Mahipal Lomror, DC vs RCB: ಪ್ರಸಕ್ತ IPL ಸೀಸನ್ ನಲ್ಲಿ ನಡೆದ (IPL-2023) 50 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಅದ್ಭುತ ಬ್ಯಾಟಿಂಗ್ ಮಾಡಿದ್ದಾರೆ. 186 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ ನಲ್ಲಿ ಅರ್ಧಶತಕವನ್ನು ಗಳಿಸಿದ್ದು, ತಂಡದಲ್ಲಿ ಅಜೇಯರಾಗಿ ಬ್ಯಾಟಿಂಗ್ ಮಾಡಿದ್ದರು. ನಾವಿಂದು ಮಾತನಾಡುತ್ತಿರುವುದು ಮಹಿಪಾಲ್ ಲೋಮ್ರೋರ್ ಅವರ ಬಗ್ಗೆ. ರಾಜಸ್ಥಾನ ಮೂಲದ ಮಹಿಪಾಲ್ ಲೋಮ್ರೋರ್ (Mahipal Lomror) ಅವರು, ಐಪಿಎಲ್ ನಲ್ಲಿ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಮಹಿಪಾಲ್ ಡೆಲ್ಲಿ ವಿರುದ್ಧ 54 ರನ್ ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದಲ್ಲದೆ, ಅಜೇಯರಾಗಿ ಮರಳಿದರು.
ಇದನ್ನೂ ಓದಿ: DCvsRCB: ಫಿಲಿಪ್ ಸಾಲ್ಟ್ ಸ್ಪೋಟಕ ಬ್ಯಾಟಿಂಗ್ ಗೆ ತತ್ತರಿಸಿದ ಆರ್ಸಿಬಿ
ವಿರಾಟ್ – ಮಹಿಪಾಲ್ ಶಕ್ತಿ ಪ್ರದರ್ಶನ:
ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ವಿರಾಟ್ ಕೊಹ್ಲಿ ಮತ್ತು ಫಾಫ್ (32 ಎಸೆತಗಳಲ್ಲಿ 45) ಆರ್ ಸಿ ಬಿಗೆ ಉತ್ತಮ ಆರಂಭವನ್ನು ನೀಡಿದರು. ಅಷ್ಟೇ ಅಲ್ಲದೆ, ಪವರ್ ಪ್ಲೇನಲ್ಲಿ ವಿಕೆಟ್ ಕಳೆದುಕೊಳ್ಳದೆ 51 ರನ್ ಸೇರಿಸಿದರು. ಇಬ್ಬರೂ 82 ರನ್ ಗಳ ಆರಂಭಿಕ ಜೊತೆಯಾಟ ನಡೆಸಿದರು. ನಂತರ ವಿರಾಟ್ ಮತ್ತು ಮಹಿಪಾಲ್ ಲೊಮ್ರೋರ್ ಮೂರನೇ ವಿಕೆಟ್ ಗೆ 55 ರನ್ ಸೇರಿಸಿದರು.
ವಿರಾಟ್ ಗಿಂತ ವೇಗ!
ಈ ಪಂದ್ಯದಲ್ಲಿ ವಿರಾಟ್ 55 ರನ್ ಕೊಡುಗೆ ನೀಡಿದರು. ಕುತೂಹಲಕಾರಿಯಾಗಿ, ಮಹಿಪಾಲ್ ವಿರಾಟ್ ಗಿಂತ ವೇಗವಾಗಿ ಬ್ಯಾಟಿಂಗ್ ಮಾಡಿದ್ದರು. ವಿರಾಟ್ ಸ್ಟ್ರೈಕ್ ರೇಟ್ 119.57 ಆಗಿದ್ದರೆ, ಮಹಿಪಾಲ್ 186.21 ಸ್ಟ್ರೈಕ್ ರೇಟ್ ನಲ್ಲಿ ರನ್ ಗಳಿಸಿದರು. ಇದು ವಿರಾಟ್ ತವರು ನೆಲ. ದೇಶೀಯ ಕ್ರಿಕೆಟ್ ನಲ್ಲಿ ದೆಹಲಿಯನ್ನು ಪ್ರತಿನಿಧಿಸುತ್ತಿದ್ದಾಗ, ಮೊದಲ ಬಾರಿಗೆ ಎಲ್ಲರ ಗಮನ ಸೆಳೆದಿದ್ದರು.
1833 ದಿನಗಳ ನಂತರ ಕನಸು ನನಸು!
