South Africa New T20 Captain: ಟೀಂ ಇಂಡಿಯಾ ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ 4 ಮ್ಯಾಚ್ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಅದೇ ಸಮಯದಲ್ಲಿ, ದಕ್ಷಿಣ ಆಫ್ರಿಕಾ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಈ ಸರಣಿಯ ಮಧ್ಯೆ ದಕ್ಷಿಣ ಆಫ್ರಿಕಾ ತನ್ನ ಟಿ 20 ತಂಡದ ಹೊಸ ನಾಯಕನನ್ನು ಘೋಷಿಸಿದೆ. 28 ವರ್ಷದ ಆಟಗಾರನಿಗೆ ದಕ್ಷಿಣ ಆಫ್ರಿಕಾದ ಟಿ 20 ತಂಡದ ಜವಾಬ್ದಾರಿಯನ್ನು ನೀಡಲಾಗಿದೆ.
ಇದನ್ನೂ ಓದಿ: ಕನ್ನಡಿಗನ ʼಕಬ್ಜʼಕ್ಕೆ ಬಾಲಿವುಡ್ ಸೆಲೆಬ್ರಿಟಿಗಳು ಫಿದಾ..! ಏನಂದ್ರು ಗೊತ್ತಾ ಹಿಂದಿ ಮಂದಿ..?
ದಕ್ಷಿಣ ಆಫ್ರಿಕಾ ತಂಡವು 28 ವರ್ಷದ ಐಡೆನ್ ಮಾರ್ಕ್ರಾಮ್ ಅವರನ್ನು ಟೆಂಬಾ ಬವುಮಾ ಬದಲಿಗೆ ಟಿ 20 ತಂಡದ ನಾಯಕನಾಗಿ ಘೋಷಿಸಿದೆ. ಟೆಂಬಾ ಬವುಮಾ ಕಳೆದ ತಿಂಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. 2014 ರಲ್ಲಿ ನಡೆದ ಐಸಿಸಿ U-19 ವಿಶ್ವ ಕ್ರಿಕೆಟ್ ವಿಶ್ವಕಪ್’ನಲ್ಲಿ ದಕ್ಷಿಣ ಆಫ್ರಿಕಾ U-19 ತಂಡಕ್ಕೆ ಪ್ರಶಸ್ತಿ ಜಯ ನೀಡಿದ ಮಾರ್ಕ್ರಾಮ್ ಈಗ ಹಿರಿಯ ತಂಡದ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.
ಐಪಿಎಲ್ 2023 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್ ಐಡೆನ್ ಮಾರ್ಕ್ರಾಮ್ ಅವರನ್ನು ತನ್ನ ಹೊಸ ಕ್ಯಾಪ್ಟನ್ ಆಗಿ ನೇಮಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಅತ್ಯಂತ ಕಳಪೆ ರೂಪದಲ್ಲಿ ಮುನ್ನಡೆಯುತ್ತಿದ್ದಾರೆ. ಈ ಕಾರಣದಿಂದ ಫ್ರ್ಯಾಂಚೈಸ್ ಈ ವರ್ಷ ತಂಡದಿಂದ ಕೇನ್ ವಿಲಿಯಮ್ಸನ್‌ರನ್ನು ರಿಲೀಸ್ ಮಾಡಿತ್ತು.
ಐಪಿಎಲ್ 2022 ಹರಾಜಿನಲ್ಲಿ ಐಡೆನ್ ಮಾರ್ಕ್ರಾಮ್ ಖರೀದಿಸಲು ಸನ್‌ರೈಸರ್ಸ್ ಹೈದರಾಬಾದ್ 2.6 ಕೋಟಿ ರೂ. ವ್ಯಯಿಸಿತ್ತು. ಆ ಐಪಿಎಲ್ ಋತುವಿನಲ್ಲಿ, ಐಡೆನ್ ಮಾರ್ಕ್ರಾಮ್ 12 ಇನ್ನಿಂಗ್ಸ್‌ಗಳಲ್ಲಿ 139.05 ಮತ್ತು 381 ರನ್‌ಗಳನ್ನು ಸರಾಸರಿ 47.62ರಲ್ಲಿ ರನ್ ಗಳಿಸಿದರು.
ಇದನ್ನೂ ಓದಿ:ಅಯ್ಯೋ ದುರ್ವಿಧಿಯೇ…! ಮಿತಿಮೀರಿದ ಡಿಜೆ ಸೌಂಡ್’ಗೆ ಎದೆಒಡೆದು ಮಂಟಪದಲ್ಲಿಯೇ ಪ್ರಾಣಬಿಟ್ಟ ವರ
ದಕ್ಷಿಣ ಆಫ್ರಿಕಾದ ತಾರೆ ಬ್ಯಾಟ್ಸ್‌ಮನ್ ಐಡೆನ್ ಮಾರ್ಕ್ರಾಮ್ ಇದುವರೆಗೆ ಐಪಿಎಲ್‌ನಲ್ಲಿ ಒಟ್ಟು 20 ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು ಮೂರು ಅರ್ಧ ಸೇರಿ 527 ರನ್ ಗಳಿಸಿದ್ದಾರೆ. ಮಾರ್ಕ್ರಾಮ್ ಸರಾಸರಿ 40.54 ಆಗಿದ್ದರೆ, ಸ್ಟ್ರೈಕ್ ರೇಟ್ 134.10 ಆಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.