Sunil Narine: 39 ಎಸೆತ… 85 ರನ್…! ಭರ್ಜರಿ ಬ್ಯಾಟಿಂಗ್’ನಿಂದಲೇ ರನ್ ಮಳೆ ಸುರಿಸಿದ ಕೆಕೆಆರ್ ಸ್ಟಾರ್ ಸುನಿಲ್ ನ’ರೈನ್’

Sunil Narine Half Century: ಟಾಸ್ ಗೆದ್ದ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಈ ಸಂದರ್ಭದಲ್ಲಿ ಆಗಮಿಸಿದ ವಿಂಡೀಸ್ ಮಾಂತ್ರಿಕ ಬೌಲರ್ ಸುನಿಲ್ ನರೈನ್, ಹೆಸರಿಗೆ ತಕ್ಕಂತೆ ರನ್ ಮಳೆಯನ್ನೇ ಸುರಿಸಿದ್ದಾರೆ.

Written by - Bhavishya Shetty | Last Updated : Apr 3, 2024, 09:19 PM IST
    • ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಪಂದ್ಯ
    • ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು
    • ಇನ್ನಿಂಗ್ಸ್ ಆರಂಭಿಸುವಾಗ ನರೈನ್ ಕೆಕೆಆರ್ ಗೆ ಉತ್ತಮ ಆರಂಭ ನೀಡಿದರು
Sunil Narine: 39 ಎಸೆತ… 85 ರನ್…! ಭರ್ಜರಿ ಬ್ಯಾಟಿಂಗ್’ನಿಂದಲೇ ರನ್ ಮಳೆ ಸುರಿಸಿದ ಕೆಕೆಆರ್ ಸ್ಟಾರ್ ಸುನಿಲ್ ನ’ರೈನ್’ title=
Sunil Narine

Sunil Narine Half Century: ಐಪಿಎಲ್ 2024ರ 16ನೇ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ವಿಶಾಖಪಟ್ಟಣಂನ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಕೊಲ್ಕತ್ತಾ ತಂಡ ಬ್ಯಾಟಿಂಗ್ ಮೂಲಕ ಅಬ್ಬರಿಸುತ್ತಿದೆ.

ಇದನ್ನೂ ಓದಿ: Mumbai Indians ಪಾಲಿಗೊಂದು ಗುಡ್ ನ್ಯೂಸ್, ತಂಡಕ್ಕೆ ಮರಳಿದ್ದಾನೆ ಈ ಸ್ಫೋಟಕ ಬ್ಯಾಟ್ಸ್ ಮನ್!

ಅಂದಹಾಗೆ ಟಾಸ್ ಗೆದ್ದ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಈ ಸಂದರ್ಭದಲ್ಲಿ ಆಗಮಿಸಿದ ವಿಂಡೀಸ್ ಮಾಂತ್ರಿಕ ಬೌಲರ್ ಸುನಿಲ್ ನರೈನ್, ಹೆಸರಿಗೆ ತಕ್ಕಂತೆ ರನ್ ಮಳೆಯನ್ನೇ ಸುರಿಸಿದ್ದಾರೆ.

ಇನ್ನಿಂಗ್ಸ್ ಆರಂಭಿಸುವಾಗ ನರೈನ್ ಕೆಕೆಆರ್ ಗೆ ಉತ್ತಮ ಆರಂಭ ನೀಡಿದರು.  ಅದ್ಭುತವಾಗಿ ಬ್ಯಾಟಿಂಗ್ ಮಾಡಿದ ನರೈನ್ ಬ್ಯಾಕ್ ಟು ಬ್ಯಾಕ್ ಸಿಕ್ಸರ್- ಬೌಂಡರಿ ಬಾರಿಸುವ ಮೂಲಕ ಅರ್ಧಶತಕವನ್ನು ಪೂರ್ಣಗೊಳಿಸಿದರು.

ಇದನ್ನೂ ಓದಿ:  ಜೂನ್ 4ರ ನಂತರ ರಾಜ್ಯ ಸರ್ಕಾರದ ದಿನಗಣನೆ ಆರಂಭ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಕೇವಲ 39 ಎಸೆತಕ್ಕೆ 85 ರನ್ ಕಲೆ ಹಾಕಿರುವ ಸುನಿಲ್, 7 ಸಿಕ್ಸರ್ ಮತ್ತು 7 ಬೌಂಡರಿ ಬಾರಿಸಿದ್ದಾರೆ. ಈ ಸಂದರ್ಭದಲ್ಲಿ ಇವರ ಸ್ಟ್ರೈಕ್ ರೇಟ್ 218 ಆಗಿತ್ತು. ಇನ್ನು ಒಟ್ಟಾರೆ ನೋಡುವುದಾದರೆ ಕೊಲ್ಕತ್ತಾ ತಂಡ ಅದ್ಭುವಾಗಿ ಬ್ಯಾಟಿಂಗ್ ಮಾಡುತ್ತಿದ್ದು ಬೃಹತ್ ಗೆಲುವಿನ ಮೊತ್ತದತ್ತ ಕಾಲಿಡುತ್ತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News