IPL 2023: ರೋಹಿತ್ ಶರ್ಮಾ ಇನ್ಮುಂದೆ IPL ಆಡುವುದಿಲ್ಲ? ಗವಾಸ್ಕರ್ ಹೇಳಿಕೆಯಿಂದ ಸಂಚಲನ ಸೃಷ್ಟಿ!

Sunil Gavaskar statement on Rohit Sharma: ಲೆಜೆಂಡರಿ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಅವರು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅವರಿಗೆ ಐಪಿಎಲ್ 2023 ರ ಮಧ್ಯದಲ್ಲಿ ವಿರಾಮ ತೆಗೆದುಕೊಳ್ಳುವಂತೆ ಪ್ರಮುಖ ಸಲಹೆಯನ್ನು ನೀಡಿದ್ದಾರೆ.

Written by - Bhavishya Shetty | Last Updated : Apr 26, 2023, 02:50 PM IST
    • ಪಂದ್ಯಕ್ಕೂ ಮುನ್ನ ನಾಯಕ ರೋಹಿತ್ ಶರ್ಮಾ ಫಾರ್ಮ್ ತಂಡದ ಟೆನ್ಷನ್ ಹೆಚ್ಚಿಸಿದೆ.
    • ಅವರು ಐಪಿಎಲ್ 2023 ರಲ್ಲಿ ನಿರಂತರವಾಗಿ ಸೋಲು ಕಂಡಿದ್ದಾರೆ.
    • ಅನುಭವಿ ಆಟಗಾರ ಸುನಿಲ್ ಗವಾಸ್ಕರ್ ರೋಹಿತ್ ಶರ್ಮಾಗೆ ಮಹತ್ವದ ಸಲಹೆ ನೀಡಿದ್ದಾರೆ
IPL 2023: ರೋಹಿತ್ ಶರ್ಮಾ ಇನ್ಮುಂದೆ IPL ಆಡುವುದಿಲ್ಲ? ಗವಾಸ್ಕರ್ ಹೇಳಿಕೆಯಿಂದ ಸಂಚಲನ ಸೃಷ್ಟಿ!  title=
Rohit Sharma

Sunil Gavaskar statement on Rohit Sharma: IPL 2023 ರ ನಂತರ ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯವನ್ನು ಆಡಲು ಟೀಂ ಇಂಡಿಯಾ ಇಂಗ್ಲೆಂಡ್‌’ಗೆ  ಪ್ರಯಾಣ ಬೆಳೆಸಬೇಕಿದೆ. ಈ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಈ ಅಮೋಘ ಪಂದ್ಯಕ್ಕೂ ಮುನ್ನ ನಾಯಕ ರೋಹಿತ್ ಶರ್ಮಾ ಫಾರ್ಮ್ ತಂಡದ ಟೆನ್ಷನ್ ಹೆಚ್ಚಿಸಿದೆ. ಅವರು ಐಪಿಎಲ್ 2023 ರಲ್ಲಿ ನಿರಂತರವಾಗಿ ಸೋಲು ಕಂಡಿದ್ದಾರೆ. ಹೀಗಿರುವಾಗ ಟೀಂ ಇಂಡಿಯಾದ ಮಾಜಿ ಅನುಭವಿ ಆಟಗಾರ ಸುನಿಲ್ ಗವಾಸ್ಕರ್ ರೋಹಿತ್ ಶರ್ಮಾಗೆ ಮಹತ್ವದ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Virat-Anushka: ವಿರಾಟ್-ಅನುಷ್ಕಾ ಸೇವಿಸಿದ ಕಾರ್ನರ್ ಐಸ್ ಕ್ರೀಂ ಬೆಲೆ ಎಷ್ಟು ಗೊತ್ತಾ? ಬೆಂಗಳೂರಿನಲ್ಲಿ ಸಖತ್ ಫೇಮಸ್ ಇದು

