Virat Kohli 10ನೇ ತರಗತಿ ರಿಸಲ್ಟ್ ಸೋರಿಕೆ, ಈ ವಿಷಯದಲ್ಲಿ ಫೇಲ್ ಆಗ್ತಾ ಆಗ್ತಾ ಎಸ್ಕೇಪ್ ಆಗಿದ್ದಾರೆ ಕಿಂಗ್ ಕೊಹ್ಲಿ!

Virat Kohli Marksheet Viral: ನಾಳೆಯಿಂದ ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಬೋರ್ಡ್ ಪರೀಕ್ಷೆಗಳು ಆರಂಭಗೊಳ್ಳಲಿವೆ.  10ನೇ ತರಗತಿ ಪರೀಕ್ಷೆ ಎಂದಾಕ್ಷಣ ಭಯ ಪಡುತ್ತಿದ್ದವರಿಗೆ ಈ ಸುದ್ದಿ ನಿಜಕ್ಕೂ ಸ್ವಲ್ಪ ನೆಮ್ಮದಿಯನ್ನು ನೀಡಬಹುದು. ಭಾರತ ಮಾತ್ರವಲ್ಲ, ವಿಶ್ವದ ದಿಗ್ಗಜ ಬ್ಯಾಟ್ಸ್‌ಮನ್‌ಗಳಲ್ಲೊಬ್ಬರಾದ ವಿರಾಟ್ ಕೊಹ್ಲಿ ಅವರ 10ನೇ ತರಗತಿ ಮಾರ್ಕ್‌ಶೀಟ್ ಲೀಕ್ ಆಗಿದೆ. ಆಗ ವಿರಾಟ್ ಕೊಹ್ಲಿಗೆ ಗಣಿತ ವಿಷಯದಲ್ಲಿ ತುಂಬಾ ಕಡಿಮೆ ಅಂಕಗಳು ಬಂದಿದ್ದವು.   

Written by - Nitin Tabib | Last Updated : Mar 30, 2023, 08:14 PM IST
  • ಭಾರತದಲ್ಲಷ್ಟೆ ಅಲ್ಲ, ವಿಶ್ವದ ದಿಗ್ಗಜ ಬ್ಯಾಟ್ಸ್‌ಮನ್‌ಗಳಲ್ಲೊಬ್ಬರಾದ ವಿರಾಟ್ ಕೊಹ್ಲಿ
  • ಅವರ 10ನೇ ತರಗತಿಯ ಮಾರ್ಕ್‌ಶೀಟ್ ಲೀಕ್ ಆಗಿದೆ.
  • ಆಗ ವಿರಾಟ್ ಗೆ ಗಣಿತದಲ್ಲಿ ಕೆಲವೇ ಅಂಕಗಳು ಬಂದಿದ್ದವು.
Virat Kohli 10ನೇ ತರಗತಿ ರಿಸಲ್ಟ್ ಸೋರಿಕೆ, ಈ ವಿಷಯದಲ್ಲಿ ಫೇಲ್ ಆಗ್ತಾ ಆಗ್ತಾ ಎಸ್ಕೇಪ್ ಆಗಿದ್ದಾರೆ ಕಿಂಗ್ ಕೊಹ್ಲಿ! title=
ವಿರಾಟ್ ಕೊಹ್ಲಿ 10ನೇ ತರಗತಿ ಮಾರ್ಕ್ಸ್ ಶೀಟ್

Virat Kohli Viral Marksheet: ಭಾರತದಲ್ಲಿ ಅನೇಕ ಜನರು ಶಾಲೆಯಲ್ಲಿದ್ದಾಗ ಗಣಿತ ಮತ್ತು ವಿಜ್ಞಾನ ಅಥವಾ ಸೈನ್ಸ್ ವಿಷಯಕ್ಕೆ ತುಂಬಾ ಹೆದರಿಸ್ರಬಹುದು. ಈ ಪಟ್ಟಿಯಲ್ಲಿ ಭಾರತದ ಸೂಪರ್‌ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೂಡ ಇದೀಗ ಶಾಮಿಲಾಗಿದ್ದಾರೆ. ಹೌದು, ವಿರಾಟ್ ಅವರ 10ನೇ ತರಗತಿಯ ಅಂಕಪಟ್ಟಿ ಸೋರಿಕೆಯಾಗಿದೆ. ವಿರಾಟ್ ಕೊಹ್ಲಿ ಈ ಎರಡೂ ವಿಷಯಗಳಲ್ಲಿ ಕಡಿಮೆ ಅಂಕಗಳನ್ನು ಪಡೆದಿರುವುದು ನಿಮಗೂ ಕೂಡ ಆಶ್ಚರ್ಯವನ್ನುಂಟು ಮಾಡಬಹುದು.

