Royal Challengers Bangalore: IPL 2024 ಋತುವಿನ ಮೊದಲ ಪಂದ್ಯವು ಇಂದು ಅಂದರೆ ಮಾರ್ಚ್ 22 ರಂದು ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಾದಾಡಲಿದ್ದು, ಎಂದಿನಂತೆ ಟೂರ್ನಿಯ ಮೊದಲ ಪಂದ್ಯದ ಬಗ್ಗೆ ಕುತೂಹಲ ಹೆಚ್ಚಿದೆ.
ಆದರೆ ಎಂಎಸ್ ಧೋನಿ ಚೆನ್ನೈ ತಂಡದ ನಾಯಕತ್ವವನ್ನು ತೊರೆದು ರುತುರಾಜ್ ಗಾಯಕ್ವಾಡ್’ಗೆ ವಹಿಸಿದ್ದಾರೆ. ಇದು ಎಲ್ಲರನ್ನೂ ಅಚ್ಚರಿಗೊಳಿಸಿದ್ದು ಮಾತ್ರವಲ್ಲದೆ, ಬೆಂಗಳೂರು ಅಭಿಮಾನಿಗಳ ಮನದಲ್ಲಿ ಭರವಸೆ ಮೂಡಿಸಿದೆ. ಅಂದರೆ 2008ರ ಯಶಸ್ಸನ್ನು 16 ವರ್ಷಗಳ ನಂತರ ಪುನರಾವರ್ತಿಸಲು ಸಾಧ್ಯವಾಗಬಹುದೇನೋ ಎಂಬ ಭರವಸೆಯಲ್ಲಿದ್ದಾರೆ.
ಇದನ್ನೂ ಓದಿ: ಆರ್‌ಸಿಬಿಯಲ್ಲಿರುವ ಧೋನಿ ಸ್ನೇಹಿತನಿಂದಲೇ CSKಕೆಗೆ ಸೋಲು ಪಕ್ಕಾ!
ಚೆನ್ನೈ ಮತ್ತು ಬೆಂಗಳೂರು ನಡುವೆ ವಿಭಿನ್ನ ರೀತಿಯ ಪೈಪೋಟಿ ಇದೆ. ಒಂದು ಕಡೆ ಸತತ ಚಾಂಪಿಯನ್, ಇನ್ನೊಂದು ಬದಿಯಲ್ಲಿ ನಿರಂತರವಾಗಿ ಹೋರಾಡಿದರೂ ಟ್ರೋಫಿ ಗೆಲ್ಲಲು ಸಾಧ್ಯವಾಗದ ತಂಡ. ಚೆನ್ನೈ 5 ಬಾರಿ ಪ್ರಶಸ್ತಿ ಗೆದ್ದಿದ್ದರೆ, ಬೆಂಗಳೂರು ಒಮ್ಮೆಯೂ ಯಶಸ್ಸು ಸಾಧಿಸಲು ಸಾಧ್ಯವಾಗಿಲ್ಲ.
ಅಂದಹಾಗೆ ಒಂದೊಮ್ಮೆ ಚೆನ್ನೈ ಫೈನಲ್’ನಲ್ಲಿ ಬೆಂಗಳೂರನ್ನು ಸೋಲಿಸಿತ್ತು. ಇದಲ್ಲದೇ ಒಟ್ಟಾರೆ ಅಂಕಿ ಅಂಶಗಳಲ್ಲಿಯೂ ಚೆನ್ನೈಗೆ ಭಾರಿ ಅನುಕೂಲವಿದೆ. ಅದೇನೆಂದರೆ ಪೈಪೋಟಿಯ ವಿಷಯದಲ್ಲಿ ಇದು ಏಕಪಕ್ಷೀಯ. ಆದರೆ ಥ್ರಿಲ್ ಮತ್ತು ಸ್ಟಾರ್ ಪವರ್ ವಿಷಯಕ್ಕೆ ಬಂದಾಗ ಸಮಾನ ಸ್ಪರ್ಧೆಯಲ್ಲಿದೆ ಉಭಯ ತಂಡಗಳು.
