1 ವರ್ಷದ ನಂತರ Team Indiaಗೆ ಮರಳಿದ ಈ ಆಟಗಾರನಿಗೆ ಉಪನಾಯಕ ಸ್ಥಾನ: ಕಮರಿದ ಹಾರ್ದಿಕ್ ಕನಸು!

Vice-captain of Team India: ಆಯ್ಕೆ ಸಮಿತಿಯು ವಿಶ್ವಕಪ್‌’ಗೆ 15 ಸದಸ್ಯರ ತಾತ್ಕಾಲಿಕ ತಂಡವನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ತಂಡಗಳ ಅಂತಿಮ ಪಟ್ಟಿಯನ್ನು ಸಲ್ಲಿಸಲು ಸೆಪ್ಟೆಂಬರ್ 27 ಕೊನೆಯ ದಿನಾಂಕವಾಗಿದೆ.

Written by - Bhavishya Shetty | Last Updated : Aug 20, 2023, 10:45 AM IST
    • ಆಯ್ಕೆ ಸಮಿತಿಯು ವಿಶ್ವಕಪ್‌’ಗೆ 15 ಸದಸ್ಯರ ತಾತ್ಕಾಲಿಕ ತಂಡವನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ
    • ತಂಡಗಳ ಅಂತಿಮ ಪಟ್ಟಿಯನ್ನು ಸಲ್ಲಿಸಲು ಸೆಪ್ಟೆಂಬರ್ 27 ಕೊನೆಯ ದಿನಾಂಕವಾಗಿದೆ.
    • ಟೀಂ ಇಂಡಿಯಾಗೆ ಒಂದು ವರ್ಷದ ಬಳಿಕ ಬಲಿಷ್ಠ ಆಟಗಾರನೊಬ್ಬ ಎಂಟ್ರಿ ಕೊಟ್ಟಿದ್ದಾನೆ
1 ವರ್ಷದ ನಂತರ Team Indiaಗೆ ಮರಳಿದ ಈ ಆಟಗಾರನಿಗೆ ಉಪನಾಯಕ ಸ್ಥಾನ: ಕಮರಿದ ಹಾರ್ದಿಕ್ ಕನಸು! title=
Jasprit Bumrah

Vice-captain of Team India: 2023ರ ಏಷ್ಯಾಕಪ್‌’ಗಾಗಿ ಟೀಮ್ ಇಂಡಿಯಾದ ತಂಡವನ್ನು ಸೋಮವಾರ ಅಂದರೆ ಆಗಸ್ಟ್ 21 ರಂದು ಪ್ರಕಟಿಸಲಾಗುತ್ತದೆ ಎಂಬ ಸುದ್ದಿ ಮುನ್ನೆಲೆಗೆ ಬಂದಿದೆ. ಇದರೊಂದಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿಯು ಅಕ್ಟೋಬರ್ 5 ರಿಂದ ಪ್ರಾರಂಭವಾಗುವ 2023 ರ ವಿಶ್ವಕಪ್‌’ಗೆ ಟೀಮ್ ಇಂಡಿಯಾದ ಸಂಭಾವ್ಯ ಆಟಗಾರರ ಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆ ಇದೆ.

ಆಯ್ಕೆ ಸಮಿತಿಯು ವಿಶ್ವಕಪ್‌’ಗೆ 15 ಸದಸ್ಯರ ತಾತ್ಕಾಲಿಕ ತಂಡವನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ತಂಡಗಳ ಅಂತಿಮ ಪಟ್ಟಿಯನ್ನು ಸಲ್ಲಿಸಲು ಸೆಪ್ಟೆಂಬರ್ 27 ಕೊನೆಯ ದಿನಾಂಕವಾಗಿದೆ.

ಇದನ್ನೂ ಓದಿ: Post Office Saving Schemes: ಕೇವಲ 114 ತಿಂಗಳಲ್ಲಿ ನಿಮ್ಮ ಹಣ ಡಬಲ್ ಆಗುತ್ತೆ..!

ಈ ಡ್ಯಾಶಿಂಗ್ ಆಟಗಾರ ಟೀಮ್ ಇಂಡಿಯಾದ ಉಪನಾಯಕ!

