ಟ್ವಿಟ್ಟರ್ ನಲ್ಲಿ ಟ್ರೋಲ್ ಗೆ ಒಳಗಾದ ಎಂ.ಎಸ್.ಧೋನಿ ಹೊಸ ಲುಕ್

ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ದೇಶಾದ್ಯಂತ ಲಾಕ್ ಡೌನ್ ಇರುವ ಸಂದರ್ಭದಲ್ಲಿ ಅನೇಕ ಭಾರತೀಯ ಕ್ರಿಕೆಟಿಗರು ಸೋಷಿಯಲ್ ಮೀಡಿಯಾದ ಮೂಲಕ ಲೈವ್ ಚಾಟ್ ಗಳನ್ನು ನಡೆಸುವ ಮೂಲಕ ಅಭಿಮಾನಿಗಳಿಗೆ ಹೊಸ ಅಪ್ಡೇಟ್ ಗಳನ್ನು ನೀಡುತ್ತಿರುತ್ತಾರೆ.

Last Updated : May 9, 2020, 05:37 PM IST
ಟ್ವಿಟ್ಟರ್ ನಲ್ಲಿ ಟ್ರೋಲ್ ಗೆ ಒಳಗಾದ ಎಂ.ಎಸ್.ಧೋನಿ ಹೊಸ ಲುಕ್  title=
Photo Courtsey : Twitter

ನವದೆಹಲಿ: ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ದೇಶಾದ್ಯಂತ ಲಾಕ್ ಡೌನ್ ಇರುವ ಸಂದರ್ಭದಲ್ಲಿ ಅನೇಕ ಭಾರತೀಯ ಕ್ರಿಕೆಟಿಗರು ಸೋಷಿಯಲ್ ಮೀಡಿಯಾದ ಮೂಲಕ ಲೈವ್ ಚಾಟ್ ಗಳನ್ನು ನಡೆಸುವ ಮೂಲಕ ಅಭಿಮಾನಿಗಳಿಗೆ ಹೊಸ ಅಪ್ಡೇಟ್ ಗಳನ್ನು ನೀಡುತ್ತಿರುತ್ತಾರೆ.

ಆದರೆ ಭಾರತದ ಮಾಜಿ ನಾಯಕ ಎಂ.ಎಸ್. ಧೋನಿ ಮಾತ್ರ ವಿರಳವಾಗಿದ್ದಾರೆ. ಈಗ ಜೀವಾ ಧೋನಿ ಅವರ ಇನ್‌ಸ್ಟಾಗ್ರಾಮ್ ವೀಡಿಯೊದಲ್ಲಿ ಧೋನಿಯ ಹೊಸ ಅವತಾರದಲ್ಲಿ ಪ್ರತ್ಯಕ್ಷವಾಗಿರುವುದಕ್ಕೆ ಕ್ರಿಕೆಟ್ ಅಭಿಮಾನಿಗಳಿಗೆ ಸಾಕಷ್ಟು ಅಚ್ಚರಿಯನ್ನುಂಟು ಮಾಡಿದೆ.

 
 
 
 

 
 
 
 
 
 
 
 
 

#runninglife post sunset !

A post shared by ZIVA SINGH DHONI (@ziva_singh_dhoni) on

ಈ ವೀಡಿಯೊದಲ್ಲಿ, ಧೋನಿ ತನ್ನ ಮಗಳೊಂದಿಗೆ ಸ್ವಲ್ಪ ಗುಣಮಟ್ಟದ ಸಮಯವನ್ನು ಕಳೆಯುತ್ತಿರುವುದನ್ನು ನಾವು ಕಾಣಬಹುದು.ಈ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದೆ.ಅಭಿಮಾನಿಗಳು ಅವರ ಬಿಳಿ ಗಡ್ಡದ ಕುರಿತಾಗಿ ವ್ಯಾಪಕವಾಗಿ ಕಾಮೆಂಟ್ ಮಾಡುತ್ತಿದ್ದಾರೆ.ಒಬ್ಬ ಅಭಿಮಾನಿಯೊಬ್ಬ ಈ ಅವತಾರವನ್ನು ಉಪ್ಪು ಮತ್ತು ಮೆಣಸಿನ ಲುಕ್ ಎಂದು ಪ್ರತಿಕ್ರಿಯಿಸಿದ್ದಾರೆ. 

 

Trending News