Neeraj Chopra: ಮತ್ತೊಂದು ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾ ಡೈಮಂಡ್ ಲೀಗ್ ಚಾಂಪಿಯನ್!

ಡಿಸ್ಕಸ್‌ ಥ್ರೋ ಸ್ಪರ್ಧಿ ವಿಕಾಸ್‌ ಗೌಡ 2ನೇ ಸ್ಥಾನ ಪಡೆದದ್ದು, ಡೈಮಂಡ್‌ ಲೀಗ್‌ನಲ್ಲಿ ಭಾರತದ ಅಥ್ಲೀಟ್‌ವೊಬ್ಬರ ಇದುವರೆಗಿನ ಉತ್ತಮ ಸಾಧನೆಯಾಗಿತ್ತು.

Written by - Puttaraj K Alur | Last Updated : Aug 27, 2022, 09:13 AM IST
  • ಮತ್ತೊಂದು ಹೊಸ ಇತಿಹಾಸ ಸೃಷ್ಟಿಸಿದ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ
  • ಡೈಮಂಡ್‌ ಲೀಗ್‌ ಪ್ರಶಸ್ತಿ ಎತ್ತಿ ಹಿಡಿದು ಸಂಭ್ರಮಿಸಿದ ಭಾರತದ ಜಾವೆಲಿನ್‌ ಥ್ರೋ ಸ್ಪರ್ಧಿ
  • ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಸಾಧಿಸಿದ ನೀರಜ್ ಚೋಪ್ರಾಗೆ ಅಭಿನಂದನೆಗಳ ಮಹಾಪೂರ
Neeraj Chopra: ಮತ್ತೊಂದು ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾ ಡೈಮಂಡ್ ಲೀಗ್ ಚಾಂಪಿಯನ್! title=
ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ

ಲಾಸನ್‌: ಭಾರತದ ಜಾವೆಲಿನ್‌ ಥ್ರೋ ಸ್ಪರ್ಧಿ, ಒಲಿಂಪಿಕ್ ಚಾಂಪಿಯನ್ ನೀರಜ್‌ ಚೋಪ್ರಾ ಅವರು ಲಾಸನ್‌ನಲ್ಲಿ ನಡೆದ ಡೈಮಂಡ್‌ ಲೀಗ್‌ನಲ್ಲಿ ಪ್ರಶಸ್ತಿಯನ್ನು ಎತ್ತಿ ಹಿಡಿದಿದ್ದಾರೆ. ಈ ಮಹತ್ವದ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕಳೆದ ತಿಂಗಳು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದಾಗ ಅನುಭವಿಸಿದ ಸಣ್ಣ ತೊಡೆಸಂದು ಗಾಯದಿಂದಾಗಿ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹಿಂದೆ ಸರಿದ 24 ವರ್ಷದ ಚೋಪ್ರಾ, ತನ್ನ ಮೊದಲ ಪ್ರಯತ್ನದಲ್ಲಿಯೆ 89.08 ಮೀ. ಗೆ ಈಟಿಯನ್ನು ಎಸೆದರು. ಈ ಸಾಧನೆಯೊಂದಿಗೆ ಮೊದಲ ಸ್ಥಾನ ಗಿಟ್ಟಿಸಿಕೊಂಡರು. ಜೇಕಬ್‌ ವಾಡ್ಲೆಚ್‌ (85.88 ಮೀ.) 2ನೇ ಸ್ಥಾನ ಪಡೆದರೆ, ಅಮೆರಿಕದ ಕರ್ಟಿಸ್‌ ಥಾಂಪ್ಸನ್‌ (83.72 ಮೀ.) 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ ವಾಣಿಜ್ಯನಗರಿ ಹುಬ್ಬಳ್ಳಿ

ಚೋಪ್ರಾ 1 ತಿಂಗಳ ಕಾಲ ವಿಶ್ರಾಂತಿ ಪಡೆದು ಪುನಃ ಅಂಗಳಕ್ಕಿಳಿದಿದ್ದರು.ತಮ್ಮ ವಿಂಟೇಜ್ ಫಾರ್ಮ್ ಮುಂದುವರೆಸಿದ್ದರಿಂದ ಗಾಯದ ಸಮಸ್ಯೆ ಈ ಆಟಗಾರನಿಗೆ ಹೆಚ್ಚು ತೊಂದರೆ ನೀಡಲಿಲ್ಲ. 89.08 ಮೀ. ಎಸೆತವು ಅವರ ವೃತ್ತಿಜೀವನದ 3ನೇ ಅತ್ಯುತ್ತಮ ಪ್ರಯತ್ನವಾಗಿತ್ತು. ಅವರ 2ನೇ ಥ್ರೋ ಅವರ 3ನೇ ಪ್ರಯತ್ನದಲ್ಲಿ ಹಾದುಹೋಗುವ ಮೊದಲು 85.18 ಮೀ. ದೂರ ಈಟಿಯನ್ನು ಎಸೆದಿದ್ದರು. ಅವರ 4ನೇ ಎಸೆತವು ಫೌಲ್ ಆಗಿತ್ತು. ಹರಿಯಾಣದ ಪಾಣಿಪತ್ ಸಮೀಪದ ಖಂಡ್ರಾ ಗ್ರಾಮದ ಯುವಕ ಡೈಮಂಡ್ ಲೀಗ್ ಕಿರೀಟವನ್ನು ಗೆದ್ದ ಮೊದಲ ಭಾರತೀಯನಾಗಿ ಹೊರಹೊಮ್ಮಿದರು.

ಡಿಸ್ಕಸ್‌ ಥ್ರೋ ಸ್ಪರ್ಧಿ ವಿಕಾಸ್‌ ಗೌಡ 2ನೇ ಸ್ಥಾನ ಪಡೆದದ್ದು, ಡೈಮಂಡ್‌ ಲೀಗ್‌ನಲ್ಲಿ ಭಾರತದ ಅಥ್ಲೀಟ್‌ವೊಬ್ಬರ ಇದುವರೆಗಿನ ಉತ್ತಮ ಸಾಧನೆಯಾಗಿತ್ತು. ವಿಕಾಸ್‌ ಅವರು 2012ರ ನ್ಯೂಯಾರ್ಕ್‌ ಮತ್ತು 2014ರ ದೋಹಾ ಕೂಟದಲ್ಲಿ 2ನೇ ಸ್ಥಾನ ಪಡೆದುಕೊಂಡಿದ್ದರು. 2015ರಲ್ಲಿ ಶಾಂಘೈ ಮತ್ತು ಯೂಜಿನ್‌ ಕೂಟಗಳಲ್ಲಿ 3ನೇ ಸ್ಥಾನ ಗಳಿಸಿದ್ದರು. ವಿಶಿಷ್ಟ ಸಾಧನೆ ಮಾಡಿದ ನೀರಜ್ ಚೋಪ್ರಾಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ಇದನ್ನೂ ಓದಿ: Pro Kabaddi League ಪ್ರಾರಂಭಕ್ಕೆ ಡೇಟ್ ಫಿಕ್ಸ್: ಈ ನಗರಗಳಲ್ಲಿ ನಡೆಯಲಿದೆ ಸೀಸನ್-9 ಪಂದ್ಯಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News