ಸೆಪ್ಟೆಂಬರ್ 17, ಬೆಂಗಳೂರು: ಇಂಡಿಯನ್ ನ್ಯಾಷನಲ್ ಱಲಿ ಸ್ಪ್ರಿಂಟ್ ಚಾಂಪಿಯನ್‌ಶಿಪ್ 2022ರಲ್ಲಿ ಕರ್ನಾಟಕದ ನಟರಾಜ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಶನಿವಾರ ಬೆಂಗಳೂರಿನ ಹೊರವಲಯದ ದೇವನಹಳ್ಳಿಯಲ್ಲಿ ಇರುವ ಟ್ರೈಬಲ್ ಕೆಫೆಯಲ್ಲಿ ನಡೆದ ರೇಸ್‌ನಲ್ಲಿ ನಟರಾಜ್ ಮೊದಲ ಸ್ಥಾನ ಪಡೆದರು.
ಭಾರೀ ರೋಚಕತೆಯಿಂದ ಕೂಡಿದ್ದ ರೇಸ್‌ನಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಚಾಲಕರು ಪಾಲ್ಗೊಂಡಿದ್ದರು. ಕರ್ನಾಟಕದ ಅಗ್ರ ರೇಸರ್‌ಗಳಲ್ಲಿ ಒಬ್ಬರಾದ ರಾಜೇಂದ್ರ ಇ. 2ನೇ ಸ್ಥಾನ ಪಡೆದರು. ಸ್ಯಾಮುಯಲ್ ಜೇಕಬ್ 3ನೇ ಸ್ಥಾನ ಗಳಿಸಿದರು.
ಇದನ್ನೂ ಓದಿ-Weight Loss Tips: ರೋಟಿ ಅಥವಾ ಬ್ರೆಡ್? ತೂಕ ನಷ್ಟಕ್ಕೆ ಯಾವ ಆಹಾರ ಉತ್ತಮವೆಂದು ತಿಳಿಯಿರಿ
600 ಸಿಸಿ ವರೆಗಿನ ಸಾಮರ್ಥ್ಯದ ಬೈಕ್‌ಗಳ ರೇಸ್‌ನಲ್ಲಿ ರಾಜೇಂದ್ರ ಇ ಮೊದಲ ಸ್ಥಾನ ಪಡೆದರೆ, ನಟರಾಜ್ 2ನೇ ಸ್ಥಾನ ಗಳಿಸಿದರು. ಸ್ಯಾಮುಯಲ್ ಜೇಕಬ್ 3ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಈ ವಿಭಾಗದಲ್ಲಿ ಒಟ್ಟು 22 ಸ್ಪರ್ಧಿಗಳು ಪಾಲ್ಗೊಂಡಿದ್ದರು.
ಒಟ್ಟಾರೆ ಱಲಿ ಸ್ಪ್ರಿಂಟ್‌ನಲ್ಲಿ 100ರಕ್ಕೂ ಹೆಚ್ಚು ಸ್ಪರ್ಧಿಗಳು ಕಣಕ್ಕಿಳಿದಿದ್ದರು. ಇಂಡಿಯನ್ ನಾಷನಲ್ ಱಲಿ ಚಾಂಪಿಯನ್ಶಿಪ್ನ ದಕ್ಷಿಣ ವಲಯದ ರೇಸ್ ಇದಾಗಿದೆ. ಎಲ್ಲಾ ವಲಯಗಳಲ್ಲಿ ಗೆದ್ದವರು, ಗೋವಾದಲ್ಲಿ ನಡೆಯೋ ಫೈನಲ್ನಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿ ನ್ಯಾಷನಲ್ ಚಾಂಪಿಯನ್ ಯಾರು ಅನ್ನೋದು ನಿರ್ಧಾರವಾಗಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.