ಟೀಂ ಇಂಡಿಯಾಗೆ ಒಂದು ವರ್ಷದ ಬಳಿಕ ಬಲಿಷ್ಠ ಆಟಗಾರನೊಬ್ಬ ಎಂಟ್ರಿ ಕೊಟ್ಟಿದ್ದಾನೆ. ಈ ಆಟಗಾರನ ಎಂಟ್ರಿಯಿಂದ ಹಾರ್ದಿಕ್ ಪಾಂಡ್ಯ ಸ್ಥಾನಕ್ಕೆ ಕುತ್ತುಬರುವ ಸಾಧ್ಯತೆ ಇದೆ. ಏಕೆಂದರೆ ಈ ಆಟಗಾರನನ್ನು ಏಷ್ಯಾಕಪ್ ಮತ್ತು ವಿಶ್ವಕಪ್‌’ಗೆ ಭಾರತದ ಉಪನಾಯಕರನ್ನಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಮೂಲಗಳು ಹೇಳುತ್ತಿವೆ.  

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದಲ್ಲಿ ಕೆರಿಬಿಯನ್ ತಂಡದ ವಿರುದ್ಧ ಭಾರತ 2-3 ರಿಂದ T20I ಸರಣಿಯನ್ನು ಕಳೆದುಕೊಂಡಿತ್ತು. ಇದಾದ ಬಳಿಕ ಐರ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾದ ನಾಯಕತ್ವವನ್ನು ವೇಗಿ ಜಸ್ಪ್ರೀತ್ ಬುಮ್ರಾ ವಹಿಸಿಕೊಂಡಿದ್ದಾರೆ. ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ತಮ್ಮ ಅದ್ಭುತ ನಾಯಕತ್ವದ ಮೂಲಕ ಟೀಮ್ ಇಂಡಿಯಾವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ.

ಜಸ್ಪ್ರೀತ್ ಬುಮ್ರಾ ಅವರು ಮುಂಬರುವ ಏಷ್ಯಾಕಪ್ ಮತ್ತು ODI ವಿಶ್ವಕಪ್‌’ಗೆ ಭಾರತ ತಂಡದ ಉಪನಾಯಕರಾಗಲು ಪ್ರಬಲ ಸ್ಪರ್ಧಿಯಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಅವರನ್ನು ಸಾಮಾನ್ಯ ಟಿ20 ಅಂತಾರಾಷ್ಟ್ರೀಯ ನಾಯಕರನ್ನಾಗಿ ಮಾಡಲಾಗಿದೆ, ಐರ್ಲೆಂಡ್ ವಿರುದ್ಧದ ಟಿ20 ಅಂತಾರಾಷ್ಟ್ರೀಯ ಸರಣಿಯಲ್ಲಿ ಬುಮ್ರಾ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದೆ, ಹೀಗಿರುವಾಗ ಯಾವ ಆಟಗಾರ ಉಪನಾಯಕನಾಗುತ್ತಾನೆ ಎಂಬುದು ಸದ್ಯದ ಪ್ರಶ್ನೆ.

ಈ ವಿಷಯದ ಬಗ್ಗೆ ತಿಳಿದಿರುವ ಬಿಸಿಸಿಐ ಮೂಲವು ಗೌಪ್ಯತೆಯ ಷರತ್ತಿನ ಮೇಲೆ ಮಾಹಿತಿ ನೀಡಿದೆ. “ನಾಯಕತ್ವದ ವಿಷಯದಲ್ಲಿ ಅನುಭವವನ್ನು ನೋಡಿದರೆ, ಬುಮ್ರಾ ಪಾಂಡ್ಯಗಿಂತ ಮುಂದಿದ್ದಾರೆ. 2022 ರಲ್ಲಿ ಟೆಸ್ಟ್ ತಂಡದ ನಾಯಕರಾಗಿದ್ದರು. ದಕ್ಷಿಣ ಆಫ್ರಿಕಾದ ಏಕದಿನ ಪ್ರವಾಸದ ಸಮಯದಲ್ಲಿ ಪಾಂಡ್ಯಗಿಂತ ಮೊದಲು ಬುಮ್ರಾ ಏಕದಿನ ತಂಡದ ಉಪನಾಯಕರಾಗಿದ್ದರು” ಎಂದಿದೆ

ಇದನ್ನೂ ಓದಿ: 13 ವರ್ಷಗಳ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್!

"ಏಷ್ಯಾ ಕಪ್ ಮತ್ತು ವಿಶ್ವಕಪ್ ಎರಡರಲ್ಲೂ ಬುಮ್ರಾ ಅವರನ್ನು ಏಕದಿನದಲ್ಲಿ ಉಪನಾಯಕರನ್ನಾಗಿ ಮಾಡಿದರೆ ಆಶ್ಚರ್ಯಪಡುವಂತಹದ್ದು ಏನು ಇಲ್ಲ” ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News