ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ ನಲ್ಲಿ ರವಿ ದಹಿಯಾಗೆ ಚಿನ್ನದ ಪದಕ

ಟೋಕಿಯೊ ಒಲಿಂಪಿಕ್ಸ್‌ನ ಬೆಳ್ಳಿ ಪದಕ ವಿಜೇತರಾಗಿರುವ ರವಿ ದಹಿಯಾ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ 57 ಕೆಜಿ ಫೈನಲ್‌ನಲ್ಲಿ ಕಜಕಿಸ್ತಾನದ ಕಲ್ಜಾನ್ ರಖತ್ ಅವರನ್ನು 12-2 ಅಂತರದಿಂದ ಸೋಲಿಸುವ ಮೂಲಕ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ.

Written by - Zee Kannada News Desk | Last Updated : Apr 23, 2022, 06:03 PM IST
  • ದಕ್ಕೂ ಮೊದಲು ಅವರು ಫೆಬ್ರುವರಿಯಲ್ಲಿ ನಡೆದ ಡ್ಯಾನ್ ಕೊಲೊವ್ ಸ್ಪರ್ಧೆಯಲ್ಲಿ ಅವರು ಬೆಳ್ಳಿ ಗೆದ್ದುಕೊಂಡಿದ್ದರು, ಇದು ಈ ಋತುವಿನ ಅವರ ಎರಡನೇ ಫೈನಲ್ ಪಂದ್ಯವಾಗಿತ್ತು.
ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ ನಲ್ಲಿ ರವಿ ದಹಿಯಾಗೆ ಚಿನ್ನದ ಪದಕ  title=

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನ ಬೆಳ್ಳಿ ಪದಕ ವಿಜೇತರಾಗಿರುವ ರವಿ ದಹಿಯಾ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ 57 ಕೆಜಿ ಫೈನಲ್‌ನಲ್ಲಿ ಕಜಕಿಸ್ತಾನದ ಕಲ್ಜಾನ್ ರಖತ್ ಅವರನ್ನು 12-2 ಅಂತರದಿಂದ ಸೋಲಿಸುವ ಮೂಲಕ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ.ಇದು ಅವರ ಸತತ ಮೂರನೇ ಏಷ್ಯನ್ ಚಾಂಪಿಯನ್‌ಶಿಪ್ ಚಿನ್ನದ ಪದಕವಾಗಿದೆ.ಆ ಮೂಲಕ ಈ ಸಾಧನೆ ಮಾಡಿದ ಮೊದಲ ಕುಸ್ತಿಪಟು ಎನ್ನುವ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ರವಿ ಅವರು ತಮ್ಮ ಎಲ್ಲಾ ಪಂದ್ಯಗಳಲ್ಲಿ ಆರಂಭಿಕ ಮುನ್ನಡೆಯನ್ನು ಪಡೆಯಲು ವಿಫಲರಾದರೂ ಕೂಡ ಪುರುಷರ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ತಮ್ಮ ಪ್ರತಿಸ್ಪರ್ಧಿಗಳನ್ನು ಮೀರಿಸಲು ತಮ್ಮ ವಿಶಿಷ್ಟ ಕೌಶಲ್ಯವನ್ನು ಮೆರೆದರು.ಇದಕ್ಕೂ ಮೊದಲು ಅವರು ಫೆಬ್ರುವರಿಯಲ್ಲಿ ನಡೆದ ಡ್ಯಾನ್ ಕೊಲೊವ್ ಸ್ಪರ್ಧೆಯಲ್ಲಿ ಅವರು ಬೆಳ್ಳಿ ಗೆದ್ದುಕೊಂಡಿದ್ದರು, ಇದು ಈ ಋತುವಿನ ಅವರ ಎರಡನೇ ಫೈನಲ್ ಪಂದ್ಯವಾಗಿತ್ತು.

ಇದನ್ನೂ ಓದಿ: RCB vs SRH : ಇಂದು ಹೈದರಾಬಾದ್‌ಗೆ ಬೆಂಗಳೂರು ʼಚಾಲೆಂಜ್‌ʼ

ಸೋನೆಪತ್‌ನ ನಹ್ರಿ ಗ್ರಾಮದವರಾದ ರವಿ ಅವರು ಜಪಾನ್‌ನ ರಿಕುಟೊ ಅರೈ (ವಿಎಸ್‌ಯು) ಅವರನ್ನು ಸೋಲಿಸಿದಾಗ ಮತ್ತೊಮ್ಮೆ ತಮ್ಮ ಅಗಾಧವಾದ ದೈಹಿಕ ಸಾಮರ್ಥ್ಯ ಮತ್ತು ಯುದ್ಧತಂತ್ರದ ಶ್ರೇಷ್ಠತೆಯನ್ನು ಮೆರೆದರು ಮತ್ತು ಫೈನಲ್‌ನಲ್ಲಿ ಮಂಗೋಲಿಯಾದ ಝನಾಬಜಾರ್ ಝಂದನ್‌ಬುಡ್ ವಿರುದ್ಧ ಸಮಗ್ರ 12-5 ಅಂತರದಲ್ಲಿ ಗೆಲುವು ಸಾಧಿಸಿದರು.ಫೈನಲ್ ಪಂದ್ಯದಲ್ಲಿ ಕಲ್ಜನ್ ಆರಂಭದಲ್ಲಿ ಸಾಕಷ್ಟು ಸಮಯದವರೆಗೆ ಅಂಕಗಳಿಸಲು ಅವಕಾಶ ಸಿಗಲಿಲ್ಲ, ಆದಾಗ್ಯೂ ಅವರು ನಂತರ ತಮ್ಮ ಕ್ಲಾಸ್ ಆಟದ ಮೂಲಕ ಪಂದ್ಯದ ಮೇಲೆ ಹಿಡಿತವನ್ನು ಸಾಧಿಸಿದರು.

ಇದನ್ನೂ ಓದಿ: ನೋ ಬಾಲ್ ವಿವಾದ: ಅಂಪೈರ್ ವಿರುದ್ಧ ರಿಷಭ್ ಪಂತ್ ಅಸಮಾಧಾನ, ವಿಡಿಯೋ ವೈರಲ್

ಈ ವರ್ಷದ ಪಂದ್ಯಾವಳಿಯಲ್ಲಿ ಭಾರತದ ಮೊದಲ ಚಿನ್ನದ ಪದಕವನ್ನು ಖಚಿತಪಡಿಸಿಕೊಳ್ಳಲು ಅವರು ಎರಡನೇ ಅವಧಿಯ ಆರಂಭದಲ್ಲಿ ಪಂದ್ಯವನ್ನು ಮುಗಿಸಲು ಎಡ ಕಾಲಿನ ದಾಳಿಯಿಂದ ತಮ್ಮನ್ನು ರಕ್ಷಿಸಿಕೊಂಡರು.ಅಷ್ಟೇ ಅಲ್ಲದೆ ಅವರು ಸತತ ಆರು ಎರಡು-ಪಾಯಿಂಟರ್‌ಗಳನ್ನು ಪ್ರದರ್ಶಿಸಿದರು.

ರವಿ ಅವರು 2020ರ ಆವೃತ್ತಿಯಲ್ಲಿ ದೆಹಲಿಯಲ್ಲಿ ಮತ್ತು ಕಳೆದ ವರ್ಷ ಅಲ್ಮಾಟಿಯಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News