ಮಹಿಪಾಲ್ 2018 ರಲ್ಲಿ ಐಪಿಎಲ್ ನಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡಿದ್ದರು. ಅಂದಿನಿಂದ ಇಲ್ಲಿಯವರೆಗೂ ದಾಖಲೆ ಬರೆಯಲು ಸಾಧ್ಯವಾಗಿರಲಿಲ್ಲ. ಇದೀಗ ಶನಿವಾರದಂದು ಅವರು ತಮ್ಮ ಅದೊಂದು ಕನಸನ್ನು ನನಸಾಗಿಸಿದ್ದಾರೆ. ನಾಲ್ಕನೇ ಕ್ರಮಾಂಕಕ್ಕೆ ಇಳಿದ ಬ್ಯಾಟ್ಸ್ ಮನ್ 29 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಗಳಿಂದ 54 ರನ್ ಗಳಿಸಿದರು. ತಮ್ಮ ತಂಡ ಉತ್ತಮ ಸ್ಕೋರ್ ಗಳಿಸುವಲ್ಲಿ ಯಶಸ್ವಿಯಾಗಿದ್ದು ಮಹಿಪಾಲ್ ಅವರ ಕೊಡುಗೆ ಎನ್ನಬಹುದು.
19ನೇ ಓವರ್ ನಲ್ಲಿ ಬೌಂಡರಿ ಬಾರಿಸುವ ಮೂಲಕ 50 ರನ್ ಪೂರೈಸಿದರು. ಇದು ಐಪಿಎಲ್ ನಲ್ಲಿ ಅವರ ಮೊದಲ ಅರ್ಧಶತಕವಾಗಿದೆ. ಲೊಮ್ರೋರ್ 2018 ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಐಪಿಎಲ್ ಗೆ ಪಾದಾರ್ಪಣೆ ಮಾಡಿದ್ದರು. ಮೊದಲ ಅರ್ಧಶತಕವನ್ನು 1833 ದಿನಗಳ ನಂತರ ಅವರು ಸಿಡಿಸಿದ್ದಾರೆ. ಇದೊಂದು ಸಾಧನೆ ಮಾಡಲು ಅವರು 5 ಋತುಗಳನ್ನು ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: Nitish Rana: ಕ್ರಿಕೆಟಿಗ ನಿತೀಶ್ ರಾಣಾ ಪತ್ನಿಗೆ ಕಿರುಕುಳ, ಇಬ್ಬರ ಬಂಧನ!
IPL ನಲ್ಲಿ ಮೊದಲ ಬಾರಿಗೆ 2016 ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ (ಈಗ ಡೆಲ್ಲಿ ಕ್ಯಾಪಿಟಲ್ಸ್) ಲೊಮ್ರೋರ್ ಅನ್ನು ಖರೀದಿಸಿತು. ಆ ವರ್ಷವೇ ಅವರು ಬಾಂಗ್ಲಾದೇಶದಲ್ಲಿ ನಡೆದ ಅಂಡರ್-19 ವಿಶ್ವಕಪ್ ತಂಡದಲ್ಲಿಯೂ ಸೇರ್ಪಡೆ ಹೊಂದಿದ್ದರು. ಈ ಕಾರಣದಿಂದ, ಆ ಋತುವಿನಲ್ಲಿ ಮಹಿಪಾಲ್ ಗೆ ಡೆಲ್ಲಿ ಪರ ಆಡುವ ಅವಕಾಶ ಸಿಗಲಿಲ್ಲ. ಇದಾದ ನಂತರ ಮಹಿಪಾಲ್ ಲೊಮ್ರೋರ್ 2021 ರವರೆಗೆ ರಾಜಸ್ಥಾನ ರಾಯಲ್ಸ್ ಪರ ಆಡಿದ್ದರು. 2018 ರಲ್ಲಿ ರಾಜಸ್ಥಾನಕ್ಕೆ ಪಾದಾರ್ಪಣೆ ಮಾಡಿದ್ದರು. IPL-2022 ರ ಮೆಗಾ ಹರಾಜಿನಲ್ಲಿ, RCB ಈ ಆಲ್-ರೌಂಡರ್ ಅನ್ನು 95 ಲಕ್ಷಕ್ಕೆ ಖರೀದಿಸಿತು, 2023 ರ ಋತುವಿಗೂ ಅವರನ್ನು ಉಳಿಸಿಕೊಂಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.