ನವದೆಹಲಿ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಐಪಿಎಲ್ 2021 ಟೂರ್ನಿಯ 37 ನೇ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಪಂಜಾಬ್ ತಂಡವು 5 ರನ್ ಗಳ ರೋಚಕ ಗೆಲುವನ್ನು ಸಾಧಿಸಿದೆ.
ಇದನ್ನೂ ಓದಿ: ಪ್ರಧಾನಿ ಮೋದಿಯ ಈ ನಿರ್ಧಾರಕ್ಕೆ ಇಂಗ್ಲೆಂಡ್ ಕ್ರಿಕೆಟರ್ ಕೆವಿನ್ ಪಿಟರ್ಸನ್ ಮೆಚ್ಚುಗೆ..!
ಟಾಸ್ ಗೆದ್ದು ಮೊದಲು ಕ್ಷೇತ್ರ ರಕ್ಷಣೆಯನ್ನು ಆಯ್ದುಕೊಂಡ ಹೈದರಾಬಾದ್ ತಂಡವು ತನ್ನ ನಿರ್ಧಾರ ಸರಿ ಎನ್ನುವಂತೆ ಬೌಲಿಂಗ್ ಮಾಡಿತು.ಪಂಜಾಬ್ ತಂಡವನ್ನು 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 125 ರನ್ ಗಳಿಗೆ ನಿಯಂತ್ರಿಸಿತು. ಪಂಜಾಬ್ ತಂಡದ ಪರವಾಗಿ ತಂಡದ ನಾಯಕ ಕೆ.ಎಲ್ ರಾಹುಲ್ 21,ಹಾಗೂ ಮಕ್ರಂ ಗಳಿಸಿದ 27 ರನ್ ಗಳಿಗೆ ಅತ್ಯಧಿಕ ಮೊತ್ತವಾಗಿತ್ತು.ಹೈದರಾಬಾದ್ ಪರವಾಗಿ ಮಾರಕ ಬೌಲಿಂಗ್ ದಾಳಿ ನಡೆಸಿದ ಹೋಲ್ಡರ್ ಮೂರು ವಿಕೆಟ್ ಕಬಳಿಸುವ ಮೂಲಕ ಪಂಜಾಬ್ ತಂಡದ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದರು.
ಇದನ್ನೂ ಓದಿ- Pulse Oximeter: ಆಕ್ಸಿಮೀಟರ್ ಸಿಗುತ್ತಿಲ್ಲವೇ? ಚಿಂತಿಸಬೇಡಿ, ಇಲ್ಲಿದೆ ಅಗ್ಗದ ಆಯ್ಕೆ
That winning feeling! 👏 👏@PunjabKingsIPL hold their nerve and beat #SRH by 5 runs in Sharjah. 👍 👍 #VIVOIPL #SRHvPBKS
Scorecard 👉 https://t.co/B6ITrxUyyF pic.twitter.com/BR2dOwDEfZ
— IndianPremierLeague (@IPL) September 25, 2021
ಈ ಸುಲಭ ಗುರಿಯನ್ನು ಬೆನ್ನತ್ತಿದ್ದ ಹೈದರಾಬಾದ್ ತಂಡವು ಆರಂಭದಲ್ಲಿಯೇ ಡೇವಿಡ್ ವಾರ್ನರ್ ಹಾಗೂ ಕೇನ್ ವಿಲಿಯಮ್ಸ್ ಅವರ ವಿಕೆಟ್ ಗಳನ್ನು 10 ರನ್ ಗಳಾಗಿವಷ್ಟರಲ್ಲಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಒಂದು ಹಂತದಲ್ಲಿ ವ್ರುದ್ದಿಮಾನ್ ಸಹಾ 31 ಭದ್ರವಾಗಿ ನೆಲೆಯೂರುತ್ತಿದ್ದ ಸಂದರ್ಭದಲ್ಲಿ ರನ್ ಔಟ್ ಗೆ ಬಲಿಯಾದರು.
RUN-OUT! ☝️
A confusion in the middle and Saha departs for 31. @PunjabKingsIPL pick the 6th #SRH wicket. 👍 👍 #VIVOIPL #SRHvPBKS
Follow the match 👉 https://t.co/B6ITrxUyyF pic.twitter.com/ymD5dqe214
— IndianPremierLeague (@IPL) September 25, 2021
ಇನ್ನೊಂದೆಡೆ ಜೇಸನ್ ಹೋಲ್ಡರ್ ಪಂದ್ಯದ ಕೊನೆಯವರೆಗೂ ಅಜೇಯ 47 ರನ್ ಗಳಿಸಿದರು ಕೂಡ ತಂಡವನ್ನು ಗೆಲುವಿನ ದಡಕ್ಕೆ ಮುಟ್ಟಿಸಲು ಸಾಧ್ಯವಾಗಲಿಲ್ಲ.ಅಂತಿಮವಾಗಿ ಪಂಜಾಬ್ ತಂಡವು ಏಳು ವಿಕೆಟ್ ನಷ್ಟಕ್ಕೆ ಕೇವಲ 120 ರನ್ ಗಳನ್ನು ಮಾತ್ರ ಗಳಿಸಲಷ್ಟೇ ಶಕ್ತವಾಯಿತು.
ಪಂಜಾಬ್ ಪರವಾಗಿ ರವಿ ಬಿಶ್ನೋಯಿ ಮೂರು ಹಾಗೂ ಮೊಹಮ್ಮದ್ ಶಮಿ ಎರಡು ವಿಕೆಟ್ ಗಳನ್ನು ಪಡೆಯುವ ಮೂಲಕ ಪಂದ್ಯವನ್ನು ಪಂಜಾಬ್ ಕಡೆ ವಾಲುವಂತೆ ಮಾಡಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.