ನ್ಯಾಟಿಂಗಹ್ಯಾಮ್: ಇಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈಗ ಈ ಗೆಲುವನ್ನು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೇರಳದ ಪ್ರವಾಹ ಸಂತ್ರಸ್ತರಿಗೆ ಅರ್ಪಿಸಿದ್ಧಾರೆ.
Top performance by the boys! Amazing game and a great win. ✌️ pic.twitter.com/QXlULwh7PW
— Virat Kohli (@imVkohli) August 22, 2018
ಈ ಟೆಸ್ಟ್ ನಲ್ಲಿ ಕೊಹ್ಲಿ 97,103 ರನ್ ಗಳನ್ನು ಎರಡು ಇನ್ನಿಂಗ್ಸ್ ಗಳಲ್ಲಿ ಕ್ರಮವಾಗಿ ಗಳಿಸಿದ್ದರು. ಇವರ ಭರ್ಜರಿ ಪ್ರದರ್ಶನದಿಂದಾಗಿ ಭಾರತ ತಂಡವು ಒಟ್ಟು ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮೂರನೆ ಟೆಸ್ಟ್ ನ್ನು ಗೆಲ್ಲುವ ಮೂಲಕ ಸರಣಿಯನ್ನು ಜೀವಂತವಾಗಿರಿಸಿಕೊಂಡಿದೆ.
ಪಂದ್ಯ ಗೆಲುವು ಸಾಧಿಸಿದ ನಂತರ ಮಾತನಾಡಿದ ವಿರಾಟ್ ಕೊಹ್ಲಿ "ತಂಡವಾಗಿ ನಾವು ಈ ಗೆಲುವನ್ನು ಕೇರಳದ ಪ್ರವಾಹ ಪೀಡಿತ ಸಂತ್ರಸ್ತರಿಗೆ ಅರ್ಪಿಸುತ್ತೇವೆ.ಅಲ್ಲಿ ನಿಜಕ್ಕೂ ಕಷ್ಟದ ಪರಸ್ಥಿತಿ ಇದೆ ಎಂದು ತಿಳಿಸಿದರು. ಅಲ್ಲದೆ ತಮಗೆ ಯಾವಾಗಲು ಸ್ಫೂರ್ತಿ ತುಂಬುವ ನನ್ನ ಪತ್ನಿಗೂ ಸಹ ಈ ಗೆಲುವನ್ನು ಅರ್ಪಿಸಲು ಇಚ್ಚಿಸುತ್ತೇನೆ ಎಂದು ಕೊಹ್ಲಿ ತಿಳಿಸಿದರು.