Mehidy Hasan : ಭಾರತ ಸೋಲಿಸಿದ ಈ 25 ವರ್ಷದ ಬಾಂಗ್ಲಾದ ಮೆಹಿದಿ ಹಸನ್ ಯಾರು ಗೊತ್ತಾ?

Mehidy Hasan Miraz : ಟೀಂ ಇಂಡಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಮೆಹಿದಿ ಹಸನ್ ಮಿರಾಜ್ ಬಾಂಗ್ಲಾದೇಶದ ಗೆಲುವಿನ ಹೀರೋ ಆಗಿ ಹೊರಹೊಮ್ಮಿದ್ದಾರೆ. ಹಸನ್ ಏಕಾಂಗಿಯಾಗಿ ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

Written by - Channabasava A Kashinakunti | Last Updated : Dec 4, 2022, 11:03 PM IST
  • ಬಾಂಗ್ಲಾದೇಶ vs ಟೀಂ ಇಂಡಿಯಾ ವಿರುದ್ಧದ ಮೊದಲ ಏಕದಿನ ಸರಣಿ
  • ಬಾಂಗ್ಲಾದೇಶಕ್ಕಾಗಿ ಇದುವರೆಗೆ 100 ಕ್ಕೂ ಹೆಚ್ಚು ಪಂದ್ಯ
  • ಮೆಹದಿ ಹಸನ್ ಬಗ್ಗೆ ನಿಮಗಾಗಿ ಕೆಲ ಆಸಕ್ತಿದಾಯಕ ವಿಷಯ
Mehidy Hasan : ಭಾರತ ಸೋಲಿಸಿದ ಈ 25 ವರ್ಷದ ಬಾಂಗ್ಲಾದ ಮೆಹಿದಿ ಹಸನ್ ಯಾರು ಗೊತ್ತಾ? title=

Mehidy Hasan Miraz : ಟೀಂ ಇಂಡಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಮೆಹಿದಿ ಹಸನ್ ಮಿರಾಜ್ ಬಾಂಗ್ಲಾದೇಶದ ಗೆಲುವಿನ ಹೀರೋ ಆಗಿ ಹೊರಹೊಮ್ಮಿದ್ದಾರೆ. ಹಸನ್ ಏಕಾಂಗಿಯಾಗಿ ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಮೆಹದಿ ಹಸನ್ ಗೆ ಕೇವಲ 25 ವರ್ಷ, ಆದರೆ ಅವರು ಬಾಂಗ್ಲಾದೇಶಕ್ಕಾಗಿ ಇದುವರೆಗೆ 100 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ಇಂದು ನಾವು ಮೆಹದಿ ಹಸನ್ ಬಗ್ಗೆ ನಿಮಗಾಗಿ ಕೆಲ ಆಸಕ್ತಿದಾಯಕ ವಿಷಯಗಳನ್ನು ತಂದಿದ್ದೇವೆ ಬನ್ನಿ..

ಈ ಪಂದ್ಯದಲ್ಲಿ ಮೆಹಿದಿ ಹಸನ್ ಮಿರಾಜ್ 38 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ಬಾಂಗ್ಲಾದೇಶಕ್ಕೆ ಗೆಲವು ತಂದುಕೊಂಡರು. ಬಾಂಗ್ಲಾದೇಶ 136 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿತು, ಆದರೆ ಮೆಹದಿ ಹಸನ್ ಇನ್ನಿಂಗ್ಸ್ ಆಧಾರದ ಮೇಲೆ ಮಾತ್ರ 187 ರನ್‌ಗಳ ಗುರಿಯನ್ನು ಸಾಧಿಸಲು ಸಾಧ್ಯವಾಯಿತು.

ಇದನ್ನೂ ಓದಿ : IND vs BAN : ಸಿಂಪಲ್ ಕ್ಯಾಚ್ ಬಿಟ್ಟು ಭಾರತದ ಸೋಲಿಗೆ ಕಾರಣನಾದ ಕೆಎಲ್ ರಾಹುಲ್!

ಮೆಹಿದಿ ಹಸನ್ ಮಿರಾಜ್ ಬಾಂಗ್ಲಾದೇಶ ಪರ ಇದುವರೆಗೆ ಒಟ್ಟು 35 ಟೆಸ್ಟ್ ಪಂದ್ಯಗಳು, 65 ODIಗಳು ಮತ್ತು 19 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಟೆಸ್ಟ್‌ನಲ್ಲಿ 1089 ರನ್ ಮತ್ತು 135 ವಿಕೆಟ್‌ಗಳನ್ನು ಗಳಿಸಿದ್ದಾರೆ, ಏಕದಿನದಲ್ಲಿ 653 ರನ್‌ಗಳೊಂದಿಗೆ 76 ವಿಕೆಟ್‌ಗಳು ಮತ್ತು ಟಿ 20 ನಲ್ಲಿ 216 ರನ್‌ಗಳನ್ನು ಗಳಿಸಿದ್ದಾರೆ. ಅಲ್ಲದೆ ಟಿ20ಯಲ್ಲಿ 8 ವಿಕೆಟ್‌ ಪಡೆದಿದ್ದಾರೆ.

ಮೆಹದಿ ಹಸನ್ 2016 ರಲ್ಲಿ ಬಾಂಗ್ಲಾದೇಶ ತಂಡದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು.  ಮೊದಲು ಟೆಸ್ಟ್ ತಂಡಕ್ಕೆ ಎಂಟ್ರಿ ನೀಡಿದರು, ಆದರೆ ಮರುವರ್ಷ ಹಸನ್ ODI ಮತ್ತು ಟಿ20 ತಂಡದಲ್ಲಿ ಸ್ಥಾನ ಗಳಿಸುವಲ್ಲಿ ಯಶಸ್ವಿಯಾದರು.

2019 ರಲ್ಲಿ, ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿರುವ ಮಸೀದಿಯ ಮೇಲೆ ಭಯೋತ್ಪಾದಕ ದಾಳಿ ನಡೆದಿತ್ತು. ಆ ಸಮಯದಲ್ಲಿ ಮೆಹಿದಿ ಹಸನ್ ಸಹ ನ್ಯೂಜಿಲೆಂಡ್ ಪ್ರವಾಸದಲ್ಲಿದ್ದರು. ಈ ಘಟನೆಯ ಕೂದಲೆಳೆ ಅಂತರದಲ್ಲಿ ಪಾರಾಗಿ ಪ್ರಾಣ ಉಳಿಸಿಕೊಂಡಿದ್ದಾರೆ.

ಮೆಹದಿ ಹಸನ್ 2019 ರಲ್ಲಿ ಸಪ್ತಪದಿ ತುಳದಿದ್ದಾರೆ. ವಿಶೇಷವೆಂದರೆ ಈ ಭಯೋತ್ಪಾದಕ ದಾಳಿಯ ಒಂದು ವಾರದ ನಂತರ ಮೆಹದಿ ತನ್ನ ಪ್ರೇಯಸಿ ರಬಿಯಾ ಅಖ್ತರ್ ಲವ್ ಮಾಡಿ ಮದುವೆಯಾಗಿದ್ದಾರೆ.

ಇದನ್ನೂ ಓದಿ : IND vs BAN : ಟೀಂ ಇಂಡಿಯಾದ ನಿರ್ಧಾರದ ಬಗ್ಗೆ ಕೋಪಗೊಂಡ ಜಡೇಜಾ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News