ನವದೆಹಲಿ: ರೊಟ್ಟಿ ಅಥವಾ ಬ್ರೆಡ್ ಇವೆರಡರಲ್ಲಿ ತೂಕ ಕಡಿಮೆ ಮಾಡಲು ಯಾವುದು ನಮಗೆ ಸಹಕಾರಿ ಆಹಾರ ಅನ್ನೋದರ ಬಗ್ಗೆ ಆಗಾಗ ಚರ್ಚೆಯಾಗ್ತಿರುತ್ತೆ. ಆದರೆ ಅನೇಕ ಕಾರಣಗಳಿಂದ ಹೆಚ್ಚಿನ ಆರೋಗ್ಯ ತಜ್ಞರು ನಮಗೆ ರೋಟಿ ಸೇವಿಸಲು ಸಲಹೆ ನೀಡುತ್ತಾರೆ. ಏಕೆಂದರೆ ಬ್ರೆಡ್ ಸಕ್ಕರೆ, Preservatives ಮತ್ತು ಅನೇಕ ಅನಾರೋಗ್ಯಕರ ಸಂಯುಕ್ತಗಳನ್ನು ಹೊಂದಿರುತ್ತದೆ, ಅದು ಬ್ರೌನ್ ಬ್ರೆಡ್ ಅಥವಾ ಮಲ್ಟಿಗ್ರೇನ್ ಬ್ರೆಡ್ ಆಗಿರಬಹುದು. ರೋಟಿ ನಾವು ಸಾಮಾನ್ಯವಾಗಿ ಗೋಧಿ ಹಿಟ್ಟಿನಿಂದ ಮಾಡುವ ದೈನಂದಿನ ಆಹಾರವಾಗಿದೆ. ರೋಟಿಯ ಸಹಾಯದಿಂದ ನಮ್ಮ ಹೆಚ್ಚುತ್ತಿರುವ ತೂಕವನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು ಅಂತಾ ತಿಳಿಯಿರಿ.
ಬ್ರೆಡ್ಗಿಂತ ರೋಟಿ ಏಕೆ ಉತ್ತಮ..?
1. ಪ್ರೋಟೀನ್, ಕಾರ್ಬ್ಸ್ ಮತ್ತು ಕರಗುವ ಫೈಬರ್ ಸೇರಿ ಹಲವಾರು ಪೋಷಕಾಂಶಗಳಿಂದ ಹೈ ಫೈಬರ್ ರೋಟಿ ಖಂಡಿತವಾಗಿಯೂ ಬ್ರೆಡ್ಗಿಂತ ಆರೋಗ್ಯಕರ ಆಯ್ಕೆಯಾಗಿದೆ. ಈ ಫೈಬರ್ಗಳು ನಿಮಗೆ ಶಕ್ತಿಯನ್ನು ನೀಡುತ್ತವೆ, ಆರೋಗ್ಯಕರ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತವೆ ಮತ್ತು ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.
ಇದನ್ನೂ ಓದಿ: Papaya Seeds : ಪಪ್ಪಾಯಿ ಬೀಜ ಹೀಗೆ ಬಳಸಿದ್ರೆ Belly Fat ಕೆಲವೇ ದಿನಗಳಲ್ಲಿ ಮಾಯವಾಗುತ್ತೆ!
2. ಜೀರೋ ಪ್ರಿಸರ್ವೇಟಿವ್ಸ್
ಬ್ರೆಡ್ ಅನ್ನು ಬಹಳಷ್ಟು Preservativesಗಳೊಂದಿಗೆ ತಯಾರಿಸಲಾಗುತ್ತದೆ. ಅದಕ್ಕಾಗಿಯೇ ಇದನ್ನು ಸುಮಾರು 1 ವಾರದವರೆಗೆ ತಿನ್ನಬಹುದು. ಆದರೆ ರೊಟ್ಟಿಗಳನ್ನು ತಕ್ಷಣವೇ ತಯಾರಿಸಿ ತಿನ್ನಲಾಗುತ್ತದೆ. ಆದ್ದರಿಂದ ತಾಜಾ ಆಹಾರ ಮತ್ತು ಕಡಿಮೆ Preservativesಗಳಿಂದ ರೋಟಿ ಆರೋಗ್ಯಕರವಾಗಿರುತ್ತದೆ. ತಾಜಾ ಆಹಾರ ಸೇವನೆಯಿಂದ ನಿಮ್ಮ ಆರೋಗ್ಯಕ್ಕೆ ಉತ್ತಮ.
3. ಶೂನ್ಯ ಯೀಸ್ಟ್
ಬ್ರೆಡ್ನಂತೆ ರೋಟಿಯಲ್ಲಿ ಯೀಸ್ಟ್ ಇರುವುದಿಲ್ಲ. ಬ್ರೆಡ್ ಮೃದುವಾಗಿರಿಸಲು ಯೀಸ್ಟ್ ಬಳಸಲಾಗುತ್ತದೆ. ಬ್ರೆಡ್ ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯಲ್ಲಿ ಅಡಚಣೆ ಉಂಟುಮಾಡಬಹುದು. ಇದು ನಿಮ್ಮ ದೇಹಕ್ಕೆ ಹಾನಿಕಾರಕವಾಗಿದ್ದು, ಹಲವು ರೋಗಗಳಿಗೆ ಕಾರಣವಾಗಬಹುದು.
ಇದನ್ನೂ ಓದಿ: ವಿಶ್ವ ರೆಟಿನಾ ದಿನ: ರೆಟಿನಾದ ಆರೋಗ್ಯಕ್ಕಾಗಿ ತಡೆಯಾತ್ಮಕ ಆರೈಕೆ
4. ಮಧುಮೇಹದ ಅಪಾಯ ಕಡಿಮೆ
ಬ್ರೆಡ್ ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತದೆ ಮತ್ತು ಇದನ್ನು ಹೆಚ್ಚಾಗಿ ಸಿಹಿ ಅಥವಾ ಖಾರವಾಗಿ ತಯಾರಿಸಲಾಗುತ್ತದೆ. ಇದು ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ರೋಗಿಗಳಿಗೆ ಅತ್ಯಂತ ಹಾನಿಕಾರಕವಾಗಿದೆ. ಆದ್ದರಿಂದ ನೀವು ರಕ್ತದ ಸಕ್ಕರೆ ಮತ್ತು ತೂಕವನ್ನು ನಿಯಂತ್ರಿಸಲು ಬಯಸಿದರೆ ಬ್ರೆಡ್ ಬದಲಿಗೆ ರೋಟಿ ಸೇವಿಸುವುದು ಉತ್ತಮ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.