'ಹೊಟ್ಟೆ ಬಿಟ್ರೆ ಹುಷಾರ್ ... ! ಸಂಬಳ ಕಟ್'

ಫಿಟ್ನೆಸ್ ಟೆಸ್ಟ್ ನಲ್ಲಿ ಒಟ್ಟು ೫ ವಿಭಾಗಗಳ ಮೇಲೆ ಹೆಚ್ಚಿನ ಗಮನ ನೀಡಲಾಗುತ್ತಿದ್ದು, ಇವುಗಳಲ್ಲಿ ಫ್ಯಾಟ್, ಸ್ಟ್ರೆಂಥ್, ಎಂಡ್ಯೂರೆನ್ಸ್, ಸ್ಪೀಡ್ ಎಂಡ್ಯೂರೆನ್ಸ್ ಹಾಗೂ ಕ್ರಾಸ್ ಫಿಟ್ ಶಾಮೀಲಾಗಿವೆ. ಈ ಎಲ್ಲ ವಿಭಾಗಗಳಿಗೆ ಸಮನಾದ ಆದ್ಯತೆ ನೀಡಲಾಗುತ್ತಿದೆ.  

Last Updated : Jan 4, 2020, 02:15 PM IST
'ಹೊಟ್ಟೆ ಬಿಟ್ರೆ ಹುಷಾರ್ ... ! ಸಂಬಳ ಕಟ್' title=

ಲಾಹೋರ್:ಪಾಕಿಸ್ತಾನ ಕ್ರಿಕೆಟ್ ನಿಯಂತ್ರಣ ಮಂಡಳಿ ತನ್ನ ಆಟಗಾರರಿಗೆ ಹೊಸ ಆದೇಶವೊಂದನ್ನು ಹೊರಡಿಸಿದ್ದು, ಕೇಂದ್ರ ಗುತ್ತಿಗೆ ಆಧಾರದ ಮೇಲೆ ಆಯ್ಕೆಯಾದ ಆಟಗಾರರು ಒಂದು ವೇಳೆ ಫಿಟ್ನೆಸ್ ಟೆಸ್ಟನಲ್ಲಿ ವಿಫಲವಾದರೆ ಅವರಿಗೆ ದಂಡ ವಿಧಿಸಲಾಗುವುದು ಎಂದು ಹೇಳಿದೆ. ಈ ಕುರಿತು ಮಂಡಳಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಬರುವ ೬ ಮತ್ತು ೭ನೇ ಜನವರಿಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಾಲ್ಕು ಹಂತಗಳಲ್ಲಿ ಫಿಟ್ನೆಸ್ಟ್ ಟೆಸ್ ನಡೆಸಲಾಗುತ್ತಿದ್ದು, ಇದರಲ್ಲಿ ಪಾಕ್ ತಂಡದ ಸ್ಟ್ರೆಂಥ್ ಹಾಗೂ ಕಂಡೀಷನಿಂಗ್ ತರಬೇತುದಾರರಾಗಿರುವ ಯಾಸಿರ್ ಮಲಿಕ್ ಆಟಗಾರರ ಫಿಟ್ನೆಸ್ ಪರೀಕ್ಷೆ ನಡೆಸಲಿದ್ದಾರೆ ಎನ್ನಲಾಗಿದೆ.

ಈ ಫಿಟ್ನೆಸ್  ಟೆಸ್ಟ್ ಒಟ್ಟು ಐದು ವಿಭಾಗಗಳನ್ನು ಗಮನದಲ್ಲಿಟ್ಟುಕೊಂಡು ನಡೆಸಲಾಗುತ್ತಿದ್ದು, ಇವುಗಳಲ್ಲಿ ಫ್ಯಾಟ್, ಸ್ಟ್ರೆಂಥ್, ಎಂಡ್ಯೂರೆನ್ಸ್, ಸ್ಪೀಡ್ ಎಂಡ್ಯೂರೆನ್ಸ್ ಹಾಗೂ ಕ್ರಾಸ್ ಫಿಟ್ ಶಾಮೀಲಾಗಿದ್ದು, ಎಲ್ಲ ವಿಭಾಗಗಳಿಗೆ ಸಮನಾದ ಆದ್ಯತೆ ನೀಡಲಾಗುತ್ತಿದೆ ಎನ್ನಲಾಗಿದೆ.

ಮಂಡಳಿ ಬಿಡುಗಡೆಗೊಳಿಸಿರುವ ಹೇಳಿಕೆ ಪ್ರಕಾರ " ಈ ಫಿಟ್ನೆಸ್ ಟೆಸ್ಟ್ ಗೆ ನಿಗದಿಪಡಿಸಲಾಗಿರುವ ಕನಿಷ್ಠ ಅರ್ಹತೆಯನ್ನು ಪಡೆಯಲು ವಿಫಲವಾಗುವ ಆಟಗಾರರ ಮೂಲ ವೇತನದ ಶೇ. ೧೫ರಷ್ಟು ಹಣವನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗುವುದು  ಮತ್ತು  ಈ ಆಟಗಾರರು ಕನಿಷ್ಠ ಅರ್ಹತೆ ಪಡೆಯುವವರೆಗೆ ಇದು ಜಾರಿಯಲ್ಲಿರಲಿದೆ" ಎನ್ನಲಾಗಿದೆ.

ಅಷ್ಟೇ ಅಲ್ಲ " ನಿರಂತರವಾಗಿ ಫಿಟ್ನೆಸ್ ಟೆಸ್ಟ್ ನಲ್ಲಿ ವಿಫಲರಾಗುವ ಆಟಗಾರರನ್ನು ಕೇಂದ್ರೀಯ ಒಪ್ಪಂದದ ಪಟ್ಟಿಯಿಂದ ಕೈಬಿಡಲಾಗುವುದು" ಎಂದೂ ಕೂಡ ಹೇಳಿಕೆಯಲ್ಲಿ ಹೇಳಲಾಗಿದೆ.

Trending News