Rohit Sharma-Virat Kohli: ಬೇಕಾಗಿರೋದು ಜಸ್ಟ್ 2 ರನ್… ರೋಹಿತ್-ಕೊಹ್ಲಿ ಜೋಡಿ ನಿರ್ಮಿಸಲಿದೆ ಆ ವಿಶ್ವದಾಖಲೆ!

Rohit Sharma and Virat Kohli World Record: ಮೂರನೇ ಏಕದಿನ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆರಂಭವಾಗಿದ್ದು, ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡುತ್ತಿದೆ. ಇನ್ನು ಈ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಶ್ವದಾಖಲೆ ನಿರ್ಮಿಸುವ ಅವಕಾಶ ಪಡೆದಿದ್ದಾರೆ

Written by - Bhavishya Shetty | Last Updated : Mar 22, 2023, 03:31 PM IST
    • ಚೆಪಾಕ್ ನ ಪಿಚ್ ಸ್ಪಿನ್’ಗೆ ಸೂಕ್ತವಾಗಿರುವ ಹಿನ್ನೆಲೆಯಲ್ಲಿ ಪಂದ್ಯ ಕುತೂಹಲ ಮೂಡಿಸಲಿದೆ.
    • ತವರು ನೆಲದಲ್ಲಿ ಕಳೆದ 26 ವರ್ಷಗಳಿಂದ ದ್ವಿಪಕ್ಷೀಯ ಸರಣಿಗಳಲ್ಲಿ ಸೋಲನುಭವಿಸದ ಭಾರತ
    • ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿಶ್ವದಾಖಲೆ ನಿರ್ಮಿಸುವ ಅವಕಾಶ ಪಡೆದಿದ್ದಾರೆ.
Rohit Sharma-Virat Kohli: ಬೇಕಾಗಿರೋದು ಜಸ್ಟ್ 2 ರನ್… ರೋಹಿತ್-ಕೊಹ್ಲಿ ಜೋಡಿ ನಿರ್ಮಿಸಲಿದೆ ಆ ವಿಶ್ವದಾಖಲೆ!
Rohit Sharma Virat Kohli Partnership

Rohit Sharma and Virat Kohli 2 runs away to Hits fastest 5000 ODI runs: ಮೂರು ಏಕದಿನ ಸರಣಿಯ ಭಾಗವಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆರಂಭವಾಗಿದೆ. ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಆಸೀಸ್ ಮತ್ತು ಭಾರತ ತಂಡಗಳು ತಲಾ ಒಂದನ್ನು ಗೆದ್ದುಕೊಂಡಿದ್ದು, ಸರಣಿಯು 1-1ರಲ್ಲಿ ಸಮಬಲವಾಗಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಏಕದಿನ ಸರಣಿಯನ್ನು ಗೆಲ್ಲಲಿದೆ.

ಇದನ್ನೂ ಓದಿ: ಇನ್ನೊಂದು ವಾರದಲ್ಲಿ ಈ ಕೆಲಸಗಳನ್ನು ಪೂರ್ಣಗೊಳಿಸಿ, ಇಲ್ಲವೇ ಭಾರೀ ನಷ್ಟ 

ಚೆಪಾಕ್ ನ ಪಿಚ್ ಸ್ಪಿನ್’ಗೆ ಸೂಕ್ತವಾಗಿರುವ ಹಿನ್ನೆಲೆಯಲ್ಲಿ ಪಂದ್ಯ ಕುತೂಹಲ ಮೂಡಿಸಲಿದೆ. ತವರು ನೆಲದಲ್ಲಿ ಕಳೆದ 26 ವರ್ಷಗಳಿಂದ ದ್ವಿಪಕ್ಷೀಯ ಸರಣಿಗಳಲ್ಲಿ ಸೋಲನುಭವಿಸದ ಭಾರತ, ಇಂದು ಕೂಡ ಜಯವನ್ನು ಸಾಧಿಸಲು ಪ್ಲಾನ್ ಮಾಡಿದೆ.

ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಶ್ವದಾಖಲೆ ನಿರ್ಮಿಸುವ ಅವಕಾಶ ಪಡೆದಿದ್ದಾರೆ. ರೋಹಿತ್-ಕೊಹ್ಲಿ ಜೋಡಿ ಇನ್ನೂ 2 ರನ್ ಗಳಿಸಿದರೆ ಏಕದಿನದಲ್ಲಿ ವೇಗವಾಗಿ 5000 ರನ್ ಪೂರೈಸಿದ ಜೋಡಿ ಎನಿಸಿಕೊಳ್ಳಲಿದೆ. ರೋಹಿತ್-ಕೊಹ್ಲಿ ಜೋಡಿ ಇದುವರೆಗೆ 85 ಏಕದಿನ ಇನ್ನಿಂಗ್ಸ್‌ಗಳಲ್ಲಿ 4998 ರನ್ ಗಳಿಸಿದೆ. ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯದಲ್ಲಿ ಇನ್ನೆರಡು ರನ್ ಗಳಿಸಿದರೆ, ವೇಗವಾಗಿ 5000 ರನ್ ಗಳಿಸಿದ ಜೋಡಿ ಎಂಬ ಇತಿಹಾಸ ನಿರ್ಮಿಸಲಿದ್ದಾರೆ.

ವೆಸ್ಟ್ ಇಂಡೀಸ್ ಜೋಡಿ ಗಾರ್ಡನ್ ಗ್ರೀನಿಡ್ಜ್-ಡೆಸ್ಮಂಡ್ ಹೇನ್ಸ್ ಏಕದಿನದಲ್ಲಿ ವೇಗವಾಗಿ 5000 ರನ್ ಗಳಿಸಿದ ಜೋಡಿ. ಅವರು 97 ಇನ್ನಿಂಗ್ಸ್‌ಗಳಲ್ಲಿ 5000 ಸಾವಿರ ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾ ಜೋಡಿ ಮ್ಯಾಥ್ಯೂ ಹೇಡನ್-ಆಡಮ್ ಗಿಲ್‌ಕ್ರಿಸ್ಟ್ 104 ಇನ್ನಿಂಗ್ಸ್‌ಗಳಲ್ಲಿ 5000 ರನ್ ಗಳಿಸಿದ್ದಾರೆ. ಇದೀಗ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಇನ್ನೆರಡು ರನ್ ಗಳಿಸಿದರೆ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ದಾಖಲೆಗಳು ಮುರಿಯುತ್ತವೆ. ಈ ಪಟ್ಟಿಯಲ್ಲಿ 4000ಕ್ಕೂ ಹೆಚ್ಚು ರನ್ ಗಳಿಸಿದವರನ್ನು ಪರಿಗಣಿಸಿದರೆ, ರೋಹಿತ್-ಕೊಹ್ಲಿ 60ಕ್ಕಿಂತ ಹೆಚ್ಚು ಸರಾಸರಿ ಹೊಂದಿರುವ ಏಕೈಕ ಜೋಡಿ.

ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಜೊತೆಯಾಟವನ್ನು ಸೃಷ್ಟಿಸಿದ ಜೋಡಿ. ಸಚಿನ್-ಗಂಗೂಲಿ 8227 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಜೋಡಿ 8ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: Tata Tigor CNG ಕಾರ್ ಅನ್ನು ಕೇವಲ 86,000 ರೂ.ಗೆ ಮನೆಗೆ ತನ್ನಿ

ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ಭಾರತ ಯಾವುದೇ ಬದಲಾವಣೆ ಮಾಡಿಲ್ಲ. ಆಸ್ಟ್ರೇಲಿಯಾ ಎರಡು ಬದಲಾವಣೆ ಮಾಡಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News