ಈ ಭಾರತೀಯ ಕ್ರಿಕೆಟಿಗನ ಐಪಿಎಲ್ ವೃತ್ತಿಜೀವನ ಮುಗಿದಿದೆಯೇ? ಈಗ ಟೀಂ ಇಂಡಿಯಾದಲ್ಲಿಯೂ ಸ್ಥಾನವಿಲ್ಲ!

ಕೊಟ್ಟ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಲು ವಿಫಲವಾಗಿರುವ ಮನೀಶ್ ಪಾಂಡೆ ಅವರಿಗೆ ಈಗ ಎಲ್ಲಾ ಬಾಗಿಲುಗಳು ಮುಚ್ಚಿವೆ.

Written by - Puttaraj K Alur | Last Updated : Sep 26, 2021, 06:57 AM IST
  • ಪದೇ ಪದೇ ಬ್ಯಾಟಿಂಗ್ ನಲ್ಲಿ ವೈಫಲ್ಯ ಅನುಭವಿಸುತ್ತಿರುವ ಮನೀಶ್ ಪಾಂಡೆ
  • ಫ್ಲಾಪ್ ಶೋ ಮುಂದುವರಿಸಿರುವ ಮನೀಶ್ ಪಾಂಡೆ ಹಿರಿಯ ಕ್ರಿಕೆಟಿಗರಿಂದ ಟೀಕೆಗೆ ಗುರಿಯಾಗಿದ್ದಾರೆ
  • ಸ್ಥಿರ ಪ್ರದರ್ಶನ ತೋರದ ಈ ಆಟಗಾರನ ವೃತ್ತಿಜೀವನ ಅಂತ್ಯಗೊಳ್ಳುವ ಹಂತದಲ್ಲಿದೆ ಎಂದು ಹೇಳಲಾಗುತ್ತಿದೆ
ಈ ಭಾರತೀಯ ಕ್ರಿಕೆಟಿಗನ ಐಪಿಎಲ್ ವೃತ್ತಿಜೀವನ ಮುಗಿದಿದೆಯೇ? ಈಗ ಟೀಂ ಇಂಡಿಯಾದಲ್ಲಿಯೂ ಸ್ಥಾನವಿಲ್ಲ! title=
ಮನೀಶ್ ಪಾಂಡೆ ಮತ್ತೊಮ್ಮೆ ಫ್ಲಾಪ್ ಎಂದು ಸಾಬೀತಾಗಿದೆ

ನವದೆಹಲಿ: ಸನ್ ರೈಸರ್ಸ್ ಹೈದರಾಬಾದ್ ತಂಡದ ಕ್ರಿಕೆಟಿಗ ಮನೀಶ್ ಪಾಂಡೆ(Manish Pandey) ಮತ್ತೊಮ್ಮೆ ಫ್ಲಾಪ್ ಎಂದು ಸಾಬೀತಾಗಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ನಿನ್ನೆ(ಸೆ.25) ಆಡಿದ ಪಂದ್ಯದಲ್ಲಿ ಅವರ ಬ್ಯಾಟ್ ಮತ್ತೊಮ್ಮೆ ಮೌನವಾಗಿದೆ. ನಿರಂತರವಾಗಿ ಬ್ಯಾಟಿಂಗ್ ವೈಫಲ್ ಅನುಭವಿಸುತ್ತಿರುವ ಮನೀಶ್ ಪಾಂಡೆ ಹಿರಿಯ ಕ್ರಿಕೆಟಿಗರು ಸೇರಿದಂತೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಬೇಕಾದ ಮನೀಶ್ ಪದೇ ಪದೇ ವೈಫಲ್ಯ ಅನುಭವಿಸುತ್ತಿದ್ದಾರೆ.

ಮನೀಶ್ ಪಾಂಡೆಗೆ ಮತ್ತೊಮ್ಮೆ ನಿರಾಶೆ

ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್(Punjab Kings) ವಿರುದ್ಧ ನಡೆದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ 37ನೇ ಪಂದ್ಯದಲ್ಲಿ ಮನೀಶ್ ಪಾಂಡೆ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದರು. ಆದರೆ ಅವರು ಬಹುಬೇಗನೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. 13 ಎಸೆತಗಳನ್ನು ಎದುರಿಸಿದ ಮನೀಶ್ ಕೇವಲ 23 ರನ್ ಗಳಿಸಿ ಔಟಾದರು. ರವಿ ಬಿಷ್ಣೋಯ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಪೆವಿಲಿಯನ್ ಗೆ ಅಟ್ಟಿದರು.

