Virat Kohli: ವಿರಾಟ್ ಕೊಹ್ಲಿ ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ ಉತ್ತಮ ಫಾರ್ಮ್ ಹೊಂದಿದ್ದಾರೆ. ಕಳೆದ ದಿನ ಅಂದರೆ ಮೇ 9 ರಂದು ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 47 ಎಸೆತಗಳಲ್ಲಿ 92 ರನ್ ಗಳಿಸುವ ಮೂಲಕ ಅದ್ಭುತ ಆಟವನ್ನಾಡಿದ್ದರು.
ಇದನ್ನೂ ಓದಿ: ಟೀಂ ಇಂಡಿಯಾ ದಿಗ್ಗಜ ಸುರೇಶ್ ರೈನಾ ಪತ್ನಿ ಯಾರು ಗೊತ್ತೇ? ಕೋಚ್ ಮಗಳನ್ನೇ ಕದ್ದುಮುಚ್ಚಿ ಪ್ರೀತಿಸಿ ಮದುವೆಯಾದ ‘ಚಿನ್ನ ಥಾಲ’
ಈ ಮೂಲಕ ಕೊಹ್ಲಿ ಐಪಿಎಲ್’ನಲ್ಲಿ ರನ್-ಸ್ಕೋರರ್’ಗಳ ಪಟ್ಟಿಯಲ್ಲಿ (12 ಪಂದ್ಯಗಳಲ್ಲಿ 634 ರನ್) ಅಗ್ರಸ್ಥಾನದಲ್ಲಿದ್ದಾರೆ. ಒಟ್ಟಾರೆ ಇದುವರೆಗೆ ಈ ಋತುವಿನಲ್ಲಿ 600 ರನ್’ಗಳನ್ನು ದಾಟಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇನ್ನಿಂಗ್ಸ್’ನ ಪ್ರಮುಖ ಅಂಶವೆಂದರೆ ಸ್ಪಿನ್ನರ್’ಗಳ ವಿರುದ್ಧ ಸ್ಲಾಗ್ ಸ್ವೀಪ್ ಬಳಸಿ, ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿರುವುದು. ಈ ಟ್ರಿಕ್ಸ್ ವಿಶ್ವಕಪ್ ಆರಂಭಕ್ಕೂ ಮುನ್ನವೇ ಕೊಹ್ಲಿ ಪ್ರಯೋಗ ಮಾಡಿದ್ದು, ಮುಂಬರುವ ಹಣಾಹಣಿಗೆ ಈಗಲೇ ಹೊಸ ತಂತ್ರ ರೂಪಿಸಿದಂತಿದೆ.
ಅಂದಹಾಗೆ ಈ ವಿಚಾರದ ಬಗ್ಗೆ ಮಾತನಾಡಿದ ಕೊಹ್ಲಿ, “ನಾನು ಸ್ಪಿನ್ನರ್’ಗಳಿಗೆ ಸ್ಲಾಗ್-ಸ್ವೀಪ್ ಟ್ರಿಕ್ಸ್ ರೂಪಿಸಿಕೊಂಡಿದ್ದೇನೆ. ಅದನ್ನು ಅಭ್ಯಾಸ ಮಾಡಲಿಲ್ಲ. ಆದರೆ ಪರಿಸ್ಥಿತಿಗೆ ಅನುಗುಣವಾಗ ಬಳಕೆ ಮಾಡಿದೆ” ಎಂದು ಹೇಳಿದ್ದಾರೆ.
"ಸ್ಲಾಗ್-ಸ್ವೀಪ್ ಟ್ರಿಕ್ಸ್ ಬಳಕೆ ಬಗ್ಗೆ ನನಗೆ ತಿಳಿದಿದೆ. ಇದನ್ನು ಅನೇಕ ಬಾರಿ ನಾನು ಟ್ರೈ ಮಾಡಿದ್ದೇನೆ. ನನಗೆ, ಈ ಐಪಿಎಲ್ನಲ್ಲಿ ಇದು ಒಂದು ದೊಡ್ಡ ಅಂಶವಾಗಿದೆ” ಎಂದಿದ್ದಾರೆ.
“ಈ ಐಪಿಎಲ್ನಲ್ಲಿ ಮಧ್ಯಮ ಓವರ್’ಗಳಲ್ಲಿ ಇದು ನಿಜವಾಗಿಯೂ ನನಗೆ ಸಹಾಯ ಮಾಡಿದೆ, ನನ್ನ ಸ್ಟ್ರೈಕ್ ರೇಟ್ ಅನ್ನು ಇರಿಸಿಕೊಂಡು ತಂಡಕ್ಕೆ ಸ್ಕೋರಿಂಗ್ ದರವನ್ನು ಮುಂದುವರಿಸಿದೆ" ಎಂದರು.
ಇದನ್ನೂ ಓದಿ: RCB ಪ್ಲೇಆಫ್ ಪ್ರವೇಶಿಸಬೇಕೆಂದ್ರೆ ಈ ತಂಡಗಳು ಸೋಲಲೇಬೇಕು! ಈ ಲೆಕ್ಕಾಚಾರದಂತೆ ನಡೆದ್ರೆ ಎಂಟ್ರಿ ಪಕ್ಕಾ!
ಕಳೆದ ತಿಂಗಳು, ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 43 ಎಸೆತಗಳಲ್ಲಿ 51 ರನ್ ಗಳಿಸಿದ್ದರು. ಇದಾದ ಬಳಿಕ ಅವರ ಸ್ಟ್ರೈಕ್ ರೇಟ್ ಬಗ್ಗೆ ಟೀಕೆಗಳು ಎದುರಾಗಿದ್ದವು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