Asia Cup ಆರಂಭಕ್ಕೂ ಮುನ್ನ ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ 32ರ ಹರೆಯದ ಡ್ಯಾಶಿಂಗ್ ಆಟಗಾರ!

Gyanendra Malla Retirement: ಜ್ಞಾನೇಂದ್ರ ಮಲ್ಲಾ ಅವರು 10 ODIಗಳ ನಾಯಕತ್ವ ವಹಿಸಿದ್ದು, ಅದರಲ್ಲಿ ಆರು ಪಂದ್ಯಗಳನ್ನು ಗೆದ್ದಿದೆ. ಇನ್ನುಳಿದಂತೆ, ಟಿ-20 ನಾಯಕತ್ವದಲ್ಲಿ ತಂಡ 12 ಪಂದ್ಯಗಳಲ್ಲಿ 9ರಲ್ಲಿ ಗೆಲುವು ಸಾಧಿಸಿದೆ.

Written by - Bhavishya Shetty | Last Updated : Aug 5, 2023, 01:27 PM IST
    • ನೇಪಾಳದ ಮಾಜಿ ನಾಯಕ ಜ್ಞಾನೇಂದ್ರ ಮಲ್ಲಾ ಅಂತರಾಷ್ಟ್ರೀಯ ಕ್ರಿಕೆಟ್‌’ಗೆ ನಿವೃತ್ತಿ ಘೋಷಿಸಿದ್ದಾರೆ.
    • 2014ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌’ಗೆ ಪದಾರ್ಪಣೆ ಮಾಡಿದ ಜ್ಞಾನೇಂದ್ರ ಮಲ್ಲಾ
    • ತಮ್ಮ ಒಂಬತ್ತು ವರ್ಷಗಳ ವೃತ್ತಿಜೀವನದಲ್ಲಿ 37 ODI ಮತ್ತು 45 T20 ಪಂದ್ಯಗಳನ್ನು ಆಡಿದ್ದಾರೆ.
Asia Cup ಆರಂಭಕ್ಕೂ ಮುನ್ನ ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ 32ರ ಹರೆಯದ ಡ್ಯಾಶಿಂಗ್ ಆಟಗಾರ! title=
Gyanendra Malla

Asia Cup 2023: ಏಷ್ಯಾ ಕಪ್ 2023 ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿದೆ. ಏಷ್ಯಾ ಕಪ್ ಆಗಸ್ಟ್ 30 ರಿಂದ ಆರಂಭವಾಗಲಿದ್ದು, ಈ ಟೂರ್ನಿಗೂ ಮುನ್ನ ತಂಡದ ಮಾಜಿ ನಾಯಕ ಅಂತಾರಾಷ್ಟ್ರೀಯ ಕ್ರಿಕೆಟ್‌’ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಆಟಗಾರ 32ನೇ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌’ಗೆ ವಿದಾಯ ಹೇಳುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಈ ತಂಡವು ಮೊದಲ ಬಾರಿಗೆ ಏಷ್ಯಾ ಕಪ್‌ನ ಭಾಗವಾಗಲಿದೆ ಎಂಬುದನ್ನು ಇಲ್ಲಿ ಗಮನಿಸಲೇಬೇಕು.

ಇದನ್ನೂ ಓದಿ: ಇನ್ಮುಂದೆ RCBಗೆ ಜಿಂಬಾಬ್ವೆಯ ಮಾಜಿ ಆಟಗಾರ ನೂತನ ಹೆಡ್’ಕೋಚ್! ಹೊಸ ಪರ್ವದಲ್ಲಿ “ಈ ಸಲ ಕಪ್ ನಮ್ದೇ…”

ನೇಪಾಳದ ಮಾಜಿ ನಾಯಕ ಜ್ಞಾನೇಂದ್ರ ಮಲ್ಲಾ ಅಂತರಾಷ್ಟ್ರೀಯ ಕ್ರಿಕೆಟ್‌’ಗೆ ನಿವೃತ್ತಿ ಘೋಷಿಸಿದ್ದಾರೆ. 2014ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌’ಗೆ ಪದಾರ್ಪಣೆ ಮಾಡಿದ ಜ್ಞಾನೇಂದ್ರ ಮಲ್ಲಾ ತಮ್ಮ ಒಂಬತ್ತು ವರ್ಷಗಳ ವೃತ್ತಿಜೀವನದಲ್ಲಿ 37 ODI ಮತ್ತು 45 T20 ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ ಏಳು ಅರ್ಧಶತಕಗಳೊಂದಿಗೆ 876 ರನ್ ಗಳಿಸಿದ್ದರೆ, ಟಿ20ಯಲ್ಲಿ 120.29 ಸ್ಟ್ರೈಕ್ ರೇಟ್‌’ನಲ್ಲಿ ಒಂದು ಶತಕ ಮತ್ತು ಎರಡು ಅರ್ಧಶತಕಗಳೊಂದಿಗೆ 883 ರನ್ ಕಲೆ ಹಾಕಿದ್ದಾರೆ.

