ಜನತಾ ಕರ್ಪ್ಯೂ ಬಗ್ಗೆ ಮಾಜಿ ನ್ಯೂಜಿಲೆಂಡ್ ಕೋಚ್ ಹೇಳಿದ್ದೇನು ಗೊತ್ತೇ ?

ಪ್ರಧಾನಿ ನರೇಂದ್ರ ಮೋದಿಯವರ ನಿರ್ದೇಶನದ ಮೇರೆಗೆ ಭಾರತದಲ್ಲಿ ಭಾನುವಾರ ಜನತಾ ಕರ್ಫ್ಯೂ ಜಾರಿಯಲ್ಲಿದೆ. ಕರ್ಪ್ಯೂನಿಂದಾಗಿ ಸ್ಥಬ್ದಗೊಂಡಿರುವ ವೀಡಿಯೋವನ್ನು ಹಂಚಿಕೊಂಡಿರುವ ನ್ಯೂಜಿಲೆಂಡ್‌ನ ಮಾಜಿ ಕೋಚ್ ಮತ್ತು ಆರ್‌ಸಿಬಿ ಕ್ರಿಕೆಟ್ ನಿರ್ದೇಶಕ ಮೈಕ್ ಹೆಸ್ಸನ್ ಅಚ್ಚರಿವ್ಯಕ್ತಪಡಿಸಿದ್ದಾರೆ.

Last Updated : Mar 22, 2020, 03:49 PM IST
ಜನತಾ ಕರ್ಪ್ಯೂ ಬಗ್ಗೆ ಮಾಜಿ ನ್ಯೂಜಿಲೆಂಡ್ ಕೋಚ್ ಹೇಳಿದ್ದೇನು ಗೊತ್ತೇ ? title=

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ನಿರ್ದೇಶನದ ಮೇರೆಗೆ ಭಾರತದಲ್ಲಿ ಭಾನುವಾರ ಜನತಾ ಕರ್ಫ್ಯೂ ಜಾರಿಯಲ್ಲಿದೆ. ಕರ್ಪ್ಯೂನಿಂದಾಗಿ ಸ್ಥಬ್ದಗೊಂಡಿರುವ ವೀಡಿಯೋವನ್ನು ಹಂಚಿಕೊಂಡಿರುವ ನ್ಯೂಜಿಲೆಂಡ್‌ನ ಮಾಜಿ ಕೋಚ್ ಮತ್ತು ಆರ್‌ಸಿಬಿ ಕ್ರಿಕೆಟ್ ನಿರ್ದೇಶಕ ಮೈಕ್ ಹೆಸ್ಸನ್ ಅಚ್ಚರಿವ್ಯಕ್ತಪಡಿಸಿದ್ದಾರೆ.

ಟ್ವಿಟ್ಟರ್ ನಲ್ಲಿ ಅವರು ಮುಂಬಯಿನಲ್ಲಿನ ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕದ ಯಾವುದೇ ವಾಹನ ಸಂಚಾರವಿಲ್ಲದಿರುವ ಕಿರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ತನ್ನ ಅಧಿಕೃತ ಟ್ವಿಟ್ಟರ್ ನಲ್ಲಿ ಹೆಸ್ಸನ್ ಮುಂಬೈನ ಖಾಲಿ ರಸ್ತೆಗಳ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ದೇಶವು ಕರೋನವೈರಸ್ ವಿರುದ್ಧ ಹೋರಾಡುತ್ತಿರುವುದರಿಂದ ಪ್ರಧಾನಿ ಮೋದಿಯವರ ಆದೇಶವನ್ನು ಜನರು ಅನುಸರಿಸುತ್ತಿರುವುದನ್ನು ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ.

'ಈ ನೋಟವನ್ನು ನನ್ನ ಹೋಟೆಲ್ ಕೋಣೆಯಿಂದ ಹಲವಾರು ವರ್ಷಗಳಿಂದ ನೋಡಿದ್ದೇನೆ. ಆದರೆ ಅದರ ಮೇಲೆ 1000 ಕ್ಕಿಂತ ಕಡಿಮೆ ಕಾರುಗಳಿಲ್ಲ ...ಭಾರತವು ಇಂದು ಕೊವಿಡ್ 19 ವಿರುದ್ಧ ಹೋರಾಡಲು 14 ಗಂಟೆಗಳ ಕಾಲ ಕರ್ಫ್ಯೂ ಜಾರಿಗೊಳಿಸಿದೆ. ಇದನ್ನು ಪಾಲಿಸಲಾಗುತ್ತಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮೊದಲು ಕೊರೊನಾ ವೈರಸ್ ಹಿನ್ನಲೆಯಲ್ಲಿ ಬಿಸಿಸಿಐ ಐಪಿಎಲ್ ನ 2020 ಆವೃತ್ತಿಯನ್ನು ಏಪ್ರಿಲ್ ೧೫ ರವರೆಗೆ ಮುಂದೂಡಿದೆ.ಪ್ರಧಾನಿ ಮೋದಿ ಪರಿಚಯಿಸಿದ ಜನತಾ ಕರ್ಫ್ಯೂ ಕ್ರಮದ ಆರಂಭವನ್ನು ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಶ್ಲಾಘಿಸಿದರು. ಅಲ್ಲದೆ ಬೀದಿಗಳು ಸ್ಥಬ್ದವಾಗಿರುವ  ಬಗ್ಗೆ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಜನತಾ ಕರ್ಪ್ಯೂ ಹಿನ್ನಲೆಯಲ್ಲಿ ಅಗತ್ಯ ಸೇವೆಗಳಲ್ಲಿರುವವರನ್ನು ಹೊರತುಪಡಿಸಿ ಯಾವುದೇ ನಾಗರಿಕರು ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ತಮ್ಮ ಮನೆಗಳಿಂದ ಹೊರಬರಬಾರದು ಎಂದು ಪ್ರಧಾನಿ ಮೋದಿ ಗುರುವಾರ ಮಾರ್ಚ್ 22 ರಂದು 'ಜನತಾ ಕರ್ಫ್ಯೂ' ಗೆ ಕರೆ ನೀಡಿದ್ದರು. ಕರೋನವೈರಸ್ ಸವಾಲನ್ನು ಸ್ವೀಕರಿಸಲು ದೇಶದ ಸನ್ನದ್ಧತೆಯನ್ನು ತೋರಿಸಲು ಇದೊಂದು ಸಣ್ಣ  ಪರೀಕ್ಷೆಯಾಗಿದೆ ಎಂದು ಅವರು ಪ್ರತಿಪಾದಿಸಿದರು.
 

Trending News