ICC World Test Championship Final 2021, India vs New Zealand: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ (WTC Final) ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್‌ನ ಕೈಯಲ್ಲಿ 8 ವಿಕೆಟ್‌ಗಳಿಂದ ಸೋಲನುಭವಿಸಿತು. ಈ ಸೋಲಿನ ನಂತರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (Virat Kohli) ಟೆಸ್ಟ್ ತಂಡದಲ್ಲಿ ಬದಲಾವಣೆಯನ್ನು ಸೂಚಿಸಿದ್ದಾರೆ. ಯಾರನ್ನೂ ಹೆಸರಿಸದೆ, ಕೆಲವು ಆಟಗಾರರು ರನ್ ಗಳಿಸುವ ಮನೋಭಾವವನ್ನು ತೋರಿಸುತ್ತಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.
ಟೀಂ ಇಂಡಿಯಾ (Team India) ನಾಯಕ ವಿರಾಟ್ ಕೊಹ್ಲಿ (Virat Kohli) ಪ್ರಕಾರ, ಆತ್ಮಾವಲೋಕನದ ನಂತರ, ತಂಡವನ್ನು ಆಯ್ಕೆ ಮಾಡಲಾಗುತ್ತದೆ ಎಂದಿದ್ದಾರೆ. ಗಮನಾರ್ಹವಾಗಿ ಹಿಂದಿನ ಪಂದ್ಯಗಳಲ್ಲಿ ಹಿರಿಯ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ 54 ಎಸೆತಗಳಲ್ಲಿ ಎಂಟು ರನ್ ಗಳಿಸಿದರು ಮತ್ತು 35 ಎಸೆತಗಳಲ್ಲಿ ಮೊದಲ ರನ್ ಗಳಿಸಿದರು. ಅದರ ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ 80 ಎಸೆತಗಳಲ್ಲಿ 15 ರನ್ ಗಳಿಸಿದರು. 139 ರನ್‌ಗಳ ಗುರಿಯನ್ನು ನ್ಯೂಜಿಲೆಂಡ್ ಸುಲಭವಾಗಿ ಸಾಧಿಸಿತು.
ಇದನ್ನೂ ಓದಿ- WTC Final 2021: ನ್ಯೂಜಿಲೆಂಡ್ ಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಟ್ಟ
ಪಂದ್ಯದ ನಂತರ ಆನ್‌ಲೈನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ(Virat Kohli), ನಾವು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಮತ್ತು ತಂಡವನ್ನು ಸದೃಢವಾಗಿಸಲು ಏನು ಮಾಡಬೇಕೆಂಬುದರ ಕುರಿತು ಮಾತುಕತೆ ನಡೆಯಲಿದೆ. ಒಂದೇ ಟ್ರ್ಯಾಕ್ ಅನ್ನು ಅನುಸರಿಸುವುದಿಲ್ಲ. ನಾವು ಒಂದು ವರ್ಷ ಕಾಯುವುದಿಲ್ಲ. ನಮ್ಮ ಸೀಮಿತ ಓವರ್‌ಗಳ ತಂಡವನ್ನು ನೀವು ನೋಡಿದರೆ, ನಮಲ್ಲಿ ಸಾಮರ್ಥ್ಯವಿದೆ ಮತ್ತು ಆಟಗಾರರು ಆತ್ಮವಿಶ್ವಾಸದಿಂದ ತುಂಬಿದ್ದಾರೆ. ಇದು ಟೆಸ್ಟ್ ಕ್ರಿಕೆಟ್‌ನಲ್ಲೂ ಅಗತ್ಯವಾಗಿದೆ ಎಂದರು.
ತಂಡಕ್ಕೆ ಯಾವುದು ಪರಿಣಾಮಕಾರಿ ಮತ್ತು ನಾವು ಹೇಗೆ ನಿರ್ಭಯವಾಗಿ ಆಡಬಹುದು ಎಂಬುದನ್ನು ಪರಿಶೀಲಿಸುವ ಮತ್ತು ಅರ್ಥಮಾಡಿಕೊಳ್ಳುವ ಮೂಲಕ ನಾವು ಹೊಸದಾಗಿ ಯೋಜಿಸಬೇಕಾಗಿದೆ. ಉತ್ತಮ ಪ್ರದರ್ಶನ ನೀಡಲು ಸರಿಯಾದ ಮನಸ್ಥಿತಿಯೊಂದಿಗೆ ಬರುವ ಸರಿಯಾದ ಆಟಗಾರರಿಗೆ ತಂಡದಲ್ಲಿ ಸ್ಥಾನ ಸಿಗಲಿದೆ ಎಂದು ಕೊಹ್ಲಿ ತಿಳಿಸಿದರು.
ಇದನ್ನೂ ಓದಿ- IND vs NZ : WTC ಫೈನಲ್ ನಲ್ಲಿ ದಾಖಲೆ ಬರೆದ ಫಾಸ್ಟ್ ಬೌಲರ್ ಮೊಹಮ್ಮದ್ ಶಮಿ!
ನ್ಯೂಜಿಲೆಂಡ್‌ನಂತಹ ಅದ್ಭುತ ಬೌಲಿಂಗ್ ದಾಳಿಯ ಮುಂದೆ ರನ್ ಗಳಿಸುವ ಬಗ್ಗೆಯೂ ಮಾತನಾಡಿದ ವಿರಾಟ್ ಕೊಹ್ಲಿ, ರನ್ ಗಳಿಸುವುದು ಹೇಗೆ ಎಂಬುದರ ಕುರಿತು ನಾವು ಕೆಲಸ ಮಾಡಬೇಕು. ಪಂದ್ಯ ನಮ್ಮ ಕೈ ತಪ್ಪಿ ಹೋಗಲು ನಾವು ಬಿಡುವುದಿಲ್ಲ. ಯಾವುದೇ ತಾಂತ್ರಿಕ ಸಮಸ್ಯೆ ಇದೆ ಎಂದು ನನಗನಿಸುವುದಿಲ್ಲ ಎಂದು ತಿಳಿಸಿದರು.
ಬೌಲರ್‌ಗಳನ್ನು ನಿರ್ಭಯವಾಗಿ ಎದುರಿಸುವುದು ಜಾಗೃತಿಯ ವಿಷಯ. ಮೊದಲ ದಿನ ಮಾಡಿದಂತೆ ಚೆಂಡು ಬಲವಾಗಿ ಸ್ವಿಂಗ್ ಆಗದ ಹೊರತು ಬೌಲರ್‌ಗಳನ್ನು ಒಂದೇ ಸ್ಥಳದಲ್ಲಿ ಬೌಲಿಂಗ್ ಮಾಡಲು ಅನುಮತಿಸಬಾರದು. ವಿಕೆಟ್ ಕಳೆದುಕೊಳ್ಳುವ ಬಗ್ಗೆ ಚಿಂತಿಸದೆ ರನ್ ಗಳಿಸುವುದರತ್ತ ಗಮನ ಹರಿಸಬೇಕು. ಅಂತೆಯೇ, ನೀವು ಎದುರಾಳಿ ತಂಡದ ಮೇಲೆ ಒತ್ತಡ ಹೇರಬಹುದು, ಇಲ್ಲದಿದ್ದರೆ ನೀವು ಹೊರಹೋಗುವ ಭಯದಿಂದ ಆಡುತ್ತೀರಿ. ನೀವು ಯೋಜಿತ ಅಪಾಯಗಳನ್ನು ತೆಗೆದುಕೊಳ್ಳಬೇಕು ಎಂದು ಕೊಹ್ಲಿ ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.