IPL-2022 ಕ್ರೇಜ್ ಈಗಾಗಲೇ ಎಲ್ಲೆಡೆ ಹಬ್ಬಿದೆ. ಇಂದು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)ಮತ್ತು ಮುಂಬೈ ಇಂಡಿಯನ್ಸ್ (MI) ತಂಡಗಳು ಮುಖಾಮುಖಿಯಾಗಲಿದೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಈ ಪಂದ್ಯವು ಇಬ್ಬರು ವಿಕೆಟ್ ಕೀಪರ್‌ಗಳ ನಡುವಣ ಜಿದ್ದಾಜಿದ್ದಿಗೆ ವೇದಿಕೆಯಾಗುವ ನಿರೀಕ್ಷೆಯಿದೆ.
ಇದನ್ನು ಓದಿ: Will Smith Ban:ವಿಲ್ ಸ್ಮಿತ್‌ಗೆ 10 ವರ್ಷ ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ನಿರ್ಬಂಧ
ಈ ಸೀಸನ್‌ನಲ್ಲಿ ಆರ್‌ಸಿಬಿ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಆಟ ಗೆದ್ದಿದೆ. ಆ ಎರಡು ಪಂದ್ಯಗಳ ಗೆಲುವಿಗೆ ಮುಖ್ಯ ರುವಾರಿಯಾಗಿದ್ದು ದಿನೇಶ್ ಕಾರ್ತಿಕ್ ಆಟ. ಇನ್ನೊಂದೆಡೆ ಇಶಾನ್ ನಿರಂತರವಾಗಿ ಉತ್ತಮ ಸಾಧನೆ ಮಾಡುತ್ತಿದ್ದರೂ ಸಹ ಮುಂಬೈ ತಂಡವು ಒಂದೂ ಪಂದ್ಯದಲ್ಲಿ ಜಯಿಸಿಲ್ಲ ಎಂಬುದು ಗಮನಿಸಬೇಕಾದ ವಿಷಯ. ಹೀಗಾಗಿ ಇಂದು ನಡೆಯುವ ಪಂದ್ಯದಲ್ಲಿ ಯಾರು ತಮ್ಮ ತಂಡಕ್ಕೆ ಜಯದ ಕಾಣಿಕೆ ನೀಡುವರೆಂಬ ಕುತೂಹಲ ಗರಿಗೆದರಿದೆ.
ಇದನ್ನು ಓದಿ: PBKS v GT: 6,6 ತೇವಾಟಿಯಾ ಕೊನೆಯ ಓವರ್ ಥ್ರಿಲ್ಲರ್ ಸಿಕ್ಸರ್ ಗೆ ಬೆಚ್ಚಿದ ಪಂಜಾಬ್ ಕಿಂಗ್ಸ್
ಆರ್‌ಸಿಬಿಯು ಆಡಿದ ಕಳೆದೆರಡೂ ಪಂದ್ಯಗಳಲ್ಲಿ ಅಗ್ರಕ್ರಮಾಂಕದ ಬ್ಯಾಟರ್‌ಗಳು ನಿರೀಕ್ಷೆ ಹುಸಿಗೊಳಿಸಿದ್ದರು. ಆ ಸಂದರ್ಭದಲ್ಲಿ ದಿನೇಶ್ ‘ಫಿನಿಷರ್’ ಆಗಿ ತಂಡವನ್ನು ಗೆಲುವಿನ ಹಾದಿಗೆ ತಲುಪಿಸಿದ್ದರು. ಏಳನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿಯುತ್ತಿರುವ ದಿನೇಶ್ ಅವರನ್ನು ಕಟ್ಟಿಹಾಕಲು ಮುಂಬೈ ಬೌಲರ್‌ಗಳು ವಿಶೇಷ ತಂತ್ರಗಾರಿಕೆ ರೂಪಿಸಲೇಬೇಕು. ಇಲ್ಲದಿದ್ದರೆ ಇನಿಂಗ್ಸ್ ಕೊನೆಯ ಹಂತದ ಓವರ್‌ಗಳಲ್ಲಿ ರನ್‌ಗಳ ಹೊಳೆ ಹರಿಯುವುದನ್ನು ತಡೆಯುವುದು ಕಷ್ಟ.
ಸದ್ಯ ಎರಡೂ ತಂಡಗಳು ಬಲಿಷ್ಟವಾಗಿದ್ದರೂ ಸಹ, ಮುಂಬೈ ಬಳಗ ಕೊಂಚ ಒತ್ತಡದಲ್ಲಿದೆ ಎನ್ನಬಹುದು. ಆದರೆ ಇಂದು ನಡೆಯುವ ಪಂದ್ಯದಲ್ಲಿ ಲೆಕ್ಕಾಚಾರಗಳು ಉಲ್ಟಾಪಲ್ಟಾ ಆಗಲೂಬಹುದು. ಅಷ್ಟೇ ಅಲ್ಲದೆ, ಟಾಸ್ ಗೆದ್ದವರು ತೆಗೆದುಕೊಳ್ಳುವ ನಿರ್ಧಾರವೂ ಇಲ್ಲಿ ಮುಖ್ಯವಾಗಲಿದೆ.
ತಂಡಗಳು
ಬಲಾಬಲ
ಪಂದ್ಯ: 29
ಆರ್‌ಸಿಬಿ ಜಯ: 12
ಮುಂಬೈ ಜಯ: 17
ಗರಿಷ್ಠ ಸ್ಕೋರ್
ಬೆಂಗಳೂರು: 235
ಮುಂಬೈ; 213
ಕನಿಷ್ಠ ಸ್ಕೋರ್
ಬೆಂಗಳೂರು: 122
ಮುಂಬೈ: 111
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.