Prithvi Shaw : ಐಪಿಎಲ್ 2024ರ ಮಧ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ಕ್ರಿಕೆಟಿಗ ಪೃಥ್ವಿ ಶಾಗೆ ಕೆಟ್ಟ ಸುದ್ದಿ ಬಂದೊದಗಿದೆ. ಕಳೆದ ವರ್ಷ ಕ್ರಿಕೆಟಿಗ ಪೃಥ್ವಿ ಶಾ ವಿರುದ್ಧ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸಪ್ನಾ ಗಿಲ್ ನೀಡಿದ ಕಿರುಕುಳದ ದೂರಿನ ತನಿಖೆ ನಡೆಸುವಂತೆ ಮುಂಬೈ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ. ಜೂನ್ 19ರೊಳಗೆ ತನಿಖಾ ವರದಿಯನ್ನು ಸಲ್ಲಿಸುವಂತೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅದೇಶಿಸಿದೆ.
ಪೃಥ್ವಿ ಶಾಗೆ ಬ್ಯಾಡ್ ನ್ಯೂಸ್ :
ಆದರೆ, ಪೃಥ್ವಿ ಶಾ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಪ್ನಾ ಗಿಲ್ ಮಾಡಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಪೃಥ್ವಿ ಶಾ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪದ ಮೇಲೆ ಸಪ್ನಾ ಗಿಲ್ ಅವರನ್ನು ಫೆಬ್ರವರಿ 2023ರಲ್ಲಿ ಬಂಧಿಸಲಾಗಿತ್ತು. ಆದರೆ ಅಂಧೇರಿಯ ಪಬ್ನಲ್ಲಿ ಪೃಥ್ವಿ ಶಾ ತನಗೆ ಕಿರುಕುಳ ನೀಡಿದ್ದಾರೆ ಎಂದು ಸಪ್ನಾ ಗಿಲ್ ಆರೋಪಿಸಿದ್ದರು.
ಇದನ್ನೂ ಓದಿ : IPL 2024 DC Rishabh Pant: ಮತ್ತೆ ಸಂಕಷ್ಟಕ್ಕೆ ಸಿಲುಕಿದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್, ಕಾರಣ ಏನು ಗೊತ್ತಾ?
ಸೆಲ್ಫಿ ತೆಗೆಯುವ ಬಗ್ಗೆ ವಾಗ್ವಾದ :
ಸೆಲ್ಫಿ ತೆಗೆದುಕೊಳ್ಳುವ ವಿಚಾರದಲ್ಲಿ ಪೃಥ್ವಿ ಶಾ ಮತ್ತು ಸಪ್ನಾ ಗಿಲ್ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಗಿಲ್ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ಪ್ರಕರಣದಲ್ಲಿ ಜಾಮೀನು ಪಡೆದ ನಂತರ ಸಪ್ನಾ ಗಿಲ್ ಪೃಥ್ವಿ ಶಾ, ಮತ್ತವರ ಸ್ನೇಹಿತ ಆಶಿಶ್ ಯಾದವ್ ವಿರುದ್ಧ ದೂರು ನೀಡಲು ಅಂಧೇರಿ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಆದರೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೊರೆ ಹೋಗಿದ್ದರು.
ಏನಿದು ಪ್ರಕರಣ ? :
15 ಫೆಬ್ರವರಿ 2023 ರಂದು ತಡರಾತ್ರಿ ಮುಂಬೈ ಕ್ಲಬ್ನ ಹೊರಗೆ ಪೃಥ್ವಿ ಶಾ ಮತ್ತವರ ಸ್ನೇಹಿತ ಮತ್ತು ಸಪ್ನಾ ಗಿಲ್ ನಡುವೆ ಘರ್ಷಣೆ ನಡೆದಿತ್ತು.ಪೃಥ್ವಿ ಶಾ ಮತ್ತು ಅವರ ಸ್ನೇಹಿತರು ತನಗೆ ಕಿರುಕುಳ ನೀಡಿ ಹಲ್ಲೆ ನಡೆಸಿದ್ದಾರೆ ಎಂದು ಸಪ್ನಾ ಗಿಲ್ ಆರೋಪಿಸಿದ್ದರು. ಪೃಥ್ವಿ ಶಾ ವಿರುದ್ಧ ಪ್ರಕರಣ ದಾಖಲಿಸುವಂತೆ ಸಪ್ನಾ ಗಿಲ್ ನ್ಯಾಯಾಲಯದ ಮೊರೆ ಹೋಗಿದ್ದರು.ಈ ವೇಳೆ ತಾನು ಶಾ ಬಳಿ ಸೆಲ್ಫಿ ಕೇಳಿಲ್ಲ ಎಂದು ಕೂಡಾ ಸಪ್ನಾ ಗಿಲ್ ಹೇಳಿದ್ದರು.ನಾವು ನಮ್ಮ ಪಾಡಿಗೆ ಮೋಜು ಮಸ್ತಿಯಲ್ಲಿ ತೊಡಗಿದ್ದೆವು. ನನ್ನ ಸ್ನೇಹಿತ ವೀಡಿಯೊ ಮಾಡುತ್ತಿದ್ದ.ಆದರೆ ಶಾ ಮತ್ತು ಆತನ ಸ್ನೇಹಿತರು ತನ್ನ ಸ್ನೇಹಿತನನ್ನು ಹೊಡೆಯಲು ಪ್ರಾರಂಭಿಸಿದರು. ಈ ಸಮಯದಲ್ಲಿ ಸಾಕ್ಷಿಗಾಗಿ ವೀಡಿಯೊ ಬೇಕು ಎನ್ನುವ ಕಾರಣದಿಂದ ನನ್ನ ಸ್ನೇಹಿತ ಇದನ್ನೂ ಕೂಡಾ ವಿಡಿಯೋ ಮಾಡಲು ಪ್ರಯತ್ನಿಸುತ್ತಿದ್ದ.ಆದರೆ ಪೃಥ್ವಿ ಶಾ ಮತ್ತು ಆತನ ಸ್ನೇಹಿತರು ಬೇಸ್ಬಾಲ್ಗಳಿಂದ ಹೊಡೆಯಲು ಪ್ರಾರಂಭಿಸಿದರು ಎದ್ನು ದೂರಿದ್ದಾರೆ. ಒಂದಿಬ್ಬರು ನನಗೆ ಹೊಡೆದು ನನ್ನ ಖಾಸಗಿ ಅಂಗಗಳನ್ನು ಮುಟ್ಟಿದರು ಎಂದು ಕೂಡಾ ದೂರಿನಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ : ಡೆಲ್ಲಿ ಕ್ಯಾಪಿಟಲ್ಸ್ ಇಶಾಂತ್ ಶರ್ಮಾ ಯಾರ್ಕರ್ಗೆ ಕ್ಲೀನ್ ಬೌಲ್ಡ್ ಆದ ಕೆಕೆಆರ್ ಆಂಡ್ರೆ ರಸೆಲ್: ವಿಡಿಯೋ ವೈರಲ್
ಇದಲ್ಲದೇ ಪೃಥ್ವಿ ಶಾ ಸ್ನೇಹಿತ ಆಶಿಶ್ ಸುರೇಂದ್ರ ಯಾದವ್ ಕೂಡಾ ದೂರು ದಾಖಲಿಸಿದ್ದರು. ಸಪ್ನಾ ಗಿಲ್ ಮತ್ತು ಆಕೆಯ ಸಹಚರರು ಪೃಥ್ವಿ ಶಾ ಕಾರನ್ನು ಹಿಂಬಾಲಿಸಿ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆಶಿಶ್ ಸುರೇಂದ್ರ ಯಾದವ್ ದೂರಿನಲ್ಲಿ ದಾಖಲಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.