ಐಸಿಸಿ ಟಾಪ್ 10 ಟೆಸ್ಟ್ ರ್ಯಾಕಿಂಗ್ ನಲ್ಲಿ ಸ್ಥಾನ ಪಡೆದ ಕನ್ನಡಿಗ ಮಾಯಂಕ್ ಅಗರವಾಲ್

 ಇತ್ತೀಚಿಗೆ ಬಿಡುಗಡೆಯಾದ ಐಸಿಸಿ ರ್ಯಾಕಿಂಗ್ ಪಟ್ಟಿಯಲ್ಲಿ ಕನ್ನಡಿಗ ಮಾಯಂಕ್ ಅಗರವಾಲ್ ಮೊದಲ ಬಾರಿಗೆ ಅಗ್ರ 10 ರಲ್ಲಿ ಸ್ಥಾನ ಪಡೆದಿದ್ದಾರೆ.

Last Updated : Nov 26, 2019, 08:42 PM IST
ಐಸಿಸಿ ಟಾಪ್ 10 ಟೆಸ್ಟ್ ರ್ಯಾಕಿಂಗ್ ನಲ್ಲಿ ಸ್ಥಾನ ಪಡೆದ ಕನ್ನಡಿಗ ಮಾಯಂಕ್ ಅಗರವಾಲ್ title=
file photo

ನವದೆಹಲಿ:  ಇತ್ತೀಚಿಗೆ ಬಿಡುಗಡೆಯಾದ ಐಸಿಸಿ ರ್ಯಾಕಿಂಗ್ ಪಟ್ಟಿಯಲ್ಲಿ ಕನ್ನಡಿಗ ಮಾಯಂಕ್ ಅಗರವಾಲ್ ಮೊದಲ ಬಾರಿಗೆ ಅಗ್ರ 10 ರಲ್ಲಿ ಸ್ಥಾನ ಪಡೆದಿದ್ದಾರೆ.

ಇನ್ನೊಂದೆಡೆಗೆ ವಿರಾಟ್ ಕೊಹ್ಲಿ ಅವರು ಬಾಂಗ್ಲಾದೇಶ ವಿರುದ್ಧದ ಮೊದಲ ಡೇ-ನೈಟ್ ಟೆಸ್ಟ್‌ನಲ್ಲಿ ಶತಕಗಳಿಸಿದ್ದರಿಂದಾಗಿ ಅಗ್ರ ಶ್ರೇಯಾಂಕಿತ ಸ್ಟೀವ್ ಸ್ಮಿತ್ ಅವರೊಂದಿಗೆ 25 ರಿಂದ ಮೂರು ಪಾಯಿಂಟ್‌ಗಳ ಅಂತರವನ್ನು ನಿವಾರಿಸಲು ಸಹಾಯ ಮಾಡಿತು.ಈಗ ಈ ಟಾಪ್ 10 ಪಟ್ಟಿಯಲ್ಲಿಚೇತೆಶ್ವರ್ ಪೂಜಾರ್ (4) ಅಜಿಂಕ್ಯಾ ರಹಾನೆ(5) ಸ್ಥಾನ ಪಡೆದ ಇತರ ಆಟಗಾರರಾಗಿದ್ದಾರೆ.

ಇತ್ತೀಚಿಗೆ ಕೊಲ್ಕೊತ್ತಾದಲ್ಲಿ ನಡೆದ ಹಗಲು ರಾತ್ರಿ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು 136 ರನ್ ಗಳಿಸುವ ಮೂಲಕ ಭಾರತ ತಂಡವು 2-0 ಅಂತರದಲ್ಲಿ ಟೆಸ್ಟ್ ಸರಣಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈಗ ಭಾರತ ತಂಡವು ಸರಣಿ ಗೆಲುವಿನಿಂದಾಗಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಶ್ರೇಯಾಂಕದಲ್ಲಿ 360 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ.

ವಿರಾಟ್ ಕೊಹ್ಲಿ ಅಷ್ಟೇ ಅಲ್ಲದೆ ಭಾರತದ ವೇಗಿಗಳಾದ ಇಶಾಂತ್ ಶರ್ಮಾ ಮತ್ತು ಉಮೇಶ್ ಯಾದವ್ ಕ್ರಮವಾಗಿ ಬಾಂಗ್ಲಾದೇಶದ ಮೊದಲ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಸರಣಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
 

Trending News