಳಲ್ಲಿ ಈ ಆಟಗಾರ ಸಂಪೂರ್ಣ ವಿಫಲರಾಗಿದ್ದರು.
    • ಇದಾದ ಬಳಿಕ ಗಾಯದ ಸಮಸ್ಯೆಯಿಂದ ಈ ಆಟಗಾರನನ್ನು ತಂಡದಿಂದ ಹೊರಗಿಡಲಾಗಿತ್ತು.
IPL: ಒಂದು ವಿಕೆಟ್ ಕಬಳಿಸಲು 2 ವರ್ಷ ತೆಗೆದುಕೊಂಡ ಈ ಕ್ರಿಕೆಟಿಗ! ಈತನಿಗಾಗಿ 14 ಕೋಟಿ ಖರ್ಚು ಮಾಡಿತ್ತು ಫ್ರಾಂಚೈಸಿ title=
Deepak Chahar

CSK vs MI IPL 2023: IPL 2023 (IPL 2023) ರ 49 ನೇ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ (CSK vs MI) ನಡುವೆ ನಡೆಯಿತು. ಈ ಪಂದ್ಯದಲ್ಲಿ, ಬೌಲರ್ ಒಬ್ಬ ಕಡೆಗೂ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ. 2 ವರ್ಷಗಳ ಕಾಲ ಐಪಿಎಲ್‌ನಲ್ಲಿ ಒಂದೇ ಒಂದು ಯಶಸ್ಸನ್ನೂ ಪಡೆದಿರಲಿಲ್ಲ ಈ ಆಟಗಾರ. ಐಪಿಎಲ್ 2023 ರ ಆರಂಭಿಕ ಪಂದ್ಯಗಳಲ್ಲಿ ಈ ಆಟಗಾರ ಸಂಪೂರ್ಣ ವಿಫಲರಾಗಿದ್ದರು. ಇದಾದ ಬಳಿಕ ಗಾಯದ ಸಮಸ್ಯೆಯಿಂದ ಈ ಆಟಗಾರನನ್ನು ತಂಡದಿಂದ ಹೊರಗಿಡಲಾಗಿತ್ತು. ಈ ಆಟಗಾರನನ್ನು ಹರಾಜಿನಲ್ಲಿ 14 ಕೋಟಿ ರೂ.ಗೆ ಖರೀದಿಸಲಾಗಿದೆ.

ಇದನ್ನೂ ಓದಿ: Today Gold Price: ಜೀವಮಾನದಲ್ಲಿ ಇಷ್ಟೊಂದು ಕಡಿಮೆಯಾಗಿರಲಿಲ್ಲ ಚಿನ್ನದ ಬೆಲೆ! 10 ಗ್ರಾಂ ಬಂಗಾರದ ಬೆಲೆ ಎಷ್ಟಿದೆ ಗೊತ್ತಾ?

ಚೆನ್ನೈ ಸೂಪರ್ ಕಿಂಗ್ಸ್ ವೇಗದ ಬೌಲರ್ ದೀಪಕ್ ಚಹಾರ್ ಐಪಿಎಲ್‌ ನಲ್ಲಿ ಅಂತಿಮವಾಗಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್ 2023 ರ 49 ನೇ ಪಂದ್ಯದಲ್ಲಿ ದೀಪಕ್ ಚಹಾರ್ ಅದ್ಭುತ ಬೌಲಿಂಗ್ ಮಾಡಿದರು. ಈ ಪಂದ್ಯದಲ್ಲಿ 3 ಓವರ್ ಬೌಲ್ ಮಾಡಿದ ಅವರು 18 ರನ್ ನೀಡಿ 2 ವಿಕೆಟ್ ಪಡೆದರು. ಇದಕ್ಕೂ ಮೊದಲು, ಐಪಿಎಲ್ 2021 ರ ಫೈನಲ್‌ ನಲ್ಲಿ ದೀಪಕ್ ಚಹಾರ್ ಒಂದು ವಿಕೆಟ್ ಪಡೆದಿದ್ದರು.

IPL 2023 ಇದುವರೆಗಿನ ಪ್ರದರ್ಶನ

ದೀಪಕ್ ಚಹಾರ್ ಇಂಡಿಯನ್ ಪ್ರೀಮಿಯರ್ ಲೀಗ್ 2023 (ಐಪಿಎಲ್ 2023) ನಲ್ಲಿ ಇದುವರೆಗೆ ಒಟ್ಟು 5 ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳಲ್ಲಿ ದೀಪಕ್ ಚಾಹರ್ 9.56 ಎಕಾನಮಿಯೊಂದಿಗೆ ರನ್ ವ್ಯಯಿಸಿ 2 ವಿಕೆಟ್ ಪಡೆದಿದ್ದಾರೆ. ಇನ್ನೊಂದೆಡೆ ಚಹಾರ್ ಐಪಿಎಲ್‌ ನಲ್ಲಿ ಒಟ್ಟು 68 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 61 ವಿಕೆಟ್ ಒಟ್ಟಾರೆ ವಿಕೆಟ್ ಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ: IPL 2023: ರಾಜಸ್ಥಾನಕ್ಕೆ ಬ್ಯಾಕ್ ಟು ಬ್ಯಾಕ್ ಸೋಲು: ಸೋಲಿಗೆ ನಿಖರ ಕಾರಣ ಹೇಳಿದ್ರು ನಾಯಕ ಸಂಜು ಸಾಮ್ಸನ್!

2022 ರ ಐಪಿಎಲ್ ಹರಾಜಿನಲ್ಲಿ ದೀಪಕ್ ಚಹಾರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 14 ಕೋಟಿ ರೂ ಖರ್ಚು ಮಾಡಿ ಖರೀದಿಸಿತು. ಆದರೆ ಫೆಬ್ರವರಿ 2022 ರಲ್ಲಿ, ಅವರು ಬೆನ್ನುನೋವಿಗೆ ಒಳಗಾಗಿದ್ದರು, ಇದರಿಂದಾಗಿ ಅವರು 6 ತಿಂಗಳ ಕಾಲ ಕ್ರಿಕೆಟ್‌ ನಿಂದ ದೂರವಿದ್ದರು ಮತ್ತು ಐಪಿಎಲ್ 2022 ರ ಭಾಗವಾಗಲಿಲ್ಲ. ಬಳಿಕ ಐಪಿಎಲ್ 2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಉಳಿಸಿಕೊಂಡಿದೆ. ಆದರೆ ಗಾಯದಿಂದಾಗಿ ಮತ್ತೆ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News