ಲೆಜೆಂಡರಿ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಅವರು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅವರಿಗೆ ಐಪಿಎಲ್ 2023 ರ ಮಧ್ಯದಲ್ಲಿ ವಿರಾಮ ತೆಗೆದುಕೊಳ್ಳುವಂತೆ ಪ್ರಮುಖ ಸಲಹೆಯನ್ನು ನೀಡಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC Final 2023) ಫೈನಲ್‌’ಗೆ ರೋಹಿತ್ ಶರ್ಮಾ ಫಿಟ್ ಆಗಿದ್ದಾರೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ 2023 (IPL 2023) ನ 35ನೇ ಪಂದ್ಯವು ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ (GT vs MI) ನಡುವೆ ನಡೆದಿತ್ತು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಪ್ಲಾಪ್ ಆಗಿದ್ದು, ತಂಡವೂ ಸೋಲನುಭವಿಸಬೇಕಾಯಿತು. ಇದಾದ ಬಳಿಕ ಗವಾಸ್ಕರ್ ರೋಹಿತ್’ಗೆ ಈ ಸಲಹೆ ನೀಡಿದ್ದಾರೆ.

ಐಪಿಎಲ್ 2023ರ ಫೈನಲ್ ಮೇ 28ರಂದು ನಡೆಯಲಿದೆ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಜೂನ್ 7 ರಿಂದ ಪ್ರಾರಂಭವಾಗುತ್ತದೆ. ಟೀಂ ಇಂಡಿಯಾದ ಆಟಗಾರರಿಗೆ ವಿಶ್ರಾಂತಿ ಪಡೆಯಲು ಕಡಿಮೆ ಸಮಯ ಸಿಗಲಿದೆ. ಅಂತಹ ಪರಿಸ್ಥಿತಿಯಲ್ಲಿ, ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ನಂತರ ರೋಹಿತ್ ಶರ್ಮಾ ಬಗ್ಗೆ ಮಾತನಾಡುತ್ತಾ ಸುನಿಲ್ ಗವಾಸ್ಕರ್ ಹೀಗೆ ಹೇಳಿದ್ದಾರೆ.

“ರೋಹಿತ್ ಶರ್ಮಾ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಮುನ್ನ ವಿಶ್ರಾಂತಿ ತೆಗೆದುಕೊಳ್ಳಬೇಕು. ಐಪಿಎಲ್‌ನ ಕೊನೆಯ ಕೆಲವು ಪಂದ್ಯಗಳಿಗೆ ಹಿಂತಿರುಗಿ, ಆದರೆ ಅದಕ್ಕೂ ಮುನ್ನ ಕೊಂಚ ವಿಶ್ರಾಂತಿ ಬೇಕು ಎಂದು ನಾನು ಭಾವಿಸುತ್ತೇನೆ” ಎಂದರು.

ಇದನ್ನೂ ಓದಿ: Team Indiaಗೆ ಸಿಕ್ಕಾಯ್ತು ಬುಮ್ರಾ ತರಹದ ಬೌಲರ್! IPLನಲ್ಲಿ ಅಬ್ಬರಿಸುತ್ತಿರುವ ಈತ ಆಟೋ ಡ್ರೈವರ್’ನ ಮಗ

ಐಪಿಎಲ್ 2023 ರಲ್ಲಿ ರೋಹಿತ್ ಸಾಧನೆ:

ರೋಹಿತ್ ಶರ್ಮಾ ಇದುವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ 2023 (ಐಪಿಎಲ್ 2023) ನಲ್ಲಿ ತಮ್ಮ ಛಾಪು ಮೂಡಿಸಲು ವಿಫಲರಾಗಿದ್ದಾರೆ. ಈ ಋತುವಿನಲ್ಲಿ ಅವರು ಇನ್ನಿಂಗ್ಸ್ ಆಡಲು ಹೆಣಗಾಡುತ್ತಿದ್ದಾರೆ. ಮೊದಲ 7 ಪಂದ್ಯಗಳಲ್ಲಿ, ನಾಯಕ ರೋಹಿತ್ ಕೇವಲ 134 ರನ್ ಗಳಿಸಿದ್ದಾರೆ, ಇದರಲ್ಲಿ 1 ಅರ್ಧಶತಕವನ್ನು ಸೇರಿದೆ. ರೋಹಿತ್ ಶರ್ಮಾ ಅವರ ಈ ಕಳಪೆ ಫಾರ್ಮ್ ಮುಂಬೈ ಇಂಡಿಯನ್ಸ್ ಹಾಗೂ ಟೀಂ ಇಂಡಿಯಾಗೆ ದೊಡ್ಡ ಟೆನ್ಶನ್ ಆಗಿ ಪರಿಣಮಿಸಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News