Manish-pandey--2.jpg

ಇದನ್ನೂ ಓದಿ: Hyderabad vs Punjab:ಬಿಶ್ನೋಯಿ, ಶಮಿ ಕೈ ಚಳಕಕ್ಕೆ ಹೈದರಾಬಾದ್ ತತ್ತರ

ನಿರಂತರವಾಗಿ ಫ್ಲಾಪ್ ಆಗುತ್ತಿರುವ ಮನೀಶ್

ಸೆಪ್ಟೆಂಬರ್ 22 ರಂದು ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಆಡಿದ ಪಂದ್ಯದಲ್ಲಿ ಮನೀಶ್ ಪಾಂಡೆ ಕೇವಲ 17 ರನ್ ಗಳಿಸಿ ಔಟಾದರು. ಸನ್ ರೈಸರ್ಸ್ ಹೈದರಾಬಾದ್(Sunrisers Hyderabad) ಅವರಿಗೆ ಪದೇ ಪದೇ ಅವಕಾಶಗಳನ್ನು ನೀಡುತ್ತಿದೆ ಆದರೆ ಅವರು ತಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಾಧ್ಯವಾಗುತ್ತಿಲ್ಲ. ಈ ಋತುವಿನಲ್ಲಿ ಮನೀಶ್ ಪ್ರದರ್ಶನ ಸ್ಥಿರವಾಗಿಲ್ಲ.

ಹೇಳಿಕೊಳ್ಳುವಂತಹ ಪ್ರದರ್ಶನ ನೀಡದ ಮನೀಶ್ ಪಾಂಡೆ(Manish Pandey) ಪ್ರಸಕ್ತ ಐಪಿಎಲ್ ಟೂರ್ನಿ(IPL 2021)ಯಲ್ಲಿ ಆಡಿದ  7 ಪಂದ್ಯಗಳಲ್ಲಿ 227 ರನ್ ಗಳಿಸಿದ್ದಾರೆ. 37.16 ಸಾಧಾರಣ ರನ್ ಸರಾಸರಿ ಹೊಂದಿರುವ ಅವರ ಸ್ಟ್ರೈಕ್ ರೇಟ್ 114.35 ಆಗಿದೆ. ಅವರು ಪ್ರಸಕ್ತ ಋತುವಿನಲ್ಲಿ 2 ಅರ್ಧಶತಕಗಳನ್ನು ಬಾರಿಸಿದ್ದರೂ, ಅವರ ತಂಡ ಸನ್ ರೈಸರ್ಸ್ ಹೈದರಾಬಾದ್ ಗೆ ಗೆಲುವು ತಂದುಕೊಡಲು ಸಾಧ್ಯವಾಗಿಲ್ಲ.  

ಆದರೆ ಅವರ ತಂಡ ಸನ್ ರೈಸರ್ಸ್ ಹೈದರಾಬಾದ್(Sunrisers Hyderabad) ಅನ್ನು ಪೂರ್ತಿಗೊಳಿಸುವಲ್ಲಿ ವಿಫಲರಾಗಿದ್ದಾರೆ. ಸ್ಟಾರ್ ಆಟಗಾರರಿದ್ದರೂ ಕೂಡ ಹೈದರಾಬಾದ್ ತಂಡ ಬ್ಯಾಟಿಂಗ್ ವೈಫಲ್ ಅನುಭವಿಸಿ ತಾನಾಡಿದ 9 ಪಂದ್ಯಗಳಲ್ಲಿ ಕೇವಲ 1 ಗೆಲವು ಸಾಧಸಿದ್ದು, 8 ಪಂದ್ಯಗಳನ್ನು ಸೋತು ಬಹುತೇಕ ಟೂರ್ನಿಯಿಂದಲೇ ಹೊರಬಿದ್ದಿದೆ.

ಇದನ್ನೂ ಓದಿ: IPL 2021:ನಿಷೇಧದ ಭೀತಿಯಲ್ಲಿ ಸಂಜು ಸ್ಯಾಮ್ಸನ್..! ಕಾರಣವೇನು ಗೊತ್ತೇ?

ಟಿ-20 ವಿಶ್ವಕಪ್ ನಿಂದಲೂ ಕೈಬಿಡಲಾಗಿದೆ

Manish-pandey--3.jpg

ಕೊಟ್ಟ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಲು ವಿಫಲವಾಗಿರುವ ಮನೀಶ್ ಪಾಂಡೆ(Manish Pandey) ಅವರಿಗೆ ಈಗ ಎಲ್ಲಾ ಬಾಗಿಲುಗಳು ಮುಚ್ಚಿವೆ. ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ತೋರದ ಈ ಆಟಗಾರನ ವೃತ್ತಿಜೀವನವು ಅಂತ್ಯಗೊಳ್ಳುವ ಹಂತದಲ್ಲಿದೆ ಎಂದು ಹೇಳಲಾಗುತ್ತಿದೆ. ಗಮನಿಸಬೇಕಾದ ಮಹತ್ವದ ಅಂಶವೆಂದರೆ ಮುಂಬರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ(Team India)ದಲ್ಲಿ ಮನೀಶ್ ಗೆ ಸ್ಥಾನವಿಲ್ಲ. ಬ್ಯಾಟಿಂಗ್ ನಲ್ಲಿ ವೈಫಲ್ಯ ಅನುಭವಿಸುತ್ತಿರುವ ಅವರನ್ನು ಟಿ-20 ವಿಶ್ವಕಪ್ ನಿಂದ ಕೈಬಿಡಲಾಗಿದೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News