ಮಗಳು ICUನಲ್ಲಿ ಜೀವನ್ಮರಣ ಹೋರಾಟದಲ್ಲಿದ್ದರೂ ದೇಶಕ್ಕಾಗಿ ಆಡಿದ್ದ ಈ ಸ್ಟಾರ್ ಕ್ರಿಕೆಟಿಗ!

Mohammed Shami: ಮೊಹಮ್ಮದ್ ಶಮಿ ಅವರು 2016ರಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಕೋಲ್ಕತ್ತಾ ಟೆಸ್ಟ್ ನಲ್ಲಿ ಅದ್ಭುತ ಪ್ರದರ್ಶನ ನೀಡಿ, ಭಾರತ ತಂಡದ ಗೆಲುವಿಗೆ ಮುಖ್ಯ ಕೊಡುಗೆಯನ್ನು ನೀಡಿದ್ದರು. ಆದರೆ ಅದರಿಂದಾಚೆಗೆ ಅವರಿದ್ದ ಸ್ಥಿತಿಯ ಬಗ್ಗೆ ನಾವೆಲ್ಲರು ತಿಳಿದುಕೊಳ್ಳಲೇಬೇಕು.

Written by - Bhavishya Shetty | Last Updated : Nov 14, 2022, 12:37 PM IST
    • ಮೊಹಮ್ಮದ್ ಶಮಿ ಟೀಂ ಇಂಡಿಯಾದ ಅಸಾಧಾರಣ ಪ್ರತಿಭೆ
    • ಶಮಿ ಅವರು 2016ರಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಕೋಲ್ಕತ್ತಾ ಟೆಸ್ಟ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು
    • ಆದರೆ ಈ ಸಂದರ್ಭದಲ್ಲಿ ಅವರ ಮಗಳು ಆಸ್ಪತ್ರೆಗೆ ದಾಖಲಾಗಿದ್ದರು.
ಮಗಳು ICUನಲ್ಲಿ ಜೀವನ್ಮರಣ ಹೋರಾಟದಲ್ಲಿದ್ದರೂ ದೇಶಕ್ಕಾಗಿ ಆಡಿದ್ದ ಈ ಸ್ಟಾರ್ ಕ್ರಿಕೆಟಿಗ! title=
Mohammed Shami

Mohammed Shami: ಭಾರತದ ವೇಗಿ ಮೊಹಮ್ಮದ್ ಶಮಿ ಟೀಂ ಇಂಡಿಯಾದ ಅಸಾಧಾರಣ ಪ್ರತಿಭೆ. ಇವರ ಆಟದ ಶೈಲಿಗೆ ಮನಸೋಲದವರಿಲ್ಲ. ಆದರೆ ಇವರ ವೃತ್ತಿ ಜೀವನ ಎಷ್ಟೊಂದು ಅಂದವಾಗಿ ಕಾಣುತ್ತಿದೆಯೋ ಅಷ್ಟೇ ದುಃಖಕರವಾಗಿದೆ ಇವರ ನಿಜಜೀವನ. ಹೌದು ತಮ್ಮ ಕ್ರಿಕೆಟ್ ಜೀವನದಲ್ಲಿ ಮಿಂಚುತ್ತಿದ್ದರೂ ಸಹ ಆ ಸಂದರ್ಭದಲ್ಲಿ ಅವರು ಎದುರಿಸಿದ ಸಂಕಷ್ಟಗಳನ್ನು ಕೇಳಿದರೆ ಕರುಳು ಹಿಂಡುವಂತೆ ಭಾಸವಾಗುತ್ತದೆ.

ಮೊಹಮ್ಮದ್ ಶಮಿ ಅವರು 2016ರಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಕೋಲ್ಕತ್ತಾ ಟೆಸ್ಟ್ ನಲ್ಲಿ ಅದ್ಭುತ ಪ್ರದರ್ಶನ ನೀಡಿ, ಭಾರತ ತಂಡದ ಗೆಲುವಿಗೆ ಮುಖ್ಯ ಕೊಡುಗೆಯನ್ನು ನೀಡಿದ್ದರು. ಆದರೆ ಅದರಿಂದಾಚೆಗೆ ಅವರಿದ್ದ ಸ್ಥಿತಿಯ ಬಗ್ಗೆ ನಾವೆಲ್ಲರು ತಿಳಿದುಕೊಳ್ಳಲೇಬೇಕು.

ಇದನ್ನೂ ಓದಿ: Ben Stokes : 2016 ರ ವಿಶ್ವಕಪ್ ವಿಲನ್ ನಿಂದ 2019, 2022 ರ ವಿಶ್ವಕಪ್ ನ ಹೀರೋ ಆಗಿದ್ದು ಹೇಗೆ?

ಕೊಲ್ಕತ್ತಾ ಟೆಸ್ಟ್ ನಡೆಯುತ್ತಿದ್ದ ಸಂದರ್ಭದಲ್ಲಿ ಮೊಹಮ್ಮದ್ ಶಮಿ ಅವರ 14 ತಿಂಗಳ ಕಂದಮ್ಮ ಐಸಿಯುಗೆ ದಾಖಲಾಗಿದ್ದಳು. ತೀವ್ರ ಜ್ವರದಿಂದ ಬಳಲುತ್ತಿದ್ದ ಮಗುವನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಮೊಹಮ್ಮದ್ ಶಮಿ ಮಾತ್ರ ಈ ಎಲ್ಲಾ ನೋವನ್ನು ಮೆಟ್ಟಿ ನಿಂತು ತನ್ನ ದೇಶಕ್ಕಾಗಿ ಆಟವಾಡಿ ಗೆಲುವು ತಂದುಕೊಟ್ಟಿದ್ದರು.

ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನ ಎರಡನೇ ದಿನದಂದು ಶಮಿ ಅವರ ಮಗಳು ಐರಾ ತೀವ್ರ ಜ್ವರದಿಂದ ಬಳಲುತ್ತಿದ್ದರು. ಎರಡನೇ ದಿನದಾಟದ (ಅಕ್ಟೋಬರ್ 1) ಅಂತ್ಯದಲ್ಲಿ ಶಮಿ ಅವರಿಗೆ ಮಗಳ ಆರೋಗ್ಯದ ಬಗ್ಗೆ ತಿಳಿಸಲಾಯಿತು. ಪ್ರತೀ ದಿನ ಆಟ ಮುಗಿಯುತ್ತಿದ್ದಂತೆ ಶಮಿ ತಮ್ಮ ಮಗಳು ಐರಾಳನ್ನು ಭೇಟಿ ಮಾಡಿ ಬರುತ್ತಿದ್ದರು.

ಭಾರತವು ತವರಿನಲ್ಲಿ ತಮ್ಮ 250 ನೇ ಟೆಸ್ಟ್ ಅನ್ನು 178 ರನ್‌ಗಳಿಂದ ಗೆದ್ದಿತು. ಸರಣಿಯನ್ನು 2-0 ಅಂತರದಿಂದ ಗೆಲ್ಲುವ ಮೂಲಕ ಅಂದು ಟೆಸ್ಟ್‌ ಕ್ರಿಕೆಟ್ ನಲ್ಲಿ ನಂಬರ್ 1 ಶ್ರೇಯಾಂಕವನ್ನು ಗಳಿಸಿತು.

ಈ ಬಗ್ಗೆ ಅಂದು ಮಾತನಾಡಿದ್ದ ಶಮಿ, "ಆಸ್ಪತ್ರೆಯಿಂದ ಹಿಂದಿರುಗಿದ ನಂತರ ಪ್ರತಿ ರಾತ್ರಿ ನನ್ನ ಕ್ಯಾಪ್ಟನ್ ನನಗೆ ಸ್ಫೂರ್ತಿ ನೀಡುತ್ತಿದ್ದರು. ಹಾಗಾಗಿ, ನಾನು ಅವರಿಗೆ ತುಂಬಾ ಕೃತಜ್ಞನಾಗಿದ್ದೇನೆ.ಟೆಸ್ಟ್ ಮುಗಿಯುವ ವೇಳೆಗೆ ನನ್ನ ಮಗಳು ಗುಣಮುಖಳಾಗಬೇಕು ಎಂಬ ನಂಬಿಕೆಯನ್ನು ನೀಡಿದ ನನ್ನ ಜೊತೆಗಾರರಿಗೆ ನಾನು ಕೃತಜ್ಞನಾಗಿದ್ದೇನೆ" ಎಂದು ಹೇಳಿದ್ದರು.

ಇದನ್ನೂ ಓದಿ: Hardik Pandya: ಹಾರ್ದಿಕ್ ಪಾಂಡ್ಯ ಮರು ಎಂಟ್ರಿಯಿಂದ ಈ ಬೆಸ್ಟ್ ಪ್ಲೇಯರ್ ಕ್ರಿಕೆಟ್ ಜೀವನ ಅಂತ್ಯ?

ಇನ್ನು ಪಂದ್ಯ ಮುಗಿದ ದಿನವಾದ ಅಕ್ಟೋಬರ್ 3ರಂದು ಐರಾ ಚೇತರಿಸಿಕೊಂಡು ಮನೆಗೆ ಮರಳಿದ್ದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News