ಇದನ್ನೂ ಓದಿ-Viral Video: ಚಲಿಸುತ್ತಿರುವ ಬೈಕ್ ಮೇಲೆ ಪತಿಯಿಂದ ಏನು ಮಾಡಿಸುತ್ತಿದ್ದಾಳೆ ಪತ್ನಿ ನೋಡಿ...

ವಿರಾಟ್ ಅವರ 10ನೇ ಅಂಕಪಟ್ಟಿ ಸೋರಿಕೆ
ಭಾರತದಲ್ಲಷ್ಟೆ ಅಲ್ಲ, ವಿಶ್ವದ ದಿಗ್ಗಜ ಬ್ಯಾಟ್ಸ್‌ಮನ್‌ಗಳಲ್ಲೊಬ್ಬರಾದ ವಿರಾಟ್ ಕೊಹ್ಲಿ ಅವರ 10ನೇ ತರಗತಿಯ ಮಾರ್ಕ್‌ಶೀಟ್ ಲೀಕ್ ಆಗಿದೆ. ಆಗ ವಿರಾಟ್ ಗೆ ಗಣಿತದಲ್ಲಿ ಕೆಲವೇ ಅಂಕಗಳು ಬಂದಿದ್ದವು. ಗುರುವಾರ ಸ್ವತಃ ವಿರಾಟ್ ತಮ್ಮ 10ನೇ ತರಗತಿಯ ಅಂಕಪಟ್ಟಿಯ ಫೋಟೋ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ-Viral Video: ಎಪ್ಪೋ... ! 3 ಕೆಜಿ ತೂಕದ ಒಂದು ಬಾಳೆಹಣ್ಣು, ನೀವೆಂದಾದರೂ ನೋಡಿದ್ದೀರಾ ಅಥವಾ ಕೇಳಿದ್ದೀರಾ? ವಿಡಿಯೋ ನೋಡಿ..

'ಕಿಂಗ್' ಕೊಹ್ಲಿ ಗಣಿತ ಮತ್ತು ವಿಜ್ಞಾನದಲ್ಲಿ ದುರ್ಬಲರಾಗಿದ್ದರು
ವಿರಾಟ್ ಕೊಹ್ಲಿ 10ನೇ ತರಗತಿಯಲ್ಲಿ ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ತುಂಬಾ ದುರ್ಬಲರಾಗಿದ್ದರು. ಇದು ನಾವಲ್ಲ, ಅವರ ಅಂಕಪಟ್ಟಿ ಹೇಳುತ್ತಿದೆ. ಇತ್ತೀಚೆಗಷ್ಟೇ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ತಮ್ಮ ಟೆಸ್ಟ್ ಶತಕದ ಬರವನ್ನು ನೀಗಿಸಿದ ಕೊಹ್ಲಿಗೆ, ಯಾವುದೇ ವಿಷಯದಲ್ಲಿ ಅಂದರೆ 100ಕ್ಕೆ 100 ಅಂಕಗಳನ್ನು ಗಳಿಸಲು ಸಾಧ್ಯವಾಗಲಿಲ್ಲ. ಸಮಾಜ ವಿಜ್ಞಾನದಲ್ಲಿ 81 ಅಂಕ ಪಡೆದರೆ ಇಂಗ್ಲಿಷ್ ನಲ್ಲಿ ಅತಿ ಹೆಚ್ಚು ಅಂಕ ಪಡೆದಿದ್ದಾರೆ. ಅವರು ಗಣಿತದಲ್ಲಿ 51 ಅಂಕಗಳನ್ನು ಪಡೆದರೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಕೇವಲ 55 ಅಂಕಗಳನ್ನು ಪಡೆದಿದ್ದರು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News