ಮೇರಿ ಕೋಮ್ ಗೆ ಬಾಕ್ಸಿಂಗ್ ನಲ್ಲಿ ಆರನೇ ಬಾರಿಗೆ ಒಲಿದ ವಿಶ್ವ ಚಾಂಪಿಯನ್ ಪಟ್ಟ

 ಇಲ್ಲಿನ ಇಂದಿರಾ ಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆದ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ಷಿಪ್ ನಲ್ಲಿ ಬಾಕ್ಸರ್ ಮೇರಿ ಕೊಮ್ ಅವರು ಉಕ್ರೇನ್ನ ಹನ್ನಾ ಒಖೋಟಾ ಅವರನ್ನು ಸೋಲಿಸುವ ಮೂಲಕ ದಾಖಲೆ ಆರನೇ ಬಾರಿಗೆ ಈ ಸಾಧನೆ ಮಾಡಿದ ವಿಶ್ವದ ಮೊದಲ ಮಹಿಳಾ ಬಾಕ್ಸರ್ ಎನ್ನುವ ಖ್ಯಾತಿಗೆ ಪಾತ್ರರಾದರು.

Last Updated : Nov 24, 2018, 05:51 PM IST
ಮೇರಿ ಕೋಮ್ ಗೆ ಬಾಕ್ಸಿಂಗ್ ನಲ್ಲಿ ಆರನೇ ಬಾರಿಗೆ ಒಲಿದ ವಿಶ್ವ ಚಾಂಪಿಯನ್ ಪಟ್ಟ  title=
Photo courtesy: Twitter/@AIBA_Boxing

ನವದೆಹಲಿ: ಇಲ್ಲಿನ ಇಂದಿರಾ ಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆದ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ಷಿಪ್ ನಲ್ಲಿ ಬಾಕ್ಸರ್ ಮೇರಿ ಕೊಮ್ ಅವರು ಉಕ್ರೇನ್ನ ಹನ್ನಾ ಒಖೋಟಾ ಅವರನ್ನು ಸೋಲಿಸುವ ಮೂಲಕ ದಾಖಲೆ ಆರನೇ ಬಾರಿಗೆ ಈ ಸಾಧನೆ ಮಾಡಿದ ವಿಶ್ವದ ಮೊದಲ ಮಹಿಳಾ ಬಾಕ್ಸರ್ ಎನ್ನುವ ಖ್ಯಾತಿಗೆ ಪಾತ್ರರಾದರು.

35 ವರ್ಷದ ಮೇರಿಕೊಮ್ ಅವರು ಉಕ್ರೇನ್ ನ  ಹನ್ನಾ ಒಖೋಟಾ  ಅವರನ್ನು 48ಕೆಜಿ ವಿಭಾಗದಲ್ಲಿ ಸೋಲಿಸುವ ಮೂಲಕ  ಈಗ ಆರು ಪ್ರಶಸ್ತಿಗಳನ್ನು ಗೆದ್ದ ಏಕೈಕ ಮಹಿಳಾ ಬಾಕ್ಸರ್ ಎನ್ನುವ ಖ್ಯಾತಿಯನ್ನು ಪಡೆದಿದ್ದಾರೆ. ಇದಕ್ಕೂ ಮೊದಲು ಐರ್ಲೆಂಡ್ ನ ಕೇಟೀ ಟೇಲರ್ ಅವರು ಐದು ಪ್ರಶಸ್ತಿಗಳನ್ನು ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು,

ಇದಲ್ಲದೆ,ಕ್ಯೂಬನ್ ಬಾಕ್ಸಿಂಗ್ ದಂತಕಥೆ ಫೆಲಿಕ್ಸ್ ಸಾವೊನ್ ಅವರನ್ನು ವಿಶ್ವ ಚಾಂಪಿಯನ್ಶಿಪ್ (ಪುರುಷ ಮತ್ತು ಮಹಿಳೆ) ಇತಿಹಾಸದಲ್ಲಿ  ಸರಿಗಟ್ಟಿದ ಸಾಧನೆಯನ್ನು ಮಾಡಿದ್ದಾರೆ.ಉತ್ತರ ಕೊರಿಯಾದ ಕಿಮ್ ಹೈಯಾಂಗ್ ಮಿ ಅವರನ್ನು ಸೆಮಿ-ಫೈನಲ್ನಲ್ಲಿ ಸೋಲಿಸಿ ಮೇರಿ ಕೊಂ ಫೈನಲ್ ಗೆ ತಲುಪಿದ್ದರು.

Trending News