ಟ್ವೀಟ್ ಮೂಲಕ ನಿವೃತ್ತಿ ಘೋಷಣೆ:

ಜ್ಞಾನೇಂದ್ರ ಮಲ್ಲಾ ಅವರು ಟ್ವಿಟರ್‌’ನಲ್ಲಿ “ಭಾರವಾದ ಆದರೆ ಅತ್ಯಂತ ಕೃತಜ್ಞತಾ ಭಾವದಿಂದ ಅಂತರಾಷ್ಟ್ರೀಯ ಕ್ರಿಕೆಟ್‌’ಗೆ ನಿವೃತ್ತಿ ಘೋಸುತ್ತೇನೆ. ಈ ಘೋಷಣೆಹೆ ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ಸ್ಥಳೀಯ ಮಟ್ಟದಲ್ಲಿ ಆಡುವುದರಿಂದ ಹಿಡಿದು ರಾಷ್ಟ್ರಮಟ್ಟದಲ್ಲಿ ಆಡುವವರೆಗೆ ಈ ಆಟದ ಮೂಲಕ ಸಾಕಷ್ಟು ಕಲಿತಿದ್ದೇನೆ” ಎಂದಿದ್ದಾರೆ.

ಜ್ಞಾನೇಂದ್ರ ಮಲ್ಲಾ ಅವರು 10 ODIಗಳ ನಾಯಕತ್ವ ವಹಿಸಿದ್ದು, ಅದರಲ್ಲಿ ಆರು ಪಂದ್ಯಗಳನ್ನು ಗೆದ್ದಿದೆ. ಇನ್ನುಳಿದಂತೆ, ಟಿ-20 ನಾಯಕತ್ವದಲ್ಲಿ ತಂಡ 12 ಪಂದ್ಯಗಳಲ್ಲಿ 9ರಲ್ಲಿ ಗೆಲುವು ಸಾಧಿಸಿದೆ. ಒಡಿಐನಲ್ಲಿ ಅರ್ಧಶತಕ ಬಾರಿಸಿದ ನೇಪಾಳದ ಮೊದಲ ಆಟಗಾರ ಇವರಾಗಿದ್ದಾರೆ. 2018 ರಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ದೇಶದ ಮೊದಲ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಈ ಬ್ಯಾಟ್ಸ್‌ಮನ್ 2006 ಮತ್ತು 2008ರಲ್ಲಿ ಎರಡು ಅಂಡರ್-19 ವಿಶ್ವಕಪ್‌’ಗಳಲ್ಲಿ ನೇಪಾಳವನ್ನು ಪ್ರತಿನಿಧಿಸಿದ್ದಾರೆ.

ಇದನ್ನೂ ಓದಿ: ವಿಕೆಟ್ ಕೀಪರ್ ಆಗಿದ್ದು ಬ್ಯಾಟಿಂಗ್’ನಲ್ಲಿ ಅತೀ ಹೆಚ್ಚು ರನ್ ಕಲೆ ಹಾಕಿದ ಕ್ರಿಕೆಟಿಗ ಯಾರು? ಅಗ್ರ 5ರಲ್ಲಿ ನಮ್ಮವ ಒಬ್ಬನೇ

ಏಷ್ಯಾ ಕಪ್ 2023ರ ಬಗ್ಗೆ…

ಏಷ್ಯಾ ಕಪ್ 2023ರಲ್ಲಿ ಒಟ್ಟು 6 ತಂಡಗಳು ಭಾಗವಹಿಸಲಿವೆ. 1984 ರಿಂದ ಏಷ್ಯಾಕಪ್ ಆಯೋಜಿಸಲಾಗುತ್ತಿದ್ದು, 2023 ರಲ್ಲಿ, ಅದರ 16 ನೇ ಆವೃತ್ತಿಯನ್ನು ODI ಸ್ವರೂಪದಲ್ಲಿ ಆಡಲಾಗುತ್ತದೆ. ನೇಪಾಳದ ಕ್ರಿಕೆಟ್ ತಂಡ ಏಷ್ಯಾಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಭಾಗವಹಿಸುತ್ತಿದೆ. ಇದರ ಹೊರತಾಗಿ ಉಳಿದ ತಂಡಗಳಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಸೇರಿವೆ. ಏಷ್ಯಾಕಪ್ 2023ರಲ್ಲಿ ಲೀಗ್ ಹಂತ, ಸೂಪರ್-4 ಮತ್ತು ಫೈನಲ್ ಸೇರಿದಂತೆ ಒಟ್ಟು 13 ಪಂದ್ಯಗಳು ನಡೆಯಲಿವೆ. ಭಾರತ, ಪಾಕಿಸ್ತಾನ ಮತ್ತು ನೇಪಾಳ ತಂಡಗಳು ಒಂದೇ ಗುಂಪಿನಲ್ಲಿದ್ದರೆ, ಹಾಲಿ ಚಾಂಪಿಯನ್ ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಮತ್ತೊಂದು ಗುಂಪಿನಲ್ಲಿವೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News