ಚೆಪಾಕ್’ನಲ್ಲಿ ಬೆಂಗಳೂರಿಗೆ ಸಂಕಷ್ಟ:
ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು 31 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಚೆನ್ನೈ 20 ಬಾರಿ ಗೆದ್ದಿದ್ದರೆ, ಬೆಂಗಳೂರು 10 ಬಾರಿ ಮಾತ್ರ ಗೆಲುವು ಸಾಧಿಸಿದೆ. ಒಂದು ಪಂದ್ಯ ಅನಿರ್ದಿಷ್ಟವಾಗಿದೆ. ಚೆನ್ನೈನ ತವರು ಮೈದಾನವಾದ ಚೆಪಾಕ್’ನಲ್ಲಿ ಉಭಯ ತಂಡಗಳು ಒಟ್ಟು 8 ಬಾರಿ ಕಾದಾಡಿದೆ. ಈ ಸಂದರ್ಭದಲ್ಲಿ ಚೆನ್ನೈ 7 ಬಾರಿ ಗೆದ್ದಿದ್ದರೆ, ಬೆಂಗಳೂರು ಒಂದು ಬಾರಿ ಮಾತ್ರ ಯಶಸ್ವಿಯಾಗಿದೆ.
ಬೆಂಗಳೂರಿನ ಈ ಏಕೈಕ ಯಶಸ್ಸು 16 ವರ್ಷಗಳ ಹಿಂದೆ 2008 ರಲ್ಲಿ ಅಂದರೆ IPL ನ ಮೊದಲ ಋತುವಿನಲ್ಲಿ ಕಂಡಿತ್ತು. ಅಂದಿನಿಂದ ಬೆಂಗಳೂರು ಯಾವಾಗಲೂ ಚೆಪಾಕ್’ನಲ್ಲಿ ಚೆನ್ನೈ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಹೀಗಾಗಿಯೇ ಚೆನ್ನೈ ವಿರುದ್ಧ ಬೆಂಗಳೂರಿನ ದಾಖಲೆ ಕೆಟ್ಟದಾಗಿದೆ.
ಇದನ್ನೂ ಓದಿ: RCB vs CSK… IPL 2024ರ ಮೊದಲ ಪಂದ್ಯದಲ್ಲಿ ಈ ತಂಡಕ್ಕೆ ಗೆಲುವು ಫಿಕ್ಸ್! ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ
ಧೋನಿ ನಾಯಕತ್ವ ತೊರೆಯುವುದರಿಂದ ಲಾಭವಿದೆಯೇ?
2008 ರಿಂದ ಧೋನಿ ಚೆನ್ನೈ ತಂಡದ ನಾಯಕರಾಗಿದ್ದರು ಎಂಬುದು ಈಗ ಎಲ್ಲರಿಗೂ ತಿಳಿದಿದೆ. ಜೊತೆಗೆ ಚೆನ್ನೈ ಮೈದಾನದಲ್ಲಿ ಬೆಂಗಳೂರಿನ ಪ್ರತಿಯೊಂದು ಸೋಲು ಧೋನಿ ನಾಯಕತ್ವದ ತಂಡದ ವಿರುದ್ಧವೇ ಸಂಭವಿಸಿತ್ತು. ಚೆನ್ನೈ ಆಟಗಾರರ ಬಲಿಷ್ಠ ಪ್ರದರ್ಶನದ ಜೊತೆಗೆ ಧೋನಿಯ ವರ್ಚಸ್ವಿ ನಾಯಕತ್ವವೂ ಇದರಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ. ಹೀಗಿರುವಾಗ ಈಗ ಧೋನಿ ತಂಡದ ನಾಯಕನಲ್ಲ, ಬಹುಶಃ 16 ವರ್ಷ ಹಳೆಯ ಯಶಸ್ಸು ಈ ಬಾರಿ ಮರುಕಳಿಸಬಹುದೆಂಬ ನಿರೀಕ್ಷೆ ಬೆಂಗಳೂರಿನ ಅಭಿಮಾನಿಗಳದ್ದು. ಆದರೆ ಋತುರಾಜ್ ನಾಯಕರಾಗಿದ್ದರೂ ಧೋನಿ ಇನ್ನೂ ಮೈದಾನದಲ್ಲಿ ಇದ್ದಾರೆ, ಹೀಗಿರುವಾಗ ಬೆಂಗಳೂರಿನ ಹಾದಿ ಇನ್ನೂ ಕಷ್ಟಕರವಾಗಿರುವುದಂತು ಸುಳ್ಳಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