ನವದೆಹಲಿ: ದಾಖಲೆ ಮಾಡುವುದರಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರು ನಿಸ್ಸಿಮರು. ಈಗ ಅವರು ಆಡುವ ಪ್ರತಿ ಪಂದ್ಯಗಳಲ್ಲಿಯೂ ಕೂಡ ಹೊಸ ದಾಖಲೆಗಳನ್ನು ನಿರ್ಮಿಸುತ್ತಾರೆ.
🙌🙌@ImRo45 sits atop on the list of most runs for India in T20Is. pic.twitter.com/2vLQEVTTfS
— BCCI (@BCCI) November 6, 2018
ಈಗ ರೋಹಿತ್ ಶರ್ಮಾ ಅವರು ಟ್ವೆಂಟಿ ಪಂದ್ಯದಲ್ಲಿ ನಾಲ್ಕನೇ ಶತಕ ಗಳಿಸಿದ್ದಲ್ಲದೆ ತಂಡದ ಸಹ ಆಟಗಾರ ವಿರಾಟ್ ಕೊಹ್ಲಿ ದಾಖಲೆಯನ್ನು ಉಡೀಸ್ ಮಾಡಿದ್ದಾರೆ. ಹೌದು,ಈಗ ರೋಹಿತ್ ಶರ್ಮಾ ಅವರು ಟ್ವೆಂಟಿ ಪಂದ್ಯದಲ್ಲಿ 2117 ರನ್ ಗಳಿಸುವ ಈಗ ಅತಿ ಹೆಚ್ಚು ರನ್ ಗಳನ್ನು ಗಳಿಸಿದ್ದ ಆಟಗಾರ ಎನ್ನುವ ಖ್ಯಾತಿಯನ್ನು ಗಳಿಸಿದ್ದಾರೆ. ಇನ್ನೊಂದೆಡೆಗೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು 2102 ರನ್ ಗಳನ್ನು ಗಳಿಸಿದ್ದಾರೆ. ವಿಶೇಷವೆಂದರೆ ರೋಹಿತ್ ಶರ್ಮಾ ಅವರ ಸ್ಟ್ರೈಕ್ ರೇಟ್ ಕೊಹ್ಲಿ ಅವರಿಗಿಂತ ಅಧಿಕವಿದೆ.
Fireworks on display here at Lucknow 🔥 as @ImRo45 brings up his 4th T20 CENTURY!! pic.twitter.com/CCqILFGczV
— BCCI (@BCCI) November 6, 2018
ಇತ್ತೀಚೆಗಷ್ಟೇ ರೋಹಿತ್ ಶರ್ಮಾ 187 ಇನ್ನಿಂಗ್ಸ್ಗಳಲ್ಲಿ 200 ಸಿಕ್ಸರ್ಗಳನ್ನು ಹೊಡೆಯುವ ಮೂಲಕ ಮಾಜಿ ಪಾಕಿಸ್ತಾನ ಆಲ್ರೌಂಡರ್ ಶಾಹಿದ್ ಅಫ್ರಿದಿ ಅವರ ದಾಖಲೆಯನ್ನು ಅಳಿಸಿ ಹಾಕಿದ್ದರು. ಇನ್ನೊಂಡೆಗೆ 2018 ರಲ್ಲಿ ವಿರಾಟ್ ಕೊಹ್ಲಿ ಮತ್ತು ಜಾನಿ ಬೇರ್ಸ್ಟೋವ್ ನಂತರ 1,000 ಏಕದಿನ ರನ್ಗಳನ್ನು ಪೂರ್ಣಗೊಳಿಸಿರುವ ಮೂರನೇ ಬ್ಯಾಟ್ಸ್ಮನ್ ಎನ್ನುವ ಖ್ಯಾತಿಯನ್ನು ಶರ್ಮಾ ಹೊಂದಿದ್ದಾರೆ.