IPL 2021:ನಿಷೇಧದ ಭೀತಿಯಲ್ಲಿ ಸಂಜು ಸ್ಯಾಮ್ಸನ್..! ಕಾರಣವೇನು ಗೊತ್ತೇ?

ದೆಹಲಿ ಕ್ಯಾಪಿಟಲ್ಸ್ ವಿರುದ್ಧ 33 ರನ್ ಗಳ ಸೋಲು ಅನುಭವಿಸಿದ ನಂತರ,ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರಿಗೆ ಮತ್ತೊಂದು ಆಘಾತ ಎದುರಾಗಿದೆ.

Written by - Zee Kannada News Desk | Last Updated : Sep 26, 2021, 12:03 AM IST
  • ದೆಹಲಿ ಕ್ಯಾಪಿಟಲ್ಸ್ ವಿರುದ್ಧ 33 ರನ್ ಗಳ ಸೋಲು ಅನುಭವಿಸಿದ ನಂತರ,ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರಿಗೆ ಮತ್ತೊಂದು ಆಘಾತ ಎದುರಾಗಿದೆ.
  • ಒಂದು ವೇಳೆ ಮೂರನೇ ಬಾರಿಯೂ ಹಾಗೆ ಆದಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಒಂದು ಪಂದ್ಯದಿಂದ ನಿಷೇಧಿಸಲಾಗುತ್ತದೆ.
 IPL 2021:ನಿಷೇಧದ ಭೀತಿಯಲ್ಲಿ ಸಂಜು ಸ್ಯಾಮ್ಸನ್..! ಕಾರಣವೇನು ಗೊತ್ತೇ? title=

ನವದೆಹಲಿ: ದೆಹಲಿ ಕ್ಯಾಪಿಟಲ್ಸ್ ವಿರುದ್ಧ 33 ರನ್ ಗಳ ಸೋಲು ಅನುಭವಿಸಿದ ನಂತರ,ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರಿಗೆ ಮತ್ತೊಂದು ಆಘಾತ ಎದುರಾಗಿದೆ.

"ಅಬುಧಾಬಿಯ ಜಾಯೆದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ತಮ್ಮ VIVO ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ರ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (Rajasthan Royals) ನಿಧಾನಗತಿಯ ದರವನ್ನು ಕಾಯ್ದುಕೊಂಡ ನಂತರ ದಂಡ ವಿಧಿಸಲಾಗಿದೆ" ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಇದನ್ನೂ ಓದಿ: IPL 2021: ಕನ್ನಡಿಗ ಕೆ.ಎಲ್.ರಾಹುಲ್ ಗೆ ಅದೃಷ್ಟ ಕೈಕೊಟ್ಟಾಗ..!

"ಐಪಿಎಲ್‌ನ ನೀತಿ ಸಂಹಿತೆಯ ಪ್ರಕಾರ ತಂಡದ ಅತಿ ಕಡಿಮೆ ದರಗಳ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣವಾಗಿದೆ, ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್‌ಗೆ 24 ಲಕ್ಷ ದಂಡ ವಿಧಿಸಲಾಗಿದೆ.ಪ್ಲೇಯಿಂಗ್ ಇಲೆವೆನ್ ನ ಉಳಿದ ಸದಸ್ಯರು ತಲಾ 6 ಲಕ್ಷ ಅಥವಾ ಅವರ ವೈಯಕ್ತಿಕ ಪಂದ್ಯದ ಶುಲ್ಕದ ಶೇ 25 ರಷ್ಟು ಕಡಿಮೆ ದಂಡವನ್ನು ವಿಧಿಸಬೇಕಾಗುತ್ತದೆ' ಎಂದು ಹೇಳಿಕೆ ತಿಳಿಸಿದೆ.

ಇದನ್ನೂ ಓದಿ:IPL ಡಬಲ್ ಧಮಾಕ: ಇಂದು ಡೆಲ್ಲಿ VS ರಾಜಸ್ಥಾನ್, ಹೈದರಾಬಾದ್ VS ಪಂಜಾಬ್ ಮುಖಾಮುಖಿ

ಐಪಿಎಲ್ ಫ್ರಾಂಚೈಸಿ ಅಗತ್ಯವಿರುವ ಬೌಲಿಂಗ್ ದರವನ್ನು ಕಾಯ್ದುಕೊಳ್ಳಲು ವಿಫಲವಾಗಿರುವುದು ಇದು ಎರಡನೇ ಬಾರಿಯಾಗಿದೆ.ರಾಜಸ್ಥಾನ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಎರಡು ರನ್ ಗಳ ರೋಚಕ ಗೆಲುವು ಸಾಧಿಸಿದಾಗ ನಿಧಾನಗತಿ ಬೌಲಿಂಗ್ ಹಿನ್ನಲೆಯಲ್ಲಿ ಅವರಿಗೆ 12 ಲಕ್ಷ ರೂ ದಂಡವನ್ನು ವಿಧಿಸಲಾಗಿತ್ತು.ಒಂದು ವೇಳೆ ಮೂರನೇ ಬಾರಿಯೂ ಹಾಗೆ ಆದಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಒಂದು ಪಂದ್ಯದಿಂದ ನಿಷೇಧಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News