ಮುಂಬೈ: ಇಲ್ಲಿನ ಡಿ.ವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ (IPL 2022) ಟೂರ್ನಿಯ 15ನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಲಖ್ನೋ ಸೂಪರ್ ಜೈಂಟ್ಸ್ ತಂಡವು ಆರು ವಿಕೆಟ್ ಗಳ ರೋಚಕ ಗೆಲುವನ್ನು ಸಾಧಿಸಿದೆ.
ಇದನ್ನೂ ಓದಿ: IPL 2022 : ಬುಮ್ರಾ ಮತ್ತು ನಿತೀಶ್ ರಾಣಾ ವಿರುದ್ಧ ಕಠಿಣ ಕ್ರಮ ಕೈಗೊಂಡ ಬಿಸಿಸಿಐ!
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡು ಲಖ್ನೋ ಬೀಗುವಿನ ಬೌಲಿಂಗ್ ದಾಳಿ ನಡೆಸಿತ್ತು, ಒಂದೆಡೆ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಪೃಥ್ವಿ ಶಾ(61) ಅವರ ವಿಕೆಟ್ ಕಬಳಿಸಿದ ಕೆ.ಗೌತಮ್ ದೆಹಲಿ ತಂಡಕ್ಕೆ ಆಘಾತ ನೀಡಿದರು. ಈ ಹಂತದಲ್ಲಿ ಇನ್ನೇನು ಚೇತರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಯುವ ಸ್ಪಿನ್ ಬೌಲರ್ 9 ನೇ ಓವರ್ ನಲ್ಲಿ ಡೇವಿಡ್ ವಾರ್ನರ್ ಅವರನ್ನು ಹಾಗೂ 11 ನೇ ಓವರ್ ನಲ್ಲಿ ರೋವ್ ಮ್ಯಾನ್ ಪಾವೆಲ್ ಅವರ ವಿಕೆಟ್ ಕಬಳಿಸಿದ್ದು ದೆಹಲಿ ತಂಡದ ರನ್ ವೇಗಕ್ಕೆ ಕಡಿವಾಣ ತಂದಿತು.
ಇದಾದ ನಂತರ ರಿಷಬ್ ಪಂತ್ ಹಾಗೂ ಸರ್ಫರಾಜ್ ಖಾನ್ ಅವರು ಕ್ರಮವಾಗಿ 39 ಹಾಗೂ 36 ರನ್ ಗಳನ್ನು ಗಳಿಸುವ ಮೂಲಕ 20 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ದೆಹಲಿ ತಂಡವು 149 ರನ್ ಗಳನ್ನು ಗಳಿಸಲು ಸಾಧ್ಯವಾಯಿತು.
#LSG have got off to a great start with a 50-run partnership between @klrahul11 & Quinton de Kock 💪💪
Live - https://t.co/RH4VDWYbeX #LSGvDC #TATAIPL pic.twitter.com/GlGr4tAg6S
— IndianPremierLeague (@IPL) April 7, 2022
ಇದನ್ನೂ ಓದಿ: Career: ಅಮೃತ್ ಮುನ್ನಡೆ ಯೋಜನೆಯಡಿ ಉಚಿತ ಕೋರ್ಸ್ : ಅರ್ಜಿ ಆಹ್ವಾನ
150 ರನ್ ಗಳ ಗೆಲುವಿನ ಗುರಿಯನ್ನು ಪಡೆದ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವು ನಾಯಕ ಕೆ.ಎಲ್.ರಾಹುಲ್ ಹಾಗೂ ಡಿಕಾಕ್ ಮೊದಲ ವಿಕೆಟ್ ಗೆ 73 ರನ್ ಗಳನ್ನು ಗಳಿಸುವ ಮೂಲಕ ತಂಡವನ್ನು ಸುಲಭಗೊಳಿಸಿದರು. ಕೆ.ಎಲ್ ರಾಹುಲ್ 25 ಎಸೆತಗಳಲ್ಲಿ 24 ರನ್ ಗಳಿಸಿದರೆ, ಇನ್ನೊಂದೆಡೆಗೆ ಸ್ಪೋಟಕ ಬ್ಯಾಟಿಂಗ್ ಮಾಡಿದ ಡಿಕಾಕ್ ಕೇವಲ 52 ಎಸೆತಗಳಲ್ಲಿ ಎರಡು ಭರ್ಜರಿ ಸಿಕ್ಸರ್ ಹಾಗೂ 9 ಬೌಂಡರಿಗಳ ನೆರವಿನೊಂದಿಗೆ 80 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಇದಾದ ನಂತರ ಪಂದ್ಯದ ಮೇಲೆ ಹಿಡಿತ ಸಾಗುತ್ತಿದ್ದ ಸಂದರ್ಭದಲ್ಲಿ ಕೊನೆಯಲ್ಲಿ ಕ್ರುನಾಲ್ ಪಾಂಡ್ಯ 19 ಹಾಗೂ ಆಯುಶ್ ಬದೊನಿ 10 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು.ದೆಹಲಿ ಪರವಾಗಿ ಕುಲದೀಪ್ ಯಾದವ್ ಎರಡು ವಿಕೆಟ್ ಗಳನ್ನು ಪಡೆಯುವ ಮೂಲಕ ಮಿಂಚಿದರೆ, ಲಕ್ನೋ ಪರವಾಗಿ ರವಿ ಬಿಶ್ನೋಯಿ ಅವರು ಎರಡು ವಿಕೆಟ್ ಗಳನ್ನು ಪಡೆದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.