ದಿನಭವಿಷ್ಯ 01-01-2025: ಹೊಸ ವರ್ಷದ ಮೊದಲ ದಿನ ವ್ಯಾಘತ ಯೋಗ, ಈ ರಾಶಿಯವರಿಗೆ ಬಂಪರ್ ಆದಾಯ

Today Horoscope 01st January 2025: ಈ ದಿನ ಬುಧವಾರ ಉ.ಷಾ. ನಕ್ಷತ್ರ, ವ್ಯಾಘತ ಯೋಗ ಬಾಲವ ಕರಣ.  ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Jan 1, 2025, 07:02 AM IST
  • ಪುಷ್ಯ ಮಾಸ, ಶುಕ್ಲ ಪಕ್ಷ, ದ್ವಿತೀಯ ತಿಥಿಯ ಈ ದಿನ ಬುಧವಾರ
  • ಉ.ಷಾ. ನಕ್ಷತ್ರ, ವ್ಯಾಘತ ಯೋಗ ಬಾಲವ ಕರಣ.
  • ಮೇಷದಿಂದ ಮೀನ ರಾಶಿಯವರೆಗೆ ಹೊಸ ವರ್ಷದ ಮೊದಲ ದಿನವಾದ ಇಂದು ಹೇಗಿದೆ ತಿಳಿಯಿರಿ.
ದಿನಭವಿಷ್ಯ 01-01-2025:  ಹೊಸ ವರ್ಷದ ಮೊದಲ ದಿನ ವ್ಯಾಘತ ಯೋಗ, ಈ ರಾಶಿಯವರಿಗೆ ಬಂಪರ್ ಆದಾಯ title=

Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ಶಿಶಿರ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ದ್ವಿತೀಯ ತಿಥಿಯ ಈ ದಿನ ಬುಧವಾರ ಉ.ಷಾ. ನಕ್ಷತ್ರ, ವ್ಯಾಘತ ಯೋಗ ಬಾಲವ ಕರಣ. ಮೇಷದಿಂದ ಮೀನ ರಾಶಿಯವರೆಗೆ ಹೊಸ ವರ್ಷದ ಮೊದಲ ದಿನವಾದ ಇಂದು ಹೇಗಿದೆ ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ಇಂದು ಕೆಲಸದಲ್ಲಿ ಸೂಕ್ತ ರೀತಿಯಲ್ಲಿ ನಿಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದೇ ಇರಬಹುದು. ಇದು ನಿಮ್ಮ ನೆಮ್ಮದಿಯನ್ನು ಹಾಳುಮಾಡಬಹುದು. ಪ್ರೀತಿಯ ಸಂಗಾತಿಯು ನಿಮ್ಮ ಜೊತೆ ನಿಲ್ಲುವರು. ಭಾವನಾತ್ಮಕವಾಗಿ ಶುಭ ದಿನ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ದೀರ್ಘಕಾಲದಿಂದ ಕಾಡುತ್ತಿದ್ದ ಸಮಸ್ಯೆಗಳಿಗೆ ನೀವು ಇಂದು ಪರಿಹಾರ ಕಂಡುಕೊಳ್ಳಬಹುದು. ಯಾವುದೇ ವಿಚಾರವನ್ನು ಕಲಿಯುವಲ್ಲಿ ನಿಮ್ಮ ಆಸಕ್ತಿಯು ಬೇರೆಯವರಿಗೆ ಸ್ಪೂರ್ತಿಯಾಗಲಿದೆ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಯಾವುದೇ ನಿರ್ದಿಷ್ಟ ಕಾರಣವಿಲ್ಲದೆಯೂ ನಿಮ್ಮ ಮನಸ್ಸು ನಕಾರಾತ್ಮಕ ಆಲೋಚನೆಗಳತ್ತ ಹೊರಳಬಹುದು. ನಿಮ್ಮ ಹಾಸ್ಯ ನಡವಳಿಕೆಯು ನಿಮ್ಮನ್ನು ಭಾರೀ ನಷ್ಟದಿಂದ ಉಳಿಸುತ್ತದೆ. ಅನಿರೀಕ್ಷಿತ ಪ್ರೀತಿಯು ನಿಮ್ಮ ಜೀವನದ ದಿಕ್ಕನ್ನೇ ಬದಲಿಸಬಹುದು. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಇಂದು ನೀವು ಯಾರೊಂದಿಗಾದರೂ ಮಾತನಾಡುವಾಗ ನಿಮ್ಮ ಸಂಭಾಷಣೆ ಬಗ್ಗೆ ವಿಶೇಷ ಗಮನವಹಿಸಿ. ಕೆಲಸದಲ್ಲಿ ಅತಿಯಾದ ಮಾತು ನಿಮ್ಮನ್ನು ವಿಷಾದಿಸುವಂತೆ ಮಾಡಬಹುದು. ಆರೋಗ್ಯವು ಉತ್ತಮವಾಗಿರುತ್ತದೆ. 

ಇದನ್ನೂ ಓದಿ- 2025ರ ವರ್ಷ ಯಾವ ರಾಶಿಯವರಿಗೆ ತರಲಿದೆ ಅದೃಷ್ಟ, ಯಾರು ತಾಳ್ಮೆಯಿಂದಿರಬೇಕು..! ಇಲ್ಲಿದೆ ನಿಮ್ಮ ವಾರ್ಷಿಕ ಭವಿಷ್ಯ 

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಹೊಸ ವರ್ಷದ ಮೊದಲ ದಿನವು ನಿಮಗೆ ಭಾರೀ ಅದೃಷ್ಟವನ್ನು ನೀಡಲಿದೆ. ಯಾವುದೇ ಹೊಸ ವ್ಯವಹಾರಗಳಲ್ಲಿ ಕೈ ಹಾಕಲು ಹಿಂಜರಿಯಬೇಡಿ. ಹಣಕಾಸಿನ ಚಿಂತೆ ದೂರವಾಗುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಗಮನವಹಿಸಿ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ನೀವು ವ್ಯವಹಾರಕ್ಕೆ ಸಂಬಂಧಿಸಿದ ನಿಮ್ಮ ಆಲೋಚನೆಗಳನ್ನು ಆ ಸಂಬಂಧಿತ ವಿಶೇಷ ತಜ್ಞರೊಂದಿಗೆ ಚರ್ಚಿಸುವುದರಿಂದ ಉತ್ತಮ ಫಲ ಪಡೆಯುವಿರಿ.  ಉದ್ಯೋಗ ಕ್ಷೇತ್ರದಲ್ಲಿ ಭಾರೀ ಯಶಸ್ಸನ್ನು ಕಾಣುವಿರಿ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಹೊಸ ವರ್ಷದ ಮೊದಲ ದಿನ ನಿಮಗೆ ಶುಭ ಫಲಗಳನ್ನು ತರಲಿದೆ. ಸ್ನೇಹಿತರು, ಕುಟುಂಬಸ್ಥರೊಂದಿಗೆ ಅತ್ಯುತ್ತಮ ಸಮಯವನ್ನು ಕಳೆಯುವಿರಿ. ಸ್ವಂತ ವ್ಯವಹಾರ ಮಾಡುವವರಿಗೆ ಬಂಪರ್ ಆದಾಯ ದೊರೆಯಲಿದೆ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಹೊಸ ವರ್ಷದಲ್ಲಿ ನೀವೇನಾದರೂ ಬದಲಾವಣೆಗಳನ್ನು ತರಲು ಆಲೋಚಿಸುತ್ತಿದ್ದರೆ ಇದಕ್ಕಾಗಿ ಉತ್ತಮ ಅವಕಾಶಗಳನ್ನು ಪಡೆಯುವಿರಿ. ಹೆಚ್ಚಿನ ಪ್ರತಿರೋಧವಿಲ್ಲದೆ ಹೊಸ ವೇಗಕ್ಕೆ ನಿಮ್ಮನ್ನು ನೀವು ಹೊಂದಿಸಿಕೊಳ್ಳಿ. 

ಇದನ್ನೂ ಓದಿ- 2025ರಲ್ಲಿ ಈ ರಾಶಿಯವರಿಗೆ ಸಿಗಲಿದೆ ನಿಜವಾದ ಪ್ರೀತಿ, ನಿಮ್ಮ ಲವ್ ಲೈಫ್ ಹೇಗಿರುತ್ತೆ ಗೊತ್ತಾ...! 

ಧನು ರಾಶಿಯವರ ಭವಿಷ್ಯ (Sagittarius Horoscope):  
ದೀರ್ಘಕಾಲಿನ ಹಣಕಾಸು ಸಮಸ್ಯೆಗಳಿಗೆ ಇಂದು ಪರಿಹಾರ ಕಂಡುಕೊಳ್ಳುವಿರಿ. ಕುಟುಂಬದಲ್ಲಿ ಹೊಸ ಅತಿಥಿಯ ಆಗಮನವು ಸಂತೋಷವನ್ನು ಇಮ್ಮಡಿಗೊಳಿಸಲಿದೆ. ಪ್ರೀತಿಯ ಸಂಗಾತಿಯೊಂದಿಗೆ ಅನುರಾಗದ ಸಮಯವನ್ನು ಕಳೆಯುವಿರಿ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಹೊಸ ಯೋಜನೆಗಳಲ್ಲಿ ನಿಮ್ಮ ಶಕ್ತಿ, ಸಮಯ ವ್ಯರ್ಥ ಮಾಡುವ ಬದಲಿಗೆ ಈಗಾಗಲೇ ಇರುವ ಯೋಜನೆಗಳನ್ನು ಯಶಸ್ವಿಗೊಳಿಸಲು ಹೆಚ್ಚಿನ ಶ್ರಮ ವಹಿಸಿ. ಬೇರೆಯವರೊಂದಿಗೆ ಕಟುವಾಗಿ ಮಾತನಾಡುವುದನ್ನು ತಪ್ಪಿಸಿ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಅನಿರೀಕ್ಷಿತ ಮೂಲಗಳಿಂದ ಆದಾಯ ಹೊರಹೊಮ್ಮಬಹುದು. ವ್ಯವಹಾರದಲ್ಲಿ ಉತ್ತಮ ಲಾಭವನ್ನು ಗಳಿಸುವಿರಿ. ಗೆಳೆಯರೊಂದಿಗೆ ಆಹ್ಲಾದಕರ ಸಮಯವನ್ನು ಕಳೆಯುವಿರಿ. ಒಟ್ಟಾರೆಯಾಗಿ ಇಂದು ಸಂತಸದ ದಿನ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಇಂದು ನಿಮ್ಮ ಸುತ್ತಲೂ ಹರ್ಷಚಿತ್ತದ ವಾತಾವರಣ ನೀರ್ಮಾನವಾಗಲಿದೆ. ಕರ್ತವ್ಯಗಳ ಮೇಲೆ ನಿಮ್ಮ ಗಮನ ಅತ್ಯಗತ್ಯವಾಗಿದೆ. ಮನೆಯವರೊಂದಿಗೆ ಕೆಲವು ಒಳ್ಳೆಯ ಸಮಯವನ್ನು ಆನಂದಿಸುವಿರಿ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News