ವಿಶೇಷ ದಾಖಲೆ ಬರೆದು ಟಿ20ಯಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ: ಈ ಸಾಧನೆ ಮಾಡಿದ ಮೊದಲ ವಿಕೆಟ್ ಕೀಪರ್

DC vs CSK, MS Dhoni: ಟಿ20ಯಲ್ಲಿ ವಿಕೆಟ್ ಕೀಪರ್ ಆಗಿ 300 ಯಶಸ್ವಿ ಕ್ಯಾಚ್ ಪಡೆದ ಮೊದಲ ವಿಕೆಟ್‌ ಕೀಪರ್ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ.

Written by - Bhavishya Shetty | Last Updated : Mar 31, 2024, 10:14 PM IST
    • ಟಿ20ಯಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
    • ಧೋನಿ ಟಿ20 ಕ್ರಿಕೆಟ್‌’ನಲ್ಲಿ ಇದುವರೆಗೆ 300 ವಿಕೆಟ್‌’ಗಳನ್ನು ಉರುಳಿಸಿದ್ದಾರೆ
    • ಮೊದಲ ವಿಕೆಟ್‌ ಕೀಪರ್ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ
ವಿಶೇಷ ದಾಖಲೆ ಬರೆದು ಟಿ20ಯಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ: ಈ ಸಾಧನೆ ಮಾಡಿದ ಮೊದಲ ವಿಕೆಟ್ ಕೀಪರ್ title=
ms dhoni

DC vs CSK, MS Dhoni: IPL 2024ರ 13 ನೇ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯುತ್ತಿದೆ. ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಇತಿಹಾಸ ನಿರ್ಮಿಸಿದ್ದಾರೆ. ರವೀಂದ್ರ ಜಡೇಜಾ ಎಸೆತದಲ್ಲಿ ಧೋನಿ ಪೃಥ್ವಿ ಶಾ ಅವರನ್ನು ಔಟ್ ಮಾಡಿದರು. ಈ ಮೂಲಕ ಟಿ20ಯಲ್ಲಿ ವಿಕೆಟ್ ಕೀಪರ್ ಆಗಿ 300 ಯಶಸ್ವಿ ಕ್ಯಾಚ್ ಪಡೆದ ಮೊದಲ ವಿಕೆಟ್‌ ಕೀಪರ್ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ ಮೊಬೈಲ್ ನಂಬರ್ ಬಹಿರಂಗ..!? ಹೀಗಿದೆ ಸಂಪರ್ಕ ಸಂಖ್ಯೆ

ಧೋನಿ ಟಿ20 ಕ್ರಿಕೆಟ್‌’ನಲ್ಲಿ ಇದುವರೆಗೆ 300 ವಿಕೆಟ್‌’ಗಳನ್ನು ಉರುಳಿಸಿದ್ದಾರೆ. ಟಿ20ಯಲ್ಲಿ ಗರಿಷ್ಠ ವಿಕೆಟ್‌ ಪಡೆದ ಇತರ ವಿಕೆಟ್‌ ಕೀಪರ್‌ಗಳ ಬಗ್ಗೆ ಮಾತನಾಡುವುದಾದರೆ, ಪಾಕಿಸ್ತಾನದ ಕಮ್ರಾನ್ ಅಕ್ಮಲ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ದಿನೇಶ್ ಕಾರ್ತಿಕ್ ಮೂರನೇ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ನಾಲ್ಕನೇ ಸ್ಥಾನದಲ್ಲಿ ಮತ್ತು ಇಂಗ್ಲೆಂಡ್‌’ನ ಜೋಸ್ ಬಟ್ಲರ್ ಐದನೇ ಸ್ಥಾನದಲ್ಲಿದ್ದಾರೆ.

T-20 ನಲ್ಲಿ ಅತಿ ಹೆಚ್ಚು ಔಟ್ ಮಾಡಿದ ವಿಕೆಟ್ ಕೀಪರ್

300 - ಮಹೇಂದ್ರ ಸಿಂಗ್ ಧೋನಿ

274 - ಕಮ್ರಾನ್ ಅಕ್ಮಲ್

274 - ದಿನೇಶ್ ಕಾರ್ತಿಕ್

270 - ಕ್ವಿಂಟನ್ ಡಿ ಕಾಕ್

209 - ಜೋಸ್ ಬಟ್ಲರ್

ಇದನ್ನೂ ಓದಿ: ಟೀಂ ಇಂಡಿಯಾ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಅಳಿಯ ಯಾರು ಗೊತ್ತಾ? ಅಂದದಲ್ಲಿ ಮಾವನನ್ನೇ ಮೀರಿಸುವಷ್ಟು ಸುಂದರಾಂಗ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News