ಟಾಪ್ ಆಟಗಾರರ ಗುತ್ತಿಗೆ ಪಟ್ಟಿಯಿಂದ ಎಂ.ಎಸ್ ಧೋನಿ ಕೈಬಿಟ್ಟ ಬಿಸಿಸಿಐ

ಭಾರತದ ಹಿರಿಯ ಪುರುಷ ಆಟಗಾರರಿಗಾಗಿ ಹೊಸ ಆಟಗಾರರ ಒಪ್ಪಂದಗಳನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ ಪ್ರಕಟಿಸಿದ್ದು, ನಾಲ್ಕು ವರ್ಗೀಕರಣಗಳು ಆಟಗಾರರನ್ನು ವಿಭಜಿಸಿವೆ. ವಿಶೇಷವೆಂದರೆ, ಭಾರತದ ಮಾಜಿ ನಾಯಕ ಎಂ.ಎಸ್.ಧೋನಿ ಅವರನ್ನು ಬಿಸಿಸಿಐನ ಕೇಂದ್ರ ಗುತ್ತಿಗೆ ಆಟಗಾರರ ಪಟ್ಟಿಯಿಂದ ಕೈಬಿಡಲಾಗಿದೆ.

Last Updated : Jan 16, 2020, 03:29 PM IST
ಟಾಪ್ ಆಟಗಾರರ ಗುತ್ತಿಗೆ ಪಟ್ಟಿಯಿಂದ ಎಂ.ಎಸ್ ಧೋನಿ ಕೈಬಿಟ್ಟ ಬಿಸಿಸಿಐ title=

ನವದೆಹಲಿ: ಭಾರತದ ಹಿರಿಯ ಪುರುಷ ಆಟಗಾರರಿಗಾಗಿ ಹೊಸ ಆಟಗಾರರ ಒಪ್ಪಂದಗಳನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ ಪ್ರಕಟಿಸಿದ್ದು, ನಾಲ್ಕು ವರ್ಗೀಕರಣಗಳು ಆಟಗಾರರನ್ನು ವಿಭಜಿಸಿವೆ. ವಿಶೇಷವೆಂದರೆ, ಭಾರತದ ಮಾಜಿ ನಾಯಕ ಎಂ.ಎಸ್.ಧೋನಿ ಅವರನ್ನು ಬಿಸಿಸಿಐನ ಕೇಂದ್ರ ಗುತ್ತಿಗೆ ಆಟಗಾರರ ಪಟ್ಟಿಯಿಂದ ಕೈಬಿಡಲಾಗಿದೆ.

ಈ ನಿರ್ಧಾರ ಈಗ 2019 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿಫೈನಲ್ ಸೋಲಿನ ನಂತರ ಕ್ರಿಕೆಟ್ ಗೆ ವಾಪಸ್ ಆಗದ  ಧೋನಿ ಭವಿಷ್ಯದ ಬಗ್ಗೆ ಹೊಸ ಅನುಮಾನಗಳನ್ನು ಹುಟ್ಟುಹಾಕಿದೆ. ಎಂ.ಎಸ್.ಧೋನಿ, ದಿನೇಶ್ ಕಾರ್ತಿಕ್, ಖಲೀಲ್ ಅಹ್ಮದ್ ಮತ್ತು ಇತ್ತೀಚೆಗೆ ನಿವೃತ್ತರಾದ ಅಂಬತಿ ರಾಯುಡು ಅವರನ್ನು ಕೇಂದ್ರ ಒಪ್ಪಂದದಿಂದ ಕೈಬಿಡಲಾಗಿದೆ. ಬಿಸಿಸಿಐ 2019 ರ ಅಕ್ಟೋಬರ್‌ನಿಂದ 2020 ರ ಸೆಪ್ಟೆಂಬರ್ ವರೆಗೆ ಕೇಂದ್ರ ಒಪ್ಪಂದಗಳನ್ನು ಘೋಷಿಸಿತು. ಧೋನಿ ಎ ವಿಭಾಗದಲ್ಲಿದ್ದರು, ಇದಕ್ಕಾಗಿ ಅವರು 5 ಕೋಟಿ ರೂ ಪಡೆಯುತ್ತಿದ್ದರು.

2019 ರ ಅಕ್ಟೋಬರ್‌ನಿಂದ 2020 ರ ಸೆಪ್ಟೆಂಬರ್ ವರೆಗೆ ಒಪ್ಪಂದಗಳು ಎ + (7 ಕೋಟಿ ರೂ.), ಎ (5 ಕೋಟಿ ರೂ.), ಬಿ (3 ಕೋಟಿ ರೂ.) ಮತ್ತು ಸಿ (1 ಕೋಟಿ ರೂ.) ಎಂಬ ನಾಲ್ಕು ವಿಭಾಗಗಳಾಗಿವೆ. ಈ ನಾಲ್ಕು ವಿಭಾಗಗಳಾಗಿ 27 ಆಟಗಾರರನ್ನು ವಿಂಗಡಿಸಲಾಗಿದ್ದು, ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್ಪ್ರಿತ್ ಬುಮ್ರಾ ಅವರು ಎ + ವಿಭಾಗದಲ್ಲಿ ಮೂವರಾಗಿದ್ದಾರೆ.

ಬಿಸಿಸಿಐ ಬಿಡುಗಡೆಯ ಪ್ರಕಾರ, ಇತರ ವಿಭಾಗಗಳಲ್ಲಿನ ಆಟಗಾರರು ಈ ಕೆಳಗಿನಂತಿದ್ದಾರೆ:

ವರ್ಗ ಎ: ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಕೆಎಲ್ ರಾಹುಲ್, ಶಿಖರ್ ಧವನ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಕುಲದೀಪ್ ಯಾದವ್ ಮತ್ತು ರಿಷಭ್ ಪಂತ್.

ವರ್ಗ ಬಿ: ವೃದ್ಧಿಮಾನ್ ಸಹಾ, ಉಮೇಶ್ ಯಾದವ್, ಯುಜ್ವೇಂದ್ರ ಚಹಲ್, ಹಾರ್ದಿಕ್ ಪಾಂಡ್ಯ, ಮಾಯಾಂಕ್ ಅಗರ್ವಾಲ್.

ವರ್ಗ ಸಿ: ಕೇದಾರ ಜಾಧವ್, ನವದೀಪ್ ಸೈನಿ, ದೀಪಕ್ ಚಹರ್, ಮನೀಶ್ ಪಾಂಡೆ, ಹನುಮಾ ವಿಹಾರಿ, ಶಾರ್ದುಲ್ ಠಾಕೂರ್, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್.

Trending News