IPL 2023: ರೋಚಕ ಪಂದ್ಯದ ಕೊನೆಯ ಓವರ್’ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸನ್’ರೈಸರ್ಸ್ ಹೈದರಾಬಾದ್‌ನಿಂದ ಗೆಲುವನ್ನು ಕಸಿದುಕೊಂಡಿತು. ಇನ್ನು ಈ ಗೆಲುವಿನ ಶ್ರೇಯಸ್ಸು ಮುಖೇಶ್ ಕುಮಾರ್ ಅವರಿಗೆ ಸಲ್ಲುತ್ತದೆ. ಕೊನೆಯ ಓವರ್’ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಗೆಲುವಿಗೆ 13 ರನ್‌ಗಳ ಅಗತ್ಯವಿತ್ತು, ಅದಾಗಲೇ 6 ವಿಕೆಟ್ ಕಳೆದುಕೊಂಡಿತ್ತು ಟೀಂ.
ಇದನ್ನೂ ಓದಿ: Virat-Anushka: ವಿರಾಟ್-ಅನುಷ್ಕಾ ಸೇವಿಸಿದ ಕಾರ್ನರ್ ಐಸ್ ಕ್ರೀಂ ಬೆಲೆ ಎಷ್ಟು ಗೊತ್ತಾ? ಬೆಂಗಳೂರಿನಲ್ಲಿ ಸಖತ್ ಫೇಮಸ್ ಇದು
ಸನ್ ರೈಸರ್ಸ್ ಹೈದರಾಬಾದ್ (SRH) ತಂಡದ ಪರ ವಾಷಿಂಗ್ಟನ್ ಸುಂದರ್ ಮತ್ತು ಮಾರ್ಕೊ ಯಾನ್ಸೆನ್ ಕ್ರೀಸ್’ನಲ್ಲಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕಾಗಿ ವೇಗದ ಬೌಲರ್ ಮುಖೇಶ್ ಕುಮಾರ್ ಪಂದ್ಯದ ಕೊನೆಯ ಓವರ್ ಮಾಡಲು ಬಂದರು.
ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಮುಖೇಶ್ ಕುಮಾರ್ ಕೊನೆಯ ಓವರ್’ನಲ್ಲಿ ಕೇವಲ 5 ರನ್ ನೀಡಿ ತಂಡಕ್ಕೆ ಜಯ ತಂದುಕೊಟ್ಟರು. ಡೆಲ್ಲಿ ಕ್ಯಾಪಿಟಲ್ಸ್ 7 ರನ್’ಗಳಿಂದ ಸನ್’ರೈಸರ್ಸ್ ಹೈದರಾಬಾದ್ ಅನ್ನು ಸೋಲಿಸಿತು.
ಮುಕೇಶ್ ಕುಮಾರ್ ಹಿನ್ನೆಲೆಯನ್ನು ನೋಡವುದಾದರೆ, ಮೊದಲು ಗೋಪಾಲಗಂಜ್’ನಲ್ಲಿ ಕ್ರಿಕೆಟ್ ಆಡುತ್ತಿದ್ದರು, ಇದಾದ ನಂತರ ಬಿಹಾರ ಪರ 19 ವರ್ಷದೊಳಗಿನವರ ಕ್ರಿಕೆಟ್ ಆಡಿದ್ದರು. ಇವರ ತಂದೆ ಉದ್ಯೋಗ ನಿಮಿತ್ತ ಕೋಲ್ಕತ್ತಾಗೆ ಬಾ ಎಂದು ಕರೆದಿದ್ದರು. ಇನ್ನು ಮುಖೇಶ್ ಅವರ ತಂದೆ ಕೋಲ್ಕತ್ತಾದಲ್ಲಿ ಆಟೋ ಓಡಿಸುತ್ತಿದ್ದರು. ಮುಖೇಶ್ ಕುಮಾರ್ ಸಿಆರ್‌ಪಿಎಫ್ (ಕೇಂದ್ರ ಮೀಸಲು ಪೊಲೀಸ್ ಪಡೆ)ಗೆ ಪ್ರವೇಶ ಪಡೆಯಲು ಇನ್ನಿಲ್ಲದ ಹರಸಾಹಸ ಪಟ್ಟಿದ್ದರು. ಆದರೆ ಮೂರು ಬಾರಿ ವೈದ್ಯಕೀಯ ಪರೀಕ್ಷೆಯಲ್ಲಿ ವಿಫಲರಾದರು. ಕಡೆಗೆ ಕೊಲ್ಕತ್ತಾ ತೆರಳಿ ಅಲ್ಲಿ ಕ್ರಿಕೆಟ್ ಆಡಲು ಆರಂಭಿಸಿದರು.
ಇದನ್ನೂ ಓದಿ: Old Pension: ಹಳೆ ಪಿಂಚಣಿ ಯೋಜನೆ ಬಗ್ಗೆ ಬಿಗ್ ಅಪ್ಡೇಟ್! OPS ಜಾರಿ ನಿರ್ಧಾರ ಹಿಂತೆಗೆದುಕೊಳ್ಳುತ್ತಾ ಕೇಂದ್ರ?
ಮುಖೇಶ್ ಕುಮಾರ್ ಬಲಗೈ ವೇಗದ ಬೌಲರ್ ಮತ್ತು ಎಡಗೈ ಬ್ಯಾಟ್ಸ್‌ಮನ್. ಮುಖೇಶ್ 39 ಪ್ರಥಮ ದರ್ಜೆ ಪಂದ್ಯಗಳಲ್ಲಿ 149 ವಿಕೆಟ್ ಪಡೆದಿದ್ದಾರೆ. ಬಿಹಾರದ ಸಾಮಾನ್ಯ ಕುಟುಂಬಕ್ಕೆ ಸೇರಿದ ಮುಖೇಶ್ ಕುಮಾರ್ ಅವರನ್ನು ಐಪಿಎಲ್ 2023 ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 5.50 ಕೋಟಿ ರೂ.ಗೆ ಖರೀದಿಸಿತ್ತು. ಅವರ ಮೂಲ ಬೆಲೆ ಕೇವಲ 20 ಲಕ್ಷ ರೂಪಾಯಿಗಳಾಗಿದ್ದರೂ, ಅವರ ಮೂಲ ಬೆಲೆಗಿಂತ ಸುಮಾರು 28 ಪಟ್ಟು ಹೆಚ್ಚು ದುಡ್ಡಿಗೆ ಹರಾಜು ಮಾಡಲಾಗಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.