ಬೆಂಗಳೂರು: ಬಡವರಿಗೆ ಸೇರಬೇಕಾದ ಪಡಿತರ ಅಕ್ಕಿ, ರಹಸ್ಯವಾಗಿ ಗೋದಾಮುಗಳಿಂದಲೇ ನಾಪತ್ತೆಯಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆಯನ್ನು ಟೀಕಿಸಿರುವ ಬಿಜೆಪಿ, ‘ಈ ಅಕ್ಕಿ ನಾಪತ್ತೆಯ ಬಗ್ಗೆ ಕೊಂಚವೂ ತಲೆಕೆಡಿಸಿಕೊಳ್ಳದ #ATMSarkara, ಬಡವರಿಗೆ ಪಡಿತರ ಅಕ್ಕಿ ವಿತರಿಸಲು, ಅಕ್ಕಿ ಎಲ್ಲಿಯೂ ದೊರೆಯುತ್ತಿಲ್ಲವೆಂದು ಮೊಸಳೆ ಕಣ್ಣೀರು ಸುರಿಸಿ, ಸದಾ ಇತರರ ಮೇಲೆ ಗೂಬೆ ಕೂರಿಸುತ್ತಿದೆ’ ಎಂದು ಟೀಕಿಸಿದೆ.
‘ನಾಪತ್ತೆಯಾಗಿರುವ ಈ ₹1.32 ಕೋಟಿ ಮೌಲ್ಯದ ಅಕ್ಕಿ, ಯಾರ ಹೊಟ್ಟೆ ತುಂಬಿಸಲು ಹೋಗಿದೆ ಎಂಬುದನ್ನು ಕಾಂಗ್ರೆಸ್ ಸರ್ಕಾರ ಸ್ಪಷ್ಟಪಡಿಸಲಿ! ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಹಾರ ಹಾಗೂ ಅಕ್ಕಿ ವಿತರಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಇದರ ನಡುವೆ ಹೊಸ ಪಡಿತರ ಚೀಟಿ ಕೊಡುವುದಕ್ಕೂ ಸಿದ್ದರಾಮಯ್ಯರ ಸರ್ಕಾರ ನಿರಾಕರಿಸಿದೆ. 3 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದರೂ ಪರಿಶೀಲನೆ ಮಾಡದೆ ಕಳ್ಳಾಟವಾಡಲಾಗುತ್ತಿದೆ. ಅಕ್ಕಿಯಲ್ಲೂ ಒಣ ರಾಜಕೀಯ ಮಾಡಿದ ಸರ್ಕಾರ ಮುಂದಿನ ತಿಂಗಳ ಅಕ್ಕಿ ವಿತರಿಕೆಯಲ್ಲಿಯೂ ಈಗಲೇ ಸೋತಾಗಿದೆ!’ ಎಂದು ಬಿಜೆಪಿ ಕುಟುಕಿದೆ.
ಬಡವರಿಗೆ ಸೇರಬೇಕಾದ ಪಡಿತರ ಅಕ್ಕಿ, ರಹಸ್ಯವಾಗಿ ಗೋದಾಮುಗಳಿಂದಲೇ ನಾಪತ್ತೆಯಾಗುತ್ತಿದೆ.
ಆದರೆ ಈ ಅಕ್ಕಿ ನಾಪತ್ತೆಯ ಬಗ್ಗೆ ಕೊಂಚವೂ ತಲೆಕೆಡಿಸಿಕೊಳ್ಳದ #ATMSarkara, ಬಡವರಿಗೆ ಪಡಿತರ ಅಕ್ಕಿ ವಿತರಿಸಲು, ಅಕ್ಕಿ ಎಲ್ಲಿಯೂ ದೊರೆಯುತ್ತಿಲ್ಲವೆಂದು ಮೊಸಳೆ ಕಣ್ಣೀರು ಸುರಿಸಿ, ಸದಾ ಇತರರ ಮೇಲೆ ಗೂಬೆ ಕೂರಿಸುತ್ತಿದೆ.
ನಾಪತ್ತೆಯಾಗಿರುವ ಈ… pic.twitter.com/nGpnbZHjl9
— BJP Karnataka (@BJP4Karnataka) August 19, 2023
ಇದನ್ನೂ ಓದಿ: ಸರ್ಕಾರಿ ಶಾಲಾ ಶಿಕ್ಷಕಿಗೆ ಅದ್ಧೂರಿ ಬೀಳ್ಕೊಡುಗೆ..! ಜನರಿಂದ ಭಾರಿ ಪ್ರಶಂಸೆ
ಸಚಿವ-ಶಾಸಕರ ಪತ್ರಗಳ ಸರಣಿ!
ರಾಜ್ಯದಲ್ಲಿ @INCKarnataka ಸರ್ಕಾರ ಆಹಾರ ಹಾಗೂ ಅಕ್ಕಿ ವಿತರಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ.
ಇದರ ನಡುವೆ ಹೊಸ ಪಡಿತರ ಚೀಟಿ ಕೊಡುವುದಕ್ಕೂ @siddaramaiah ಅವರ ಸರ್ಕಾರ ನಿರಾಕರಿಸಿದೆ.
3 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದರೂ ಪರಿಶೀಲನೆ ಮಾಡದೆ ಕಳ್ಳಾಟವಾಡಲಾಗುತ್ತಿದೆ. ಅಕ್ಕಿಯಲ್ಲೂ ಒಣ ರಾಜಕೀಯ ಮಾಡಿದ ಸರ್ಕಾರ ಮುಂದಿನ ತಿಂಗಳ… pic.twitter.com/1XvKleMI41
— BJP Karnataka (@BJP4Karnataka) August 19, 2023
‘ಮುಖ್ಯಮಂತ್ರಿ ಸಿದ್ದರಾಮಯ್ಯರವರ 3 ತಿಂಗಳ ಆಡಳಿತದಲ್ಲಿ, ಅವರ ವಿರುದ್ಧ ಅವರದೇ ಪಕ್ಷದ ಸಚಿವ-ಶಾಸಕರುಗಳು ಪತ್ರಗಳ ಸರಣಿಯನ್ನೇ ಬರೆದಿದ್ದಾರೆ. ಸಿದ್ದರಾಮಯ್ಯರ ಸರ್ಕಾರದ ಲಂಚಗುಳಿತನದ ವಿರುದ್ಧ ಈ ಹಿಂದೆ ಪತ್ರ ಬರೆದಿದ್ದರೆ, ಇದೀಗ ದಲಿತ ವಿರೋಧಿ ನೀತಿಗಳ ವಿರುದ್ಧ ಸಿಡಿದಿದ್ದಾರೆ. ಮುಖ್ಯಮಂತ್ರಿ ಹಾಗೂ ಸಚಿವರುಗಳು ಖುದ್ದು ಮುಖಕ್ಕೆ ಮುಖ ಕೊಟ್ಟು ಮಾತನಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ ಅಧಿಕಾರಕ್ಕಾಗಿ ಕಚ್ಚಾಡುವ ಇಂತಹ ಲಜ್ಜೆಗೇಡಿತನದ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಸಾಧ್ಯವೇ..?’ ಎಂದು ಬಿಜೆಪಿ ಪ್ರಶ್ನಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯರವರ ಮೂರು ತಿಂಗಳ ಆಡಳಿತದಲ್ಲಿ, ಅವರ ವಿರುದ್ಧ ಅವರದೇ ಪಕ್ಷದ ಸಚಿವ-ಶಾಸಕರುಗಳು ಪತ್ರಗಳ ಸರಣಿಯನ್ನೇ ಬರೆದಿದ್ದಾರೆ.
ಸಿದ್ದರಾಮಯ್ಯ ಅವರ ಸರ್ಕಾರದ ಲಂಚಗುಳಿತನದ ವಿರುದ್ಧ ಈ ಹಿಂದೆ ಪತ್ರ ಬರೆದಿದ್ದರೆ, ಇದೀಗ ದಲಿತ ವಿರೋಧಿ ನೀತಿಗಳ ವಿರುದ್ಧ ಸಿಡಿದಿದ್ದಾರೆ.
ಮುಖ್ಯಮಂತ್ರಿ ಹಾಗೂ ಸಚಿವರುಗಳು ಖುದ್ದು ಮುಖಕ್ಕೆ… pic.twitter.com/y2ZXWQTS3d
— BJP Karnataka (@BJP4Karnataka) August 19, 2023
ಆಪ್ತರಿಗೆ ಪ್ರಾಧಿಕಾರ ರಚನೆ!
‘ಕಡುಭ್ರಷ್ಟ ಅಧಿಕಾರಿಗಳನ್ನು ತಮ್ಮ ಹಾಗೂ ಸಚಿವರುಗಳ ವಿಶೇಷ ಕರ್ತವ್ಯ ಅಧಿಕಾರಿಗಳನ್ನಾಗಿ ನೇಮಿಸಿಕೊಂಡಿದ್ದ ಸಿದ್ದರಾಮಯ್ಯರ ಸರ್ಕಾರ, ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದೆ. ತನ್ನ ಆಪ್ತ ವಲಯದ ನಿವೃತ್ತ ಅಧಿಕಾರಿಗಳಿಗೆ ಹುದ್ದೆ ನೀಡಲು, ಸರ್ಕಾರದ ನಿಯಮಗಳೆಲ್ಲವನ್ನೂ ಗಾಳಿಗೆ ತೂರಿ ಹೊಸ ಪ್ರಾಧಿಕಾರಗಳನ್ನು ರಚಿಸುತ್ತಿದೆ. ರಾಜ್ಯದ ಬೊಕ್ಕಸದಲ್ಲಿ ನೌಕರರ ಸಂಬಳಕ್ಕೆ, ರಾಜ್ಯದ ಅಭಿವೃದ್ಧಿಗೆ ಹಣವಿಲ್ಲ. ಇಂತಹ ಕಷ್ಟದ ಸ್ಥಿತಿಯಲ್ಲಿ, ಹೊಸ ಪ್ರಾಧಿಕಾರದ ರಚನೆ!!!’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ: 26 ಟನ್ ಅಕ್ಕಿ ವಶಕ್ಕೆ!
ಮುಖ್ಯಮಂತ್ರಿ ಸಿದ್ದರಾಮಯ್ಯರವರ ಮೂರು ತಿಂಗಳ ಆಡಳಿತದಲ್ಲಿ, ಅವರ ವಿರುದ್ಧ ಅವರದೇ ಪಕ್ಷದ ಸಚಿವ-ಶಾಸಕರುಗಳು ಪತ್ರಗಳ ಸರಣಿಯನ್ನೇ ಬರೆದಿದ್ದಾರೆ.
ಸಿದ್ದರಾಮಯ್ಯ ಅವರ ಸರ್ಕಾರದ ಲಂಚಗುಳಿತನದ ವಿರುದ್ಧ ಈ ಹಿಂದೆ ಪತ್ರ ಬರೆದಿದ್ದರೆ, ಇದೀಗ ದಲಿತ ವಿರೋಧಿ ನೀತಿಗಳ ವಿರುದ್ಧ ಸಿಡಿದಿದ್ದಾರೆ.
ಮುಖ್ಯಮಂತ್ರಿ ಹಾಗೂ ಸಚಿವರುಗಳು ಖುದ್ದು ಮುಖಕ್ಕೆ… pic.twitter.com/y2ZXWQTS3d
— BJP Karnataka (@BJP4Karnataka) August 19, 2023
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.