ಅಂಪೈರ್ ನಿರ್ಧಾರಕ್ಕೆ ಅಸಮಾಧಾನಗೊಂಡ ರೋಹಿತ್ ಮೈದಾನದಲ್ಲಿ ಮಾಡಿದ್ದೇನು ಗೊತ್ತಾ? ವಿಡಿಯೋ ನೋಡಿ

ಎರಡನೇ ಓವರ್‌ನ ನಾಲ್ಕನೇ ಎಸೆತದಲ್ಲಿ, ವೇಯ್ನ್ ಪರ್ನೆಲ್ ಮಾಡಿದ ಬೌಲಿಂಗ್ ಲೆಂಗ್ತ್ ಬಾಲ್ ಲೆಗ್ ಸೈಡ್ ಕೆಳಗೆ ಸ್ವಿಂಗ್ ಆಗಿತ್ತು. ಆದರೆ ಆನ್-ಫೀಲ್ಡ್ ಅಂಪೈರ್ ವೀರೇಂದ್ರ ಶರ್ಮಾ ಅದನ್ನು ವೈಡ್‌ ಎಂದು ಕೊಟ್ಟಿರಲಿಲ್ಲ. ಇದರಿಂದ ರೋಹಿತ್ ಅಸಮಾಧಾನಗೊಂದು ಥರ್ಡ್ ಅಂಪೇರ್ ವಿಮರ್ಶೆಗೆ ಸೂಚನೆ ನೀಡಿದರು.

Written by - Bhavishya Shetty | Last Updated : Oct 2, 2022, 11:42 PM IST
    • ಕ್ರಿಕೆಟ್ ಮೈದಾನದಲ್ಲಿ ಅಸಮಾಧಾನಗೊಂಡ ರೋಹಿತ್ ಶರ್ಮಾ
    • ವೈಡ್ ಬಾಲ್ ಎಂದು ಘೋಷಣೆ ಮಾಡದಕ್ಕೆ ಕೋಪಗೊಂಡ ನಾಯಕ
    • ಈ ದೃಶ್ಯ ಕ್ಯಾಮಾರಾದಲ್ಲಿ ಸೆರೆಯಾಗಿದೆ
ಅಂಪೈರ್ ನಿರ್ಧಾರಕ್ಕೆ ಅಸಮಾಧಾನಗೊಂಡ ರೋಹಿತ್ ಮೈದಾನದಲ್ಲಿ ಮಾಡಿದ್ದೇನು ಗೊತ್ತಾ? ವಿಡಿಯೋ ನೋಡಿ title=
Rohit Sharma

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಇಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರು ಪಂದ್ಯಗಳ T20I ಸರಣಿಯನ್ನು ಗೆದ್ದುಕೊಂಡಿದೆ. ಈ ಮೂಲಕ ಸರಣಿ ಟ್ರೋಫಿ ಪಕ್ಕಾ ಮಾಡಿಕೊಂಡಿದೆ. ಪಂದ್ಯದಲ್ಲಿ ಟಾಸ್ ಗೆದ್ದ ತೆಂಬಾ ಬವುಮಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇನ್ನು ಈ ಸಂದರ್ಭದಲ್ಲಿ ಭಾರತದ ತಂಡವು ತಮ್ಮ ಪ್ಲೇಯಿಂಗ್ XI ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಿಲ್ಲ. ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಆರಂಭಿಕ ಆಟಗಾರರಾಗಿ ಕಣಕ್ಕಿಳಿದಿದ್ದು, ಭರ್ಜರಿ ಬ್ಯಾಟಿಂಗ್ ಮಾಡಿದರು.

ಇದನ್ನೂ ಓದಿ: ಟಿ20Iನಲ್ಲಿ ಹೊಸ ದಾಖಲೆ ನಿರ್ಮಿಸಿದ ಟೀಂ ಇಂಡಿಯಾ: ಭಾರತೀಯರಿಗೆ ಇದು ಹೆಮ್ಮೆಯ ಕ್ಷಣ

ಎರಡನೇ ಓವರ್‌ನ ನಾಲ್ಕನೇ ಎಸೆತದಲ್ಲಿ, ವೇಯ್ನ್ ಪರ್ನೆಲ್ ಮಾಡಿದ ಬೌಲಿಂಗ್ ಲೆಂಗ್ತ್ ಬಾಲ್ ಲೆಗ್ ಸೈಡ್ ಕೆಳಗೆ ಸ್ವಿಂಗ್ ಆಗಿತ್ತು. ಆದರೆ ಆನ್-ಫೀಲ್ಡ್ ಅಂಪೈರ್ ವೀರೇಂದ್ರ ಶರ್ಮಾ ಅದನ್ನು ವೈಡ್‌ ಎಂದು ಕೊಟ್ಟಿರಲಿಲ್ಲ. ಇದರಿಂದ ರೋಹಿತ್ ಅಸಮಾಧಾನಗೊಂದು ಥರ್ಡ್ ಅಂಪೇರ್ ವಿಮರ್ಶೆಗೆ ಸೂಚನೆ ನೀಡಿದರು.

 

 

ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಉತ್ತಮ ಫಾರ್ಮ್‌ನಲ್ಲಿದ್ದರು. ಈ ಜೋಡಿಯು ಎರಡನೇ T20I ನಲ್ಲಿ ಆತಿಥೇಯರ ಪರ ಆರು ಓವರ್‌ಗಳಲ್ಲಿ 57 ರನ್‌ಗಳನ್ನು ಕಲೆ ಹಾಕಿದ್ದರು. ಅಂತಿಮವಾಗಿ ರೋಹಿತ್ ಅವರನ್ನು ಕೇಶವ್ ಮಹಾರಾಜ್ ಔಟ್ ಮಾಡಿದರು. ಆದರೆ ಟೀಂ ಇಂಡಿಯಾ ನಾಯಕ 43 ರನ್ ಬಾರಿಸಿದ್ದಾರೆ. 

ಇದನ್ನೂ ಓದಿ: ವಿಶ್ವದಾಖಲೆ ನಿರ್ಮಿಸಿದ ಕೆ.ಎಲ್.ರಾಹುಲ್ ರೋಹಿತ್ ಶರ್ಮಾ ಜೋಡಿ..!

ನಂತರ ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಅರ್ಧಶತಕಗಳನ್ನು ಬಾರಿಸಿ ಟೀಂ ಇಂಡಿಯಾವನ್ನು ಗೆಲುವಿನ ದಡ ಮುಟ್ಟಿಸಿದರು. ಸದ್ಯ ಟೀಂ ಇಂಡಿಯಾ 16 ರನ್ ಗಳ ಭರ್ಜರಿ ಜಯ ಸಾಧಿಸಿ, ಸರಣಿ ಪಕ್ಕಾ ಮಾಡಿಕೊಂಡಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News