VIDEO : ಜಡೇಜಾ ಹಾಕಿದ 'ಮ್ಯಾಜಿಕ್ ಬಾಲ್' ನೋಡಿ ಶಾಕ್ ಆದ ಸ್ಟೀವ್ ಸ್ಮಿತ್!

IND vs AUS : ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ 5 ತಿಂಗಳ ನಂತರ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ನಾಗ್ಪುರ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ 22 ಓವರ್‌ಗಳಲ್ಲಿ 47 ರನ್ ನೀಡಿ 5 ವಿಕೆಟ್ ಕಬಳಿಸಿದರು. 

Written by - Channabasava A Kashinakunti | Last Updated : Feb 9, 2023, 05:52 PM IST
  • ಜಡೇಜಾ 5 ತಿಂಗಳ ನಂತರ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದಾರೆ
  • ಜಡೇಜಾ 'ಮ್ಯಾಜಿಕ್ ಬಾಲ್' ಗೆ ಸ್ಮಿತ್ ಮೂಕವಿಸ್ಮಿತ
  • 107 ಎಸೆತಗಳಲ್ಲಿ 37 ರನ್ ಗಳಿಸಿದ ಸ್ಟೀವ್ ಸ್ಮಿತ್
VIDEO : ಜಡೇಜಾ ಹಾಕಿದ 'ಮ್ಯಾಜಿಕ್ ಬಾಲ್' ನೋಡಿ ಶಾಕ್ ಆದ ಸ್ಟೀವ್ ಸ್ಮಿತ್! title=

IND vs AUS, 1st Test : ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ 5 ತಿಂಗಳ ನಂತರ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ನಾಗ್ಪುರ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ 22 ಓವರ್‌ಗಳಲ್ಲಿ 47 ರನ್ ನೀಡಿ 5 ವಿಕೆಟ್ ಕಬಳಿಸಿದರು. 

ಈ ಸಮಯದಲ್ಲಿ, ರವೀಂದ್ರ ಜಡೇಜಾ ಆಸ್ಟ್ರೇಲಿಯಾದ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಔಟ್ ಮಾಡುವ ಮೂಲಕ ಪ್ರವಾಸಿ ಆಸೀಸ್ ತಂಡವನ್ನು ಬೆರಗುಗೊಳಿಸಿದ್ದಾರೆ. ಬ್ಯಾಟ್ಸ್ ಮನ್ ಸ್ಟೀವ್ ಸ್ಮಿತ್ ಔಟ್ ಮಾಡುವ ಮೂಲಕ ರವೀಂದ್ರ ಜಡೇಜಾ ನಾಗ್ಪುರ ಟೆಸ್ಟ್ ಪಂದ್ಯದಲ್ಲಿ ದಿಢೀರ್ ಸಂಚಲನ ಮೂಡಿಸಿದ್ದು ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಇದನ್ನೂ ಓದಿ : IND vs AUS 1st Test : ದ್ವಿಶತಕ ಸಿಡಿಸಿದ ಈ ಆಟಗಾರನಿಗೆ ಟೀಂನಲ್ಲಿ ಸ್ಥಾನ ನೀಡದೆ ಅನ್ಯಾಯ!

ಜಡೇಜಾ 'ಮ್ಯಾಜಿಕ್ ಬಾಲ್' ಗೆ ಸ್ಮಿತ್ ಮೂಕವಿಸ್ಮಿತ

ಆಸ್ಟ್ರೇಲಿಯನ್ ಇನ್ನಿಂಗ್ಸ್‌ನ 42 ನೇ ಓವರ್‌ನಲ್ಲಿ ಸ್ಟೀವ್ ಸ್ಮಿತ್ ಗೆ ರವೀಂದ್ರ ಜಡೇಜಾ ಒಂದು 'ಮ್ಯಾಜಿಕ್ ಬಾಲ್' ಮೂಲಕ ಸ್ಟಂಪ್ ಮಾಡಿದ್ದಾರೆ. ಜಡೇಜಾ ಹಾಕಿದ ಈ ಬಾಲ್ ಎಷ್ಟು ಅಪಾಯಕಾರಿ ಎಂದರೆ ಕ್ಲೀನ್ ಬೌಲ್ಡ್ ಆದ ನಂತರ ಸ್ಮಿತ್ ತಾನು ಹೇಗೆ ಕ್ಲೀನ್ ಬೌಲ್ಡ್ ಆದೆ ಎಂಬುವುದೇ ನಂಬಲಾಗದೆ ಕೆಲ ನಿಮಿಷಗಳ ಕಾಲ ಸ್ಟಂಪ್ ನೋಡುತ್ತಾ ನಿಂತಿರುವ ಸ್ಮಿತ್  ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

 

107 ಎಸೆತಗಳಲ್ಲಿ 37 ರನ್ ಗಳಿಸಿದ ಸ್ಟೀವ್ ಸ್ಮಿತ್

ಆಸ್ಟ್ರೇಲಿಯಾದ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ 107 ಎಸೆತಗಳಲ್ಲಿ 37 ರನ್ ಗಳಿಸಿ ಔಟಾದರು. ಸ್ಟೀವ್ ಸ್ಮಿತ್‌ಗೆ ಅರ್ಥವಾಗುವ ಮೊದಲೇ ರವೀಂದ್ರ ಜಡೇಜಾ ಎಸೆತದಲ್ಲಿ ಸ್ಟಂಪ್‌ ಔಟ್ ಆದರು. ಅಪಾಯಕಾರಿ ಬ್ಯಾಟ್ಸ್‌ಮನ್ ಸ್ಮಿತ್ ಆಸ್ಟ್ರೇಲಿಯಾ ತಂಡದ ಅರ್ಧದಷ್ಟು ಆಟಗಾರರ ಶಕ್ತಿಯಾಗಿದ್ದಾರೆ, ಒಮ್ಮೆ ಕ್ರೀಸ್‌ನಲ್ಲಿ ಉಳಿದುಕೊಂಡಿದ್ದರೆ ಟೀಂ ಇಂಡಿಯಾವನ್ನು ಪಂದ್ಯದಿಂದ ಹೊರಗಿಡುವ ರೀತಿ ಆಟ ಆಡುತ್ತಿದ್ದರು. ಸ್ಮಿತ್ ಭಾರತ ವಿರುದ್ಧ ಹಲವು ಟೆಸ್ಟ್ ಪಂದ್ಯಗಳಲ್ಲಿ ಶತಕ ಬಾರಿಸಿದ್ದಾರೆ. ರವೀಂದ್ರ ಜಡೇಜಾ ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್‌ನಲ್ಲಿ ಮಾರ್ನಸ್ ಲ್ಯಾಬುಸ್‌ಚಾಗ್ನೆ (49), ಸ್ಟೀವ್ ಸ್ಮಿತ್ (37), ಮ್ಯಾಟ್ ರೆನ್‌ಶಾ (0), ಪೀಟರ್ ಹ್ಯಾಂಡ್ಸ್‌ಕಾಂಬ್ (31) ಮತ್ತು ಟಾಡ್ ಮರ್ಫಿ (0) ಪೆವಿಲಿಯನ್ ವಿಕೆಟ್ ಪಡೆದರು.

ಇದನ್ನೂ ಓದಿ : IND vs AUS : ಆಸ್ಟ್ರೇಲಿಯಾ ವಿರುದ್ದದ ಮೊದಲ ಪಂದ್ಯದಲ್ಲಿಯೇ ಹೊಸ ದಾಖಲೆ ಬರೆದ ಆರ್. ಅಶ್ವಿನ್